ನವದೆಹಲಿ:ಕರೊನಾ ವೈರಸ್​ ನಿಗ್ರಹಕ್ಕಾಗಿ ಔಷಧ ಕಂಡು ಹಿಡಿಯಲಾಗುತ್ತಿದೆ. ಸದ್ಯ ಈಗಿರುವ ಔಷಧ, ಮಾತ್ರೆ ಹಾಗೂ ಲಸಿಕೆಗಳನ್ನೇ ಬಳಸಿಕೊಳ್ಳಲಾಗುತ್ತಿದೆ. ಅಂತೆಯೇ, ಹಲವು ಔಷಧಗಳು ಪರಿಣಾಮಕಾರಿ ಎನಿಸಿವೆ. ಇದೀಗ ಮತ್ತೊಂದು ಔಷಧ ಕರೊನಾ ರೋಗಿಗಳ ಮೇಲೆ ಪರಿಣಾಮಕಾರಿ ಎನಿಸಿದೆ. ವಿಶೇಷ ಎಂದರೆ ಇದರ ಬೆಲೆ ಒಂದು ಮಾತ್ರೆಗೆ ಒಂದು ರೂಪಾಯಿಗಿಂತಲೂ ಕಡಿಮೆ.
ಮಧುಮೇಹ ಚಿಕಿತ್ಸೆಯಲ್ಲಿ ಬಳಸಲಾಗುವ ಮೆಟ್​ಫಾರ್ಮಿನ್​ ಕರೊನಾ ಚಿಕಿತ್ಸೆಯಲ್ಲಿ ಬಳಸಬಹುದು ಎಂದು ತಜ್ಞರು ಕಂಡುಕೊಂಡಿದ್ದಾರೆ. ಕರೊನಾ ಜನ್ಮಸ್ಥಾನ ವುಹಾನ್​ನಲ್ಲಿ ವೈದ್ಯರು ಇದನ್ನು ಬಳಸಿ ಯಶಸ್ವಿಯಾಗಿದ್ದಾರೆ. ಬಳಿಕ ಅಮೆರಿಕದ ಮಿನ್ನೆಸೋಟಾ ವಿವಿಯ ವೈದ್ಯರು ಕೂಡ ಇಂಥದ್ದೇ ಫಲಿತಾಂಶವನ್ನು ಪಡೆದಿದ್ದಾರೆ.
ಇದನ್ನೂ ಓದಿ;ರೋಗ ಪ್ರತಿರೋಧಕ ಶಕ್ತಿ ಕುಂದಿದವರಿಗೂ ಆಕ್ಸ್​ಫರ್ಡ್​ ಕರೊನಾ ಲಸಿಕೆ ಸುರಕ್ಷಿತ; ಫಲಿತಾಂಶ ಪ್ರಕಟಿಸಿದ ತಜ್ಞರು
ಟೈಪ್​-2 ಡಯಾಬಿಟಿಸ್​ ರೋಗಿಗಳಿಗೆ ಉತ್ತಮ ಆಹಾರ ಕ್ರಮ ಹಾಗೂ ವ್ಯಾಯಾಮದೊಂದಿಗೆ ಬಳಸಿ ಎಂದು ಈ ಮಾತ್ರೆಯನ್ನು ಶಿಫಾರಸು ಮಾಡಲಾಗುತ್ತದೆ. ಇದು ರಕ್ತದಲ್ಲಿನ ಸಕ್ಕರೆ ಅಂಶವನ್ನು ಕಡಿಮೆ ಮಾಡುವುದಲ್ಲದೆ, ಬೊಜ್ಜನ್ನು ಕರಗಿಸುವಲ್ಲಿ ನೆರವಾಗುತ್ತದೆ. ಇದೀಗ ಕರೊನಾ ರೋಗಿಗಳಲ್ಲಿ ಅದ್ಭುತವನ್ನೇ ಮಾಡುತ್ತಿದೆ ಎಂದು ವೈದ್ಯರು ಹೇಳಿದ್ದಾರೆ. ಇಂಗ್ಲೆಂಡ್​ನಲ್ಲಿ ಈ ಮಾತ್ರೆಯನ್ನು ಈಗಾಗಲೇ ಬಳಸಲಾಗುತ್ತಿದೆ ಎಂದೇ ಹೇಳಲಾಗಿದೆ.
ವೈದ್ಯರ ಪ್ರಕಾರ ಈ ಮಾತ್ರೆ ಸೇವಿಸುತ್ತಿರುವ ಕರೊನಾ ರೋಗಿಗಳಲ್ಲಿ ಇತರ ರೋಗಿಗಳೀಗೆ ಹೋಲಿಸಿದಲ್ಲಿ ಮರಣದ ಪ್ರಮಾಣ ತೀರಾ ಕಡಿಮೆಯಾಗಿದೆ. ಅಮೆರಿಕದ ವೈದ್ಯರು ಕೂಡ ಇದನ್ನೇ ಅನುಮೋದಿಸಿದ್ದಾರೆ. ಅವರ ಅಧ್ಯಯನದಲ್ಲೂ ಇದು ಸಾಬೀತಾಗಿದೆ.
ಇದನ್ನೂ ಓದಿ;ಕರೊನಾ ಲಸಿಕೆ ಮೊದಲಿಗೆ ಸಿಗೋದು ಯಾರಿಗೆ? ಪ್ರಧಾನಿ ಮೋದಿಯೇ ಸಿದ್ಧಪಡಿಸಿದ್ದಾರೆ ವಿತರಣಾ ಯೋಜನೆ ರೂಪುರೇಷೆ…!
ಮೆಟ್​ಫಾರ್ಮಿನ್​ ಸ್ತನ ಕ್ಯಾನ್ಸರ್​ ಸೇರಿ ಇತರ ಹಲವು ಕಾಯಿಲೆಗಳಿಗೆ ಪರಿಣಾಮಕಾರಿಯಾಗಿದೆ. ಈಗಾಗಲೇ ಕರೊನಾ ರೋಗಿಗಳಲ್ಲಿ ಮರಣದ ಪ್ರಮಾಣವನ್ನು ಭಾರಿ ಮಟ್ಟದಲ್ಲಿ ನಿಯಂತ್ರಿಸಬಲ್ಲದು ಎಂದು ಸಾಬೀತಾಗಿರುವ ಡೆಕ್ಸಾಮೆಥಸೋನ್​ ಜತೆಗೆ, ಈ ಮಾತ್ರೆಯೂ ಕೂಡ ವರದಾನವಾಗಿ ಪರಿಣಮಿಸಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಆಸ್ಪತ್ರೆಗೆ ದಾಖಲಾದ ಮಹಿಳೆಗೆ ಕಾದಿತ್ತು ಅಚ್ಚರಿ; ಹೊಟ್ಟೆನೋವು ಎಂದವಳ ಲಿಂಗವೇ ಬದಲಾಗಿತ್ತು…!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − 1 =
Remember me
