ಹೈದರಾಬಾದ್​​:ನಟ ಧನುಷ್‌ ಅವರು ಹಿಂದಿ, ತಮಿಳು, ಹಾಲಿವುಡ್‌ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇವರು ಸಿನಿಮಾ ಸೋಲುವುದು ಕಡಿಮೆ. ಸೋತರೂ ಅವರು ನಟನೆಯಲ್ಲಿ ಗೆದ್ದಿರುತ್ತಾರೆ. ಆದರೂ ರೊಮ್ಯಾಂಟಿಕ್‌ ಚಿತ್ರಗಳಲ್ಲಿನ ನಟಿಸುವುದಿಲ್ಲ ಎನ್ನುವ ಮೂಲಕ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದ್ದಾರೆ.
ಇದನ್ನೂ ಓದಿ:ಈ ಅಂಗಡಿಗೆ ಹೋಗುವ ಮುನ್ನ ಎಚ್ಚರ! ಬರಿಗೈಯಲ್ಲಿ ವಾಪಸ್ಸಾದರೆ ಬೀಳುತ್ತೆ 500 ರೂ. ದಂಡ!
ಇತ್ತೀಚೆಗೆ ಧನುಷ್‌ ಮತ್ತು ಎ ಆರ್‌ ರೆಹಮಾನ್‌ ಇನ್‌ಸ್ಟಾಗ್ರಾಂ ಲೈವ್‌ ಬಂದಿದ್ದರು. 2013ರಲ್ಲಿ ರಿಲೀಸ್‌ ಆದ ‘ಮರಿಯಾನ್‌’ ಚಿತ್ರಕ್ಕೆ 10 ವರ್ಷಗಳ ಸಂಭ್ರಮವಾಗಿದ್ದು, ಈ ಖುಷಿಯನ್ನು ಲೈವ್‌ ಮೂಲಕ ಹಂಚಿಕೊಂಡಿದ್ದರು.
ಇದನ್ನೂ ಓದಿ:ವಿಶ್ವದಾಖಲೆಗಾಗಿ 7 ದಿನಗಳ ಕಾಲ ಎಡೆಬಿಡದೆ ಕಣ್ಣೀರಿಟ್ಟ!
ರೊಮ್ಯಾಂಟಿಕ್ ಸಿನಿಮಾ ಮಾಡಲ್ಲ:‘ಮರಿಯಾನ್‌’ ಸೇರಿದಂತೆ ಸಾಕಷ್ಟು ರೊಮ್ಯಾಂಟಿಕ್‌ ಸಿನಿಮಾದಲ್ಲಿ ನಟಿಸಿರೋ ಧನುಷ್‌ಗೆ ರೊಮ್ಯಾಂಟಿಕ್‌ ಸಿನಿಮಾದಲ್ಲಿ ನಟಿಸುವಂತೆ ಪ್ರಶ್ನೆ ಕೇಳಲಾಯಿತು. ಅದಕ್ಕೆ ನಗುತ್ತಲೇ ಉತ್ತರ ನೀಡಿದ ಧನುಷ್‌ ‘ನನಗೆ ವಯಸ್ಸಾಯ್ತು, 40 ವರ್ಷವಾಗಿದೆ. ಇನ್ನು ಮುಂದೆ ರೊಮ್ಯಾಂಟಿಕ್‌ ಸಿನಿಮಾದಲ್ಲಿ ನಾನು ನಟಿಸುವುದಿಲ್ಲ, ಈಗಿನ ಹುಡುಗರು ಅಂತಹ ಸಿನಿಮಾಗಳಲ್ಲಿ ನಟಿಸಲಿ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ:ಮಳೆಗಾಲದಲ್ಲಿ ಒದ್ದೆಯಾದ ಶೂ, ಚಪ್ಪಲಿ ಧರಿಸುವುದು ಸೋಂಕಿಗೆ ಕಾರಣವಾಗಬಹುದು; ಈ 3 ವಿಷಯಗಳ ಬಗ್ಗೆ ಕಾಳಜಿ ವಹಿಸಿ
2022ರಲ್ಲಿ ಧನುಷ್, ನಿತ್ಯಾ ಮೆನನ್ ನಟನೆಯ ‘Thiruchitrambalam’ ಸಿನಿಮಾ ರಿಲೀಸ್ ಆಗಿತ್ತು. ಇದೊಂದು ರೊಮ್ಯಾಂಟಿಕ್ ಸಿನಿಮಾವಾಗಿದ್ದು ವೀಕ್ಷಕರು ತುಂಬ ಇಷ್ಟಪಟ್ಟಿದ್ದರು. ಇದರ ಜತೆಗೆ ಅದೇ ವರ್ಷ ‘ನಾನೇ ವರುವೆ’, ‘ದಿ ಗ್ರೇ ಮ್ಯಾನ್’, ‘ಮಾರನ್’ ಸಿನಿಮಾ ರಿಲೀಸ್ ಆಗಿತ್ತು. ‘ವಾತಿ’ ಸಿನಿಮಾ ಈ ವರ್ಷ ರಿಲೀಸ್ ಆಗಿದೆ. ಸದ್ಯ ಧನುಷ್‌ ‘ಕ್ಯಾಪ್ಟನ್‌ ಮಿಲ್ಲರ್‌’ ಸಿನಿಮಾದಲ್ಲಿ ನಟಿಸುತ್ತಿದ್ದು, ಈ ಚಿತ್ರದಲ್ಲಿ ಶಿವರಾಜ್‌ಕುಮಾರ್‌ ಸಹ ನಟಿಸುತ್ತಿದ್ದಾರೆ.
ತಂದೆಗೆ ತಕ್ಕ ಮಗಳು; ಹುಟ್ಟುಹಬ್ಬದಂದು ಬಡ ಮಕ್ಕಳಿಗೆ ಸೈಕಲ್ ಗಿಫ್ಟ್​​ ನೀಡಿದ ಮಹೇಶ್ ಬಾಬು ಪುತ್ರಿ ಸಿತಾರಾ


ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:eight + 11 =
Remember me
