ನವದೆಹಲಿ:ಭಾರತದ ಮಾಜಿ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಅಂತರಾಷ್ಟ್ರೀಯ ಕ್ರಿಕೆಟ್ ನಿಂದ ನಿವೃತ್ತಿಯಾಗಿದ್ದರೂ ಧೋನಿ ಕ್ರೇಜ್ ಕಳೆದುಕೊಂಡಿಲ್ಲ. ಧೋನಿ ಎಲ್ಲಿ ಕಂಡರೂ ಅಭಿಮಾನಿಗಳು ಸೆಲ್ಫಿಗಾಗಿ ಪೈಪೋಟಿ ನಡೆಸುತ್ತಾರೆ.
ಇದನ್ನೂ ಓದಿ:ಸಮುದ್ರತೀರದಲ್ಲಿ ಮಗುಗೆ ಜನ್ಮ ನೀಡಿದ ಮಹಿಳೆ; ಜನನ ಪ್ರಮಾಣ ಪತ್ರಕ್ಕೆ ದಂಪತಿ ಪಟ್ಟ ಕಷ್ಟ ಅಷ್ಟಿಷ್ಟಲ್ಲ……
ಇತ್ತೀಚೆಗೆ, ರಾಂಚಿಯಲ್ಲಿ ಧೋನಿ ತಮ್ಮ ಹೋಂಡಾ ರೆಪ್ಸೋಲ್ 150 (ಬೈಕ್) ಸವಾರಿ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಅಭಿಮಾನಿಯೊಬ್ಬರು ಸೆಲ್ಫಿ ತೆಗೆದುಕೊಳ್ಳಲು ಯತ್ನಿಸಿದರಾದರೂ ಫಲಕಾರಿಯಾಗಲಿಲ್ಲ. ಇದಕ್ಕೆ ಸಂಬಂಧಿಸಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.ಧೋನಿಗೆ ಬೈಕ್ ಮತ್ತು ಕಾರು ಎಂದರೆ ತುಂಬಾ ಇಷ್ಟ. ಧೋನಿಯ ಗ್ಯಾರೇಜ್‌ನಲ್ಲಿ ಹತ್ತಾರು ಬೈಕ್‌ಗಳು ಮತ್ತು ಕಾರುಗಳು ಕಾಣಸಿಗುತ್ತವೆ. ಧೋನಿ ಅವರು ಬೈಕ್ ಓಡಿಸಲು ಇಷ್ಟಪಡುತ್ತಾರೆ ಎಂದು ಹಲವು ಬಾರಿ ಬಹಿರಂಗಪಡಿಸಿದ್ದಾರೆ.
A post shared by subodh singh Kushwaha (@kushmahi7)
ಇದನ್ನೂ ಓದಿ:VIDEO | ಮನುಷ್ಯರಂತೆ ಮೊಬೈಲ್‌ನಲ್ಲಿ ರೀಲ್‌ಗಳನ್ನು ನೋಡಿದ ಕೋತಿ…
ಸದ್ಯ ರಾಂಚಿಯಲ್ಲಿ ತಂಗಿರುವ ಧೋನಿ ಬೈಕ್ ನಲ್ಲಿ ರಾಂಚಿಯಲ್ಲಿರುವ ತಮ್ಮ ಮನೆಗೆ ತಲುಪಿದ್ದಾರೆ. ಧೋನಿ ಬೈಕ್ ನಲ್ಲಿ ಬರುತ್ತಿರುವುದನ್ನು ಗಮನಿಸಿದ ಅಭಿಮಾನಿಯೊಬ್ಬ ಸೆಲ್ಫಿ ತೆಗೆಯಲು ಯತ್ನಿಸಿದ್ದಾನೆ. ಧೋನಿ ಮನೆಯ ಗೇಟ್‌ ಒಳಗೆ ಹೋಗುತ್ತಿರುವುದು ಕಂಡುಬಂದಿದೆ. ಧೋನಿ ಹೆಲ್ಮೆಟ್ ಧರಿಸಿದ್ದಾರೆ. ಧೋನಿ ಬೈಕ್ ಓಡಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ:ಸ್ನೇಹಕ್ಕಾಗಿ ಪ್ರಾಣ ಕೊಡುತ್ತೇನೆಂದು ತನ್ನ ಕಾಲನ್ನೇ ಕತ್ತರಿಸಿಕೊಂಡು ಪ್ರಾಣ ಬಿಟ್ಟ ಗೆಳೆಯ
ಮಾಹಿ ಭಾಯಿಯನ್ನು ಪ್ರತಿದಿನ ನೋಡುತ್ತಿರುವ ಆ ಮನೆಯ ಕಾವಲುಗಾರ ಎಷ್ಟು ಅದೃಷ್ಟಶಾಲಿ. ಧೋನಿ ಅವರನ್ನು ಭೇಟಿ ಮಾಡಬೇಕು ಎಂದು ನೆಟ್ಟಿಗರು ಕಾಮೆಂಟ್‌ ಮಾಡುತ್ತಿದ್ದಾರೆ.
ಬಂಪರ್​ ಆಫರ್: ಆಗಸ್ಟ್ ತಿಂಗಳಲ್ಲಿ ಹುಟ್ಟಿದವರಿಗೆ ಮೊಬೈಲ್ ಉಚಿತ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 + 11 =
Remember me
