ರಾಂಚಿ​:ಬೆಳಗಿನ ಜಾಗಿಂಗ್ ಹೋಗಿದ್ದ ನ್ಯಾಯಾಧೀಶರೊಬ್ಬರು ಅನುಮಾನಾಸ್ಪದ ‘ಅಪಘಾತ’ಕ್ಕೀಡಾಗಿ ಮೃತಪಟ್ಟಿದ್ದ ಪ್ರಕರಣದ ತನಿಖೆಯಲ್ಲಿನ ಪ್ರಗತಿಯ ಬಗ್ಗೆ ಝಾರ್ಕಂಡ್​ ಹೈಕೋರ್ಟ್​ ಅಸಮಾಧಾನ ವ್ಯಕ್ತಪಡಿಸಿದೆ. ಈ ಹಿನ್ನೆಲೆಯಲ್ಲಿ ಸಿಬಿಐ ನಿರ್ದೇಶಕರಿಗೆ ಅ.29 ರಂದು ನಡೆಯಲಿರುವ ಪ್ರಕರಣದ ಮುಂದಿನ ವಿಚಾರಣೆ ವೇಳೆ ವಿಡಿಯೋ ಕಾನ್ವರೆನ್ಸ್​ ಮುಖಾಂತರ ಹಾಜರಿರಬೇಕೆಂದು ಹೈಕೋರ್ಟ್​ ಸೂಚನೆ ನೀಡಿದೆ.
ಕಳೆದ ಜುಲೈ 28 ರಂದು ರಾಜ್ಯದ ಧನಬಾದ್​​​ ಜಿಲ್ಲಾ ಮತ್ತು ಹೆಚ್ಚುವರಿ ನ್ಯಾಯಾಧೀಶರಾಗಿದ್ದ ಉತ್ತಮ್ ಆನಂದ್​ ಅವರು ಸಾವಪ್ಪಿದ್ದು, ಪೊಲೀಸರು ಹಿಟ್​ ಅಂಡ್​ ರನ್​ ಪ್ರಕರಣ ದಾಖಲಿಸಿದ್ದರು. ಆದರೆ, ರಸ್ತೆಯ ಬದಿಯಲ್ಲಿ ಜಾಗಿಂಗ್ ಮಾಡುತ್ತಿದ್ದ ಆನಂದ್​ ಅವರಿಗೆ ಹಿಂದಿನಿಂದ ಬಂದ ವಾಹನವು ಕೊಂಚ ತಿರುಗಿ ಡಿಕ್ಕಿ ಹೊಡೆದು ವೇಗವಾಗಿ ಚಲಿಸಿಹೋಗಿದ್ದ ಸಿಸಿಟಿವಿ ಫೂಟೇಜ್​, ಅದು ಅಪಘಾತವೋ ಕೊಲೆಯೋ ಎಂಬ ಶಂಕೆ ಮೂಡಿಸಿತ್ತು.
ಇದನ್ನೂ ಓದಿ:ಈದ್​ ಮೆರವಣಿಗೆ ಸಂದರ್ಭದಲ್ಲಿ ಕಲ್ಲು ತೂರಾಟ, ಘರ್ಷಣೆ; 39 ಜನರ ಬಂಧನ
ಈ ಪ್ರಕರಣದ ತನಿಖೆಯನ್ನು ಝಾರ್ಕಂಡ್​ ಹೈಕೋರ್ಟ್​ನ ಮೇಲುಸ್ತುವಾರಿಯಲ್ಲಿ ಸಿಬಿಐಗೆ ವಹಿಸಲಾಗಿತ್ತು. ಪ್ರಕರಣದಲ್ಲಿ ಡಿಕ್ಕಿ ಹೊಡೆದ ಆಟೋರಿಕ್ಷಾದ ಚಾಲಕ ಲಖನ್​ ವರ್ಮಾ ಮತ್ತು ಆತನ ಸಹಚರ ರಾಹುಲ್​ ವರ್ಮಾ ಎಂಬುವರನ್ನು ಬಂಧಿಸಿದ್ದು, ಅವರ ವಿರುದ್ಧ ಚಾರ್ಜ್​ಶೀಟ್​ ಸಲ್ಲಿಸಲಾಗಿದೆ ಎಂದು ವರದಿ ತಿಳಿಸಿದೆ.(ಏಜೆನ್ಸೀಸ್)
ಆರ್ಯನ್​ಗೆ ಗಾಂಜಾ ಒದಗಿಸಿದ್ದರೇ, ಅನನ್ಯ ಪಾಂಡೆ? ವಾಟ್ಸಾಪ್​ ಸಂಭಾಷಣೆಯಲ್ಲಿ ಸ್ಫೋಟಕ ಮಾಹಿತಿ!
ಲಸಿಕೆ ನೀಡುವಲ್ಲಿ ಕರ್ನಾಟಕಕ್ಕೆ 3ನೇ ಸ್ಥಾನ: ಆರೋಗ್ಯ ಸಚಿವ ಸುಧಾಕರ್


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 2 =
Remember me
