ತಿರುವನಂತಪುರಂ:ಕೇರಳದ ವಯನಾಡು ಜಿಲ್ಲೆಯ ಗುಡ್ಡಗಾಡು ಪ್ರದೇಶಗಳಲ್ಲಿ ಜುಲೈ 30 ರಂದು ಸಂಭವಿಸಿದ ಭೂಕುಸಿತದಿಂದಾಗಿ ನೂರಾರು ಜನರು ಮೃತಪಟ್ಟಿದ್ದಾರೆ. ಸಾವಿರಾರು ಮಂದಿಗೆ ಗಾಯಗಳಾಗಿದ್ದು, ಜನರ ಜೀವನ ಅಸ್ತವ್ಯಸ್ತಗೊಂಡಿದೆ. ಪ್ರಧಾನಿ ಮೋದಿ ಅವರು ಶನಿವಾರ(ಆಗಸ್ಟ್​​11) ವಯನಾಡಿಗೆ ಭೇಟಿ ನೀಡಿದ್ದರು. ಪೀಡಿತ ಪ್ರದೇಶಗಳ ವೈಮಾನಿಕ ಮತ್ತು ನೆಲದ ಸಮೀಕ್ಷೆಯನ್ನು ಕೈಗೊಂಡು, ರಾಜ್ಯ ಸರ್ಕಾರದ ಬೇಡಿಕೆಗಳನ್ನು ಈಡೇರಿಸಲು ಕೇಂದ್ರ ಸರ್ಕಾರ ಎಲ್ಲಾ ಪ್ರಯತ್ನಗಳನ್ನು ಮಾಡುತ್ತದೆ ಎಂದು ಭರವಸೆ ನೀಡಿದ್ದಾರೆ.
ಇದನ್ನು ಓದಿ:ಅತ್ಯಾಚಾರಿಗಳನ್ನು ಗಲ್ಲಿಗೇರಿಸಿ ಇಲ್ಲವೆ ಎನ್​​ಕೌಂಟರ್​ ಮಾಡಿ; ಹೊಸ ಕಾನೂನಿಗೆ ಅಭಿಷೇಕ್ ಬ್ಯಾನರ್ಜಿ ಒತ್ತಾಯ
ದಕ್ಷಿಣ ಭಾರತದ ಸೆಲಿಬ್ರಿಟಿಗಳು ಸಂತ್ರಸ್ತರಿಗೆ ಮತ್ತು ಸಂತ್ರಸ್ತ ಕುಟುಂಬಗಳಿಗೆ ನೆರವಾಗಲು ಮುಂದಾಗಿದ್ದಾರೆ. ಸಂತ್ರಸ್ತರ ಪುನರ್ವಸತಿ ಕಾರ್ಯಕ್ಕಾಗಿ ತಮಿಳು ನಟ ಧನುಷ್​ ಕೇರಳ ಸಿಎಂ ಪರಿಹಾರ ನಿಧಿಗೆ 25 ಲಕ್ಷ ರೂಪಾಯಿ ದೇಣಿಗೆ ನೀಡಿರುವುದಾಗಿ ಶ್ರೀಧರ್ ಪಿಳ್ಳೈ ಅವರು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
#Dhanushdonates ₹25 lakhs to Kerala CM Relief Fund for#Wayanad. A heartwarming gesture!pic.twitter.com/b6FY9wLxYO
ಈ ಮೊದಲು ನಟರಾದ ಸೂರ್ಯ ಮತ್ತು ವಿಕ್ರಮ್, ಮಮ್ಮುಟ್ಟಿ , ದುಲ್ಕರ್ ಸಲ್ಮಾನ್, ಫಹದ್ ಫಾಸಿಲ್, ನಜ್ರಿಯಾ, ನಯನತಾರಾ ಮತ್ತು ವಿಘ್ನೇಶ್ ಶಿವನ್ ದಂಪತಿ, ಮೋಹನ್‌ಲಾಲ್, ಅಲ್ಲು ಅರ್ಜುನ್​​​, ಚಿರಂಜೀವಿ ಮತ್ತು ರಾಮಚರಣ್ ಕೇರಳ ಮುಖ್ಯಮಂತ್ರಿಗಳ ಸಂಕಷ್ಟ ಪರಿಹಾರ ನಿಧಿಗೆ ದೇಣಿಗೆ ನೀಡಿದ್ದಾರೆ.
ನಟ ಧನುಷ್ ಅಭಿನಯಿಸಿದ​ ರಾಯನ್​ ಸಿನಿಮಾ ಇತ್ತೀಚೆಗಷ್ಟೆ ಬಿಡುಗಡೆಗೊಂಡಿತ್ತು. ಇದು ಧನುಷ್​ ಅವರ 50ನೇ ಸಿನಿಮಾವಾಗಿದ್ದು, ಅವರ ನಿರ್ದೇಶನದಲ್ಲೆ ಮೂಡಿ ಬಂದ ಚಿತ್ರ. ಶೇಖರ್​ ಕಮ್ಮುಲ ಅವರ ಕುಬೇರ ಸಿನಿಮಾದಲ್ಲಿ ಧನುಷ್ ಪಾತ್ರವನ್ನು ನೋಡಲು ಅವರ ಅಭಿಮಾನಿಗಳು ಕಾಯುತ್ತಿದ್ದಾರೆ. (ಏಜೆನ್ಸೀಸ್​​)​
ಬಾಂಗ್ಲಾದಲ್ಲಿನ ಹಿಂಸಾತ್ಮಕ ಪ್ರತಿಭಟನೆ, ಸರ್ಕಾರ ಪತನಕ್ಕೆ ಅಮೆರಿಕವೇ ಕಾರಣ; ಶೇಖ್​​​ ಹಸೀನಾ ಆರೋಪ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two − 2 =
Remember me
