ನವದೆಹಲಿ:ವಿಸ್ತಾರ ವಿಮಾನಯಾನಕ್ಕೆ ನಾಗರಿಕ ವಿಮಾನಯಾನ ಸಚಿವಾಲಯ ಭಾರೀ ದಂಢ ವಿಧಿಸಿದೆ. ಪೈಲೆಟ್​ ಮಾಡಿದ ಅವಾಂತರದಿಂದ ವಿಸ್ತಾರ ವಿಮಾನಯಾನ ಸಂಸ್ಥೆ ಬರೋಬ್ಬರಿ 10 ಲಕ್ಷ ರೂ. ದಂಡ ತೆರಬೇಕಿದೆ.
ಪ್ರಯಾಣಿಕರಿದ್ದ ವಿಮಾನವನ್ನು ತರಬೇತಿ ಇಲ್ಲದ ಪೈಲೆಟ್​​ನಿಂದ ಲ್ಯಾಂಡ್​ ಮಾಡಿಸಿದ್ದರಿಂದ ಡಿಜಿಸಿಎ ದಂಡ ವಿಧಿಸಿದೆ. ಮಧ್ಯಪ್ರದೇಶದ ಇಂದೋರ್​​ನಲ್ಲಿ ಇತ್ತೀಚೆಗೆ ಈ ಘಟನೆ ನಡೆದಿದೆ.
ತರಬೇತಿ ಪಡೆಯದ ಪೈಲೆಟ್​​ ಪ್ರಯಾಣಿಕರಿದ್ದ ವಿಮಾನವನ್ನು ಲ್ಯಾಂಡಿಂಗ್​ ಮಾಡಿದ್ದರು. ಇದೀಗ ಇದು ಭಾರೀ ಚರ್ಚೆಗೂ ಗ್ರಾಸವಾಗಿದೆ. ತರಬೇತಿ ಇಲ್ಲದ ಪೈಲೆಟ್​ಗಳಿಗೆ ಅನುಮತಿ ನೀಡಿದ ವಿಸ್ತಾರ ಸಂಸ್ಥೆಗೆ ಡಿಜಿಸಿಎ ತರಾಟೆಗೆ ತೆಗೆದುಕೊಂಡಿದೆ.
ವಿಮಾನದ ಕ್ಯಾಪ್ಟನ್​ ಅಥವಾ ಸಿಮ್ಯುಲೇಟರ್​ನಲ್ಲಿ ತರಬೇತಿ ಪಡೆಯದೆ ಇಳಿಸಲಾಗಿದ್ದು, ಇದು ವಿಮಾನದಲ್ಲಿದ್ದ ಪ್ರಯಾಣಿಕರ ಜೀವಕ್ಕೆ ಅಪಾಯವನ್ನುಂಟುಮಾಡುವ ಗಂಭೀರ ಉಲ್ಲಂಘನೆಯಾಗಿದೆ. ಹಾಗಾಗಿ 10 ಲಕ್ಷ ರೂ. ದಂಡವನ್ನು ಪಾವತಿಸಬೇಕು ಎಂದು ಡಿಜಿಸಿಎ ತಿಳಿಸಿದೆ. ಸದ್ಯಕ್ಕೆ ಈ ವಿಮಾನ ಎಲ್ಲಿಂದ ಟೇಕ್​ಆಫ್​ ಆಗಿದೆ ಎಂಬ ಬಗ್ಗೆ ಸಂಸ್ಥೆ ಸ್ಪಷ್ಟನೆ ನೀಡಿಲ್ಲ.(ಏಜೆನ್ಸೀಸ್​)
ಮೋದಿ ಹೇಳಿಕೊಟ್ಟ ಸಾಬುದಾನಿ ಖಿಚಡಿ: ಪ್ರಧಾನಿಯ ಅಡುಗೆ ಗುಟ್ಟು ಬಿಚ್ಚಿಟ್ಟ ಬಿಜೆಪಿ ಮುಖಂಡ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − 4 =
Remember me
