ಬೆಂಗಳೂರು:ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಪಂಜಾಬ್​ನಲ್ಲಿ ನಡೆದ ಆತಂಕಕಾರಿ ಘಟನೆ ಬಳಿಕ, ಅವರ ಹಿತಕ್ಕಾಗಿ ಹಾರೈಸಿ ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಮಹಾ ಮೃತ್ಯುಂಜಯ ಯಾಗ ನೆರವೇರಿಸಿದ್ದು ಬಹುತೇಕ ಎಲ್ಲರಿಗೂ ಗೊತ್ತಿರುವಂಥ ವಿಷಯವೇ. ಇದೀಗ ಆ ಯಾಗದ ಪ್ರಸಾದ ನೇರವಾಗಿ ಪ್ರಧಾನಿಯವರನ್ನೇ ತಲುಪಿದೆ.
ಹೌದು.. ಬೆಳ್ತಂಗಡಿಯ ಶಾಸಕ ಹರೀಶ್​ ಪೂಂಜಾ ಖುದ್ದಾಗಿ ಈ ಪ್ರಸಾದವನ್ನು ಕೊಂಡೊಯ್ದು ಪ್ರಧಾನಿ ಮೋದಿಯವರಿಗೆ ಹಸ್ತಾಂತರಿಸಿದ್ದಾರೆ. ಅಷ್ಟೇ ಅಲ್ಲ ಯಾಗದಲ್ಲಿ ಮುಖ್ಯವಾಗಿ ಪಾಲ್ಗೊಂಡಿದ್ದ ಪುರೋಹಿತವೃಂದ ಕೂಡ ಶಾಸಕರೊಂದಿಗೆ ತೆರಳಿ ಮೋದಿಯವರಿಗೆ ಆಶೀರ್ವದಿಸಿದೆ.
ಪ್ರಧಾನಿಯವರಿಗೆ ದೀರ್ಘಾಯಸ್ಸು ಕೋರಿ ಹಾಗೂ ಅವರ ಆರೋಗ್ಯವೃದ್ಧಿಗಾಗಿ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಮಹಾ ಮೃತ್ಯುಂಜಯ ಯಾಗವನ್ನು ನೆರವೇರಿಸಲಾಗಿತ್ತು. ಆ ಯಾಗದ ಪ್ರಸಾದದ ಜೊತೆಗೆ ಧರ್ಮಾಧಿಕಾರಿ ಶ್ರೀ ವೀರೇಂದ್ರ ಹೆಗ್ಗಡೆಯವರು ನೀಡಿದ್ದ ಪೂಜಾ ಕೈಂಕರ್ಯ ಕಿಟ್ ಕೂಡ ಪ್ರಧಾನಿಯವರಿಗೆ ತಲುಪಿಸಿದೆ ಎಂಬುದಾಗಿ ಶಾಸಕ ಹರೀಶ್​ ಪೂಂಜಾ ತಿಳಿಸಿದ್ದಾರೆ.

ಅಷ್ಟೇ ಅಲ್ಲದೆ ಸ್ವರ್ಣಖಚಿತ ಸ್ಫಟಿಕ ರುದ್ರಾಕ್ಷಿ ಹಾರವನ್ನು ಆಚಾರ್ಯರ ಮುಖೇನ ಪ್ರಧಾನಿ ಶ್ರೀ ನರೇಂದ್ರ ಮೋದಿಜಿಯವರಿಗೆ ಸಮರ್ಪಿಸುವ ಸೌಭಾಗ್ಯ ನನ್ನದಾಯಿತು ಎಂಬುದನ್ನೂ ಅವರು ಹೇಳಿಕೊಂಡಿದ್ದಾರೆ. ಮಹಾ ಮೃತ್ಯುಂಜಯ ಯಾಗದ ಮಹಾಪ್ರಸಾದವನ್ನು ಪ್ರಧಾನಿ ಮೋದಿ ಮಾತ್ರವಲ್ಲದೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರಿಗೂ ಪೂಂಜಾ ತಲುಪಿಸಿದರು.
ಬೀದಿನಾಯಿ ಮೇಲೆ ಶ್ರೀಮಂತಿಕೆಯ ದರ್ಪ?: ಮಲಗಿದ್ದ ನಾಯಿ ಮೇಲೆ ಆಡಿ ಕಾರು ಹತ್ತಿಸಿಕೊಂಡು ಹೋದ ಭೂಪ..
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × two =
Remember me
