ನವದೆಹಲಿ:ತಮ್ಮ ನಿರ್ಮಾಣದ ಡ್ರೈವ್​ ಚಿತ್ರದಲ್ಲಿ ನಟಿಸಲು ಸುಶಾಂತ್​ ಸಿಂಗ್​ ರಜಪೂತ್​ ಮಾಡಿಕೊಂಡಿದ್ದ ಒಪ್ಪಂದದ ಪ್ರತಿಯನ್ನು ಧರ್ಮ ಪ್ರೊಡಕ್ಷನ್ಸ್​ನ ಸಿಇಒ ಅಪೂರ್ವ ಮೆಹ್ತಾ ಮುಂಬೈ ಪೊಲೀಸರಿಗೆ ಒಪ್ಪಿಸಿದ್ದಾರೆ.
ಸುಶಾಂತ್​ ಸಿಂಗ್​ ರಜಪೂತ್​ ಆತ್ಮಹತ್ಯೆ ಪ್ರಕರಣದ ವಿಚಾರಣೆಗಾಗಿ ಮಂಗಳವಾರ ಮುಂಬೈ ಪೊಲೀಸ್​ ಎದುರು ಹಾಜರಾದ ಅಪೂರ್ವ ಮೆಹ್ತಾ ಅಂದಾಜು ಮೂರು ಗಂಟೆ ತಮ್ಮ ಹೇಳಿಕೆಯನ್ನು ದಾಖಲಿಸಿದರು.
ಜೂ.14ರಂದು ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಸುಶಾಂತ್​ ಸಿಂಗ್​ ರಜಪೂತ್​ ನಟಿಸಿದ್ದ ತರುಣ್​ ಮನ್ಸುಖಾನಿ ನಿರ್ದೇಶನ ಡ್ರೈವ್​ ಚಿತ್ರ ನೆಟ್​ಫ್ಲಿಕ್ಸ್​ ಒಟಿಟಿಯಲ್ಲಿ ಬಿಡುಗಡೆಗೊಂಡಿತ್ತು. ಪೂರ್ವ ನಿರ್ಧಾರಿತವಾಗಿದ್ದಂತೆ ಈ ಚಿತ್ರ ಸಿನಿಮಾ ಮಂದಿರಗಳ ಬೆಳ್ಳಿ ಪರದೆಯಲ್ಲಿ ಕಾಣಿಸಿಕೊಳ್ಳುವ ಬದಲು ಒಟಿಟಿಯಲ್ಲಿ ಬಿಡುಗಡೆಗೊಂಡಿತ್ತು ವಿಶೇಷವಾಗಿತ್ತು.
ಇದನ್ನೂ ಓದಿ:ಸದ್ಯಕ್ಕೆ ಶಾಲೆ ತೆರೆಯುವುದಿಲ್ಲ, 36 ಸಂಸ್ಥೆಗಳ ಜತೆ ಸಚಿವ ಸುರೇಶ್​ ಕುಮಾರ್​ ಸಂವಾದ
ವೃತ್ತಿವೈಷಮ್ಯದ ಹಿನ್ನೆಲೆಯಲ್ಲಿ ಸುಶಾಂತ್​ ಸಿಂಗ್​ ರಜಪೂತ್​ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಶಂಕೆಯ ಹಿನ್ನೆಲೆಯಲ್ಲಿ ಮುಂಬೈ ಪೊಲೀಸರು ಬಾಲಿವುಡ್​ ಮಂದಿಯ ಹೇಳಿಕೆಗಳನ್ನು ದಾಖಲಿಸಿಕೊಳ್ಳುತ್ತಿದ್ದಾರೆ. ಅವರು ಇದುವರೆಗೆ 38 ಜನರ ಹೇಳಿಕೆ ದಾಖಲಿಸಿಕೊಂಡಿದ್ದು, ಬಾಲಿವುಡ್​ ನಟಿ ಕಂಗನಾ ರಣಾವತ್​ ಮತ್ತು ಕರಣ್​ ಜೋಹರ್​ ಅವರ ಮ್ಯಾನೇಜರ್​ಗೂ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್​ ಜಾರಿ ಮಾಡಿದ್ದಾರೆ.
ಸುಶಾಂತ್​ ಅವರ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಆತ್ಮಹತ್ಯೆ ಪ್ರಕರಣದ ಕುರಿತು ಸಿಬಿಐ ತನಿಖೆ ನಡೆಸುವಂತೆ ಆಗ್ರಹಿಸುತ್ತಿದ್ದಾರೆ. ಬಾಲಿವುಡ್​ ನಟ ಶೇಖರ್​ ಸುಮನ್​ ಕೂಡ ಅಭಿಮಾನಿಗಳ ಆಗ್ರಹಕ್ಕೆ ಒತ್ತಾಸೆಯಾಗಿ ನಿಂತಿದ್ದು, ಜಸ್ಟಿಸ್​ ಫಾರ್​ ಸುಶಾಂತ್​ ಫೋರಂ ಅನ್ನು ಸ್ಥಾಪಿಸಿದ್ದಾರೆ.
ಆದರೆ, ಸುಶಾಂತ್​ ಅವರ ಸಹೋದರಿ ಶ್ವೇತಾ ಸಿಂಗ್​ ಕೃತಿ ಸಿಬಿಐ ತನಿಖೆ ಬೇಡವೆಂದು ಹೇಳಿದ್ದು, ತಾವು ಮುಂಬೈ ಪೊಲೀಸರು ವಿಚಾರಣೆ ಮುಗಿಸುವುದನ್ನು ಕಾಯುತ್ತಿರುವುದಾಗಿ ತಿಳಿಸಿದ್ದಾರೆ. ಅವರ ವರದಿ ಬಂದ ನಂತರದಲ್ಲಿ ಮುಂದಿನ ಕ್ರಮದ ಬಗ್ಗೆ ಚಿಂತನೆ ನಡೆಸುವುದಾಗಿ ಹೇಳಿದ್ದಾರೆ.
ಕರೊನಾ ಸಂಕಷ್ಟದಲ್ಲಿ ಭಾರತಕ್ಕೆ ಮತ್ತೊಂದು ಕುಖ್ಯಾತಿ; ಇದು ಕಳವಳಕಾರಿ ವಿದ್ಯಮಾನವೂ ಹೌದು…!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 − seven =
Remember me
