ಚೆನ್ನೈ:ತಮಿಳು ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿರುವ ಖ್ಯಾತ ನಟ ಧನುಷ್​ ಅವರ ವಿರುದ್ಧ ಆರೋಪವೊಂದು ಕೇಳಿಬಂದಿತ್ತು. ಅದು ವೃದ್ಧ ದಂಪತಿ ಮಾಡಿದ ಆರೋಪವಾಗಿತ್ತು. ನಟ ಧನುಷ್​​ ಅವರು ತಮ್ಮ ಮಗ ಎಂದು ಹೇಳಿಕೊಂಡು ಕೆಲವು ವರ್ಷಗಳಿಂದ ಸುದ್ದಿಯಲ್ಲಿರುವ ದಂಪತಿಗೆ ಕೊನೆಗೂ ಕಾನೂನು ರೀತಿಯಲ್ಲೇ ನೊಟೀಸ್​ ನೀಡಿದ್ದಾರೆ.
ನಾವು ಧನುಷ್​ ಅವರ ಜೈವಿಕ ತಂದೆ-ತಾಯಿ ಎಂದು ಹೇಳಿ ನ್ಯಾಯಾಲಯದ ಮೆಟ್ಟಿಲು ಕೂಡ ಏರಿದ್ದರು ಈ ದಂಪತಿ. ಇದೀಗ ಕಾನೂನು ರೀತಿಯಲ್ಲೇ ಉತ್ತರಿಸಲು ಮುಂದಾಗಿರುವ ನಟ ಧನುಷ್​​, ಮಧುರೈನ ಈ ದಂಪತಿಗೆ ತಮ್ಮ ವಕೀಲರ ಮೂಲಕ ನೊಟೀಸ್​​ ನೀಡಿದ್ದಾರೆ.
ತಮ್ಮ ಮಗನೆಂದು ಸುಳ್ಳು ಹೇಳಿಕೆ ಕೊಟ್ಟು ತಮ್ಮ ವರ್ಚಸ್ಸಿನ ಮೇಲೆ ಧಕ್ಕೆ ಬರುವಂತೆ ಈ ದಂಪತಿ ನಡೆದುಕೊಂಡಿದ್ದಾರೆ. ಇವರ ಹೇಳಿಕೆ ಸುಳ್ಳಾಗಿದ್ದು, ತಮ್ಮ ಕಕ್ಷಿದಾರನಿಗೆ 10 ಕೋಟಿ ರೂ. ಪರಿಹಾರ ನೀಡಬೇಕೆಂದು ನಟನ ಪರ ವಕೀಲ ಹೇಳಿದ್ದಾರೆ.
ತಮ್ಮ ವಿರುದ್ಧ ಮಾಡಿರುವ ಮಾನಹಾನಿಕರ ಆರೋಪವನ್ನು ಸಹಿಸಲು ಸಾಧ್ಯವಿಲ್ಲ. ಇಂತಹ ಆರೋಪದಿಂದ ಈ ದಂಪತಿ ಸುಮ್ಮನಾಗುತ್ತಾರೆ ಎಂದು ಭಾವಿಸಿದ್ದೆ. ಆದರೆ ಇವರ ಈ ಸುಳ್ಳು ಮುಂದುವರಿದಿದ್ದರಿಂದ ಕಾನೂನು ಕ್ರಮ ಕೈಗೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ. ಇಂತಹ ಸುಳ್ಳು , ಅಸಮರ್ಥನೀಯ ಮತ್ತು ಮಾನಹಾನಿ ಆರೋಪಗಳನ್ನು ಮಾಡಿದ ನಿಮ್ಮಿಬ್ಬರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ದಂಪತಿಗೆ ನೊಟೀಸ್​​​ ನೀಡಲಾಗಿದೆ.(ಏಜೆನ್ಸೀಸ್​)
ಚೀನಾ ಮಹಾ ಯಡವಟ್ಟು: ಕರೊನಾ ಸೋಂಕು ಇಲ್ಲದ ಸಾವಿರಾರು ಮಂದಿಗೆ ಕ್ವಾರಂಟೈನ್​!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine + 2 =
Remember me
