ತಿರುಪತಿ:ಕಾಲಿವುಡ್​ನ ಸ್ಟಾರ್​ ನಟ ಧನುಷ್​ರವರ ಹೊಸ ಲುಕ್​ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ. ಕಳೆದ ಕೆಲವು ದಿನಗಳ ಹಿಂದೆ ಮುಂಬೈ ಏರ್​ಪೋರ್ಟ್​ನಲ್ಲಿ ಕಾಣಿಸಿಕೊಂಡಿದ್ದ ನಟ ಉದ್ದ ಕೂದಲು ಹಾಗೂ ಗಡ್ಡವನ್ನು ಬಟ್ಟಿದ್ದರು.
ಇದೀಗ ಹೊಸ ಅವತಾರದಲ್ಲಿ ಕಾಣಿಸಿಕೊಂಡಿರುವ ನಟನನ್ನು ಕಂಡು ಅಭಿಮಾನಿಗಳು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ. ನಟ ಧನುಷ್​ ತಿರುಪತಿ ತಿಮ್ಮಪ್ಪನಿಗೆ ಮುಡಿ ಕೊಟ್ಟಿದ್ದು, ಇದರ ಫೋಟೋ ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.
#Dhanushsir with his family#tirupatitoday#CaptainMilIerpic.twitter.com/AADweHwFF2
ಇದನ್ನೂ ಓದಿ:ಜಲಪಾತದಲ್ಲಿ ಈಜಲು ಹೋಗಿ ಮಂಗಳೂರು ಮೂಲದ ವಿದ್ಯಾರ್ಥಿ ಮೃತ್ಯು
ಕುಟುಂಬ ಸಮೇತರಾಗಿ ತಿಮ್ಮಪ್ಪನ ದರ್ಶನ ಪಡೆದ ನಟ ಧನುಷ್​ಗೆ ಅವರ ಮಕ್ಕಳಾದ ಯಾತ್ರ ಹಾಗೂ ಲಿಂಗ ಸಾಥ್​ ನೀಡಿದ್ದಾರೆ. ಮೊದಲಿಗೆ ಉದ್ದನೆಯ ಕೂದಲು ಹಾಗೂ ದಾಡಿ ಬಿಟ್ಟಿದ್ದನ್ನು ನೋಡಿ ಅಭಿಮಾನಿಗಳು ಇದು ಅವರ ಹೊಸ ಚಿತ್ರಕ್ಕಾಗಿ ತಯಾರಿ ಎಂದು ಹೇಳಿದ್ದರು. ಇದೀಗ ತಿಮ್ಮಪ್ಪನಿಗೆ ಮುಡಿ ಕೊಟ್ಟಿರುವುದನ್ನು ನೋಡಿ ಹರಕೆ ತೀರಿಸಲು ಕೂದಲು ಬಿಟ್ಟಿದ್ದರು ಎಂದು ಅಭಿಮಾನಿಗಳು ಹೇಳಿದ್ದಾರೆ.
ಇತ್ತೀಚೆಗಷ್ಟೆ ಕ್ಯಾಪ್ಟನ್ ಮಿಲ್ಲರ್ ಸಿನಿಮಾದ ಫಸ್ಟ್ ಲುಕ್ ರಿಲೀಸ್ ಮಾಡಲಾಗಿದೆ. ಧನುಷ್ ಲುಕ್ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಕ್ಯಾಪ್ಟನ್ ಮಿಲ್ಲರ್ 1930 ರ ಕಾಲಘಟ್ಟದ ಕಥೆಯಾಗಿದೆ. ಈ ಸಿನಿಮಾದಲ್ಲಿ ಕನ್ನಡದ ಸ್ಟಾರ್ ನಟ ಶಿವರಾಜ್ ಕುಮಾರ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
#DhanushToday click with New look🤯💥Completely shaven head look for#D50🔥🔥pic.twitter.com/lqxLdWQxlL
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − 12 =
Remember me
