ನವದೆಹಲಿ:ಲೂಧಿಯಾನದ ಡಾಬಾದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದ್ದು, ಮಾಂಸಾಹಾರಿ ಖಾದ್ಯದಲ್ಲಿ ಸತ್ತ ಇಲಿ ಪತ್ತೆಯಾಗಿದೆ ಎಂದು ಹೇಳಲಾಗಿದೆ. ಇದರಿಂದ ನೊಂದ ಕುಟುಂಬವು ಸಾಮಾಜಿಕ ಮಾಧ್ಯಮದಲ್ಲಿ ಶೇರ್​ ಮಾಡಿದ ವಿಡಿಯೋ ವೈರಲ್ ಆಗಿದೆ.
ಫೀಲ್ಡ್ ಗಂಜ್ ಪ್ರದೇಶದ ಪ್ರೇಮ್ ನಗರದ ನಿವಾಸಿ ವಿವೇಕ್ ಕುಮಾರ್ ಎಂಬವರು ನೀಡಿದ ದೂರಿನ ಆಧಾರದ ಮೇಲೆ ಲೂಧಿಯಾನ ನಗರ ಪೊಲೀಸರು ಉಪಹಾರ ಗೃಹದ ಮಾಲೀಕರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡು ಕ್ಷಿಪ್ರ ಕ್ರಮ ಕೈಗೊಂಡಿದ್ದಾರೆ. ರವಿವಾರ ತಡವಾಗಿ ಭೇಟಿ ನೀಡಿದಾಗ ವಿಶ್ವಕರ್ಮ ಚೌಕ್ ಬಳಿಯ ಪ್ರಕಾಶ್ ಧಾಬಾದಲ್ಲಿ ಆರ್ಡರ್ ಮಾಡಿದ್ದ ಆಹಾರದಲ್ಲಿ ಸತ್ತ ಇಲಿಯನ್ನು ಕಂಡು ಅವರು ಮತ್ತು ಅವರ ಕುಟುಂಬ ಅನಾರೋಗ್ಯಕ್ಕೆ ಒಳಗಾಗಿತ್ತು ಎಂದು ಕುಮಾರ್ ಹೇಳಿದ್ದಾರೆ.
ಇದನ್ನೂ ಓದಿ:ಚಿಕಿತ್ಸೆಗೆಂದು ಬಂದಿದ್ದ ರೋಗಿಗಳ ಕಾಲಿಗೆ ಕಚ್ಚಿದ ಇಲಿಗಳು, ಸರ್ಕಾರಿ ಆಸ್ಪತ್ರೆ ಸ್ಥಿತಿ ಕಂಡು ಬೆಚ್ಚಿಬಿದ್ದ ಜನ
ಕುಮಾರ್ ಪ್ರಕಾರ, ಊಟದ ಒಂದು ಭಾಗವನ್ನು ತಿಂದ ನಂತರ ಏನೋ ತಪ್ಪಾಗಿದೆ ಎಂದೆನಿಸಿದ್ದು ಸೂಕ್ಷ್ಮವಾಗಿ ಗಮನಿಸಿದಾಗ ಅವರಲ್ಲಿದ್ದ ಅನುಮಾನ ದೃಢವಾಗಿದೆ. ಸೂಕ್ಷ್ಮವಾಗಿ ಪರಿಶೀಲಿಸಿದಾಗ, ಭಕ್ಷ್ಯದಲ್ಲಿ ಸತ್ತ ಇಲಿಯನ್ನು ಕಂಡು ಅವರು ಆಘಾತಕ್ಕೊಳಗಾದರು. ಸಂತ್ರಸ್ತ ಕುಮಾರ್, ಡಾಬಾ ಮಾಲೀಕನೊಂದಿಗೆ ವಿಷಯ ಪ್ರಸ್ತಾಪಿಸಿದಾಗ, ಅವರು ಅಸಭ್ಯವಾಗಿ ಪ್ರತಿಕ್ರಿಯಿಸಿ ಬೆದರಿಕೆಗಳನ್ನೂ ಹಾಕಿದ್ದಾರೆ ಎನ್ನಲಾಗಿದೆ. ಇದರಿಂದಾಗಿ ದುಃಖಿತರಾದ ಕುಮಾರ್, ಘಟನೆಯನ್ನು ವೀಡಿಯೊ ಮೂಲಕ ಸೆರೆಹಿಡಿದು ವಿವಿಧ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಹಂಚಿಕೊಂಡಿದ್ದಾರೆ. ಕಲುಷಿತ ಆಹಾರವನ್ನು ಸೇವಿಸಿದ ನಂತರ ಕುಟುಂಬವು ಅಸ್ವಸ್ಥರಾಗಿದ್ದಾರೆ ಎನ್ನಲಾಗಿದೆ.
Parkash dhaba Ludhiana. India Serve rat in chicken curry. Restaurant owner bribe the food inspector and go free??? Very poor standards in Kitchen of many Indian restaurants. Be aware .pic.twitter.com/chIV59tbq5— INDO-UK tweeter (@NrIndiapolo)July 3, 2023
Parkash dhaba Ludhiana. India Serve rat in chicken curry. Restaurant owner bribe the food inspector and go free??? Very poor standards in Kitchen of many Indian restaurants. Be aware .pic.twitter.com/chIV59tbq5
ದೂರಿನ ಪರಿಣಾಮವಾಗಿ, ಡಾಬಾ ಮಾಲೀಕರ ವಿರುದ್ಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 273 (ಹಾನಿಕಾರಕ ಆಹಾರ ಅಥವಾ ಪಾನೀಯ ಮಾರಾಟ) ಮತ್ತು 269 (ನಿರ್ಲಕ್ಷ್ಯದಿಂದ ಜೀವಕ್ಕೆ ಅಪಾಯಕಾರಿ ರೋಗವನ್ನು ಹರಡುವ ಸಾಧ್ಯತೆ) ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.
ಇದನ್ನೂ ಓದಿ:ತಾಯಿಯಾಗುತ್ತಿರುವ ಖುಷಿ ಹಂಚಿಕೊಂಡ ಇಲಿಯಾನಾ! ಗೋವಾ ಬ್ಯೂಟಿಗೆ ಹರಿದುಬಂತು ಪ್ರಶ್ನೆಗಳ ಸುರಿಮಳೆ
ಘಟನೆಗೆ ಪ್ರತಿಕ್ರಿಯೆಯಾಗಿ, ಡಾಬಾ ಮಾಲೀಕ ಸಾಮಾಜಿಕ ಮಾಧ್ಯಮದಲ್ಲಿ ಕೌಂಟರ್ ವೀಡಿಯೊವನ್ನು ಬಿಡುಗಡೆ ಮಾಡಿದ್ದು, ಅತೃಪ್ತ ಗ್ರಾಹಕರು ಈ ಹಿಂದೆ ತಮ್ಮ ಮ್ಯಾನೇಜರ್​ ಡಿಸ್ಕೌಂಟ್​ ನೀಡುವುದನ್ನು ನಿರಾಕರಿಸಿದ್ದ ಬಗ್ಗೆ ವಾಗ್ವಾದದಲ್ಲಿ ತೊಡಗಿದ್ದರು ಎಂದು ಹೇಳಿದ್ದಾನೆ. ಗ್ರಾಹಕ ಕುಮಾರ್ ಸಂಸ್ಥೆಯ ಮಾನಹಾನಿ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಮಾಲೀಕ ಆರೋಪಿಸಿದ್ದಾನೆ.(ಏಜೆನ್ಸೀಸ್)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 − 11 =
Remember me
