ಎರಡು ತಿಂಗಳ ಹಿಂದೆ ಮುಂಬೈನ ಧಾರಾವಿ ಕರೊನಾ ಸೋಂಕಿನ ಹಾಟ್​ಸ್ಪಾಟ್​ ಆಗಿತ್ತು. ಕೊವಿಡ್-19ನಿಂದ ತತ್ತರಿಸಿ ಹೋಗಿತ್ತು.ಏಷ್ಯಾದಲ್ಲೇ ಅತ್ಯಂತ ದೊಡ್ಡ ಸ್ಲಮ್​ ಎನಿಸಿಕೊಂಡಿರುವ ಧಾರಾವಿ ಲಿಂಕ್​ನಿಂದ ದೇಶದ ವಿವಿಧೆಡೆಗೆ ಹೋದವರಿಂದ ರಾಷ್ಟ್ರದಲ್ಲಿ ಕರೊನಾ ಪ್ರಮಾಣ ತೀವ್ರವಾಗಿ ಹೆಚ್ಚಾಗಿದೆ.
ಅಂದು ಕೊವಿಡ್​-19 ಗೂಡಾಗಿದ್ದ ಧಾರಾವಿ ಇಂದು ವಿಶ್ವ ಆರೋಗ್ಯ ಸಂಸ್ಥೆಯಿಂದ ಪ್ರಶಂಸೆಗೆ ಒಳಗಾಗಿದೆ. ಅಲ್ಲಿ ಸೋಂಕು ನಿಯಂತ್ರಣ ಮಾಡಿದ ಕ್ರಮವನ್ನು ಡಬ್ಲ್ಯೂಎಚ್​ಒ ಶ್ಲಾಘಿಸಿದೆ.ಇದನ್ನೂ ಓದಿ:ಮುಖ್ಯಮಂತ್ರಿ ನಿವಾಸಕ್ಕೆ ಬಾಂಬ್​ ಹಾಕುವುದಾಗಿ ಬೆದರಿಕೆ ಕರೆ ಮಾಡಿದ್ದವನ ಬಂಧನ
ಕರೊನಾವನ್ನು ಯಶಸ್ವಿಯಾಗಿ ನಿಯಂತ್ರಣ ಮಾಡಿದ ಕೆಲವು ನಗರಗಳ ಹೆಸರನ್ನು ಹೇಳಿ ಉದಾಹರಣೆ ನೀಡಿರುವ ಡಬ್ಲ್ಯೂಎಚ್ಒ ಮಹಾನಿರ್ದೇಶಕ ಡಾ. ಟೆಡ್ರೋಸ್​ ಅಧಾನೊಮ್​ ಘೆಬ್ರೆಯೆಸಸ್ ಅವರು ಧಾರಾವಿ ಹೆಸರನ್ನೂ ಉಲ್ಲೇಖಿಸಿ ಪ್ರಶಂಸಿಸಿದ್ದಾರೆ.ಇಂದು ಮಾತನಾಡಿದ ಡಾ. ಟೆಡ್ರೋಸ್​, ಕರೊನಾ ಸೋಂಕು ಏಕಾಏಕಿ ತೀವ್ರಗೊಂಡರೂ ಅದನ್ನು ಮತ್ತೆ ನಿಯಂತ್ರಣಕ್ಕೆ ತರಬಹುದು ಎಂಬುದಕ್ಕೆ ಜಗತ್ತಿನಲ್ಲಿ ಹಲವು ಉದಾಹರಣೆಗಳು ಸಿಗುತ್ತವೆ. ವಿಯೆಟ್ನಾಂ, ಕಾಂಬೋಡಿಯಾ, ಥೈಲ್ಯಾಂಡ್​, ನ್ಯೂಜಿಲ್ಯಾಂಡ್​, ಇಟಲಿ, ಸ್ಪೇನ್​, ಸೌತ್​ ಕೊರಿಯಾ ಮತ್ತು ಮುಂಬೈನ ಧಾರಾವಿಗಳು ಉತ್ತಮ ಉದಾಹರಣೆಗಳು ಎಂದು ಹೇಳಿದ್ದಾರೆ.
ಧಾರಾವಿಯಂತೂ ಅತ್ಯಂತ ಜನನಿಬಿಡ ಪ್ರದೇಶ. ಅಂಥದ್ದರಲ್ಲಿ ಅಲ್ಲಿ ಕರೊನಾ ಚೈನ್​ ಬ್ರೇಕ್​ ಮಾಡಲಾಗಿದೆ. ತಪಾಸಣೆ, ಟ್ರೇಸಿಂಗ್​, ಐಸೋಲೇಶನ್​ ಮತ್ತು ಸೋಂಕಿತರಿಗೆ ನೀಡಲಾಗುವ ಶೀಘ್ರ, ಉತ್ತಮ ಚಿಕಿತ್ಸೆಗಳಿಂದ ಕೊವಿಡ್​-19ನ್ನು ನಿಯಂತ್ರಿಸಬಹುದು ಎಂದು ಡಾ. ಟೆಡ್ರೋಸ್​ ಅವರು ಹೇಳಿದ್ದಾರೆ. (ಏಜೆನ್ಸೀಸ್​)
ವಿಕಾಸ್​ ದುಬೆ ಅಂತ್ಯಕ್ರಿಯೆ ವೇಳೆ ಆವೇಶಗೊಂಡ ಪತ್ನಿ; ‘ಅವನಿಗೆ ಇಂಥ ಸಾವು ಬಂದಿದ್ದು ಯೋಗ್ಯವಾಗಿದೆ’ ಎಂದು ಕೂಗಾಟ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − three =
Remember me
