ನವದೆಹಲಿ:ತುರ್ತು ಸಂದರ್ಭಗಳಲ್ಲಿ 100 ನಂಬರ್​ಗೆ ಕರೆ ಮಾಡಿದರೆ ಸಾಕು ಕೆಲವೇ ನಿಮಿಷಗಳಲ್ಲಿ ಪೊಲೀಸರು ನಿಮ್ಮ ಮುಂದೆ ಹಾಜರಾಗಿ, ತೊಂದರೆಯಿಂದ ರಕ್ಷಣೆ ಮಾಡುತ್ತಾರೆ. ಸಂಕಷ್ಟದ ಸಂದರ್ಭಗಳಲ್ಲಿ ಸಂತ್ರಸ್ತರಿಗೆ ಸಹಾಯ ಮಾಡಲೆಂದೇ ಈ ಸಹಾಯವಾಣಿ ಸೇವೆಗಳನ್ನು ಸ್ಥಾಪಿಸಲಾಗಿದೆ. 100ಕ್ಕೆ ಕರೆ ಮಾಡಿ ಮಾಹಿತಿ ನೀಡಿದರೆ ಸಾಕು ತಕ್ಷಣ ಪೊಲೀಸರು ಮಧ್ಯ ಪ್ರವೇಶಿಸಿ, ಸಂತ್ರಸ್ತರಿಗೆ ನ್ಯಾಯ ಒದಗಿಸುತ್ತಾರೆ. ಪೊಲೀಸರು ಉತ್ತಮವಾಗಿ ಸ್ಪಂದಿಸುವ ಕಾರಣ ಈ ಸಂಖ್ಯೆಗೆ ಕರೆ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಇದರ ಲಾಭ ಪಡೆದು ಕೆಲ ಪುಂಡ ಪೋಕರಿಗಳು ಪೊಲೀಸರಿಗೆ ತೊಂದರೆ ನೀಡಿದ ಪ್ರಕರಣಗಳೂ ನಡೆದಿವೆ. ಸಣ್ಣಪುಟ್ಟ ಸಮಸ್ಯೆಗಳಿಗೂ 100ಕ್ಕೆ ಕರೆ ಮಾಡುವುದು ವಿಪರೀತವಾಗಿದೆ.
ಇತ್ತೀಚೆಗೆ ವ್ಯಕ್ತಿಯೊಬ್ಬರು 100ಕ್ಕೆ ಡಯಲ್ ಮಾಡಿದರು. ತಕ್ಷಣವೇ ಪೊಲೀಸರು ಸ್ಥಳಕ್ಕೆ ತಲುಪಿ ನೋಡಿದಾಗ ಅವರಿಗೆ ಶಾಕ್​ ಕಾದಿತ್ತು. ಈ ಘಟನೆ ಎಲ್ಲಿ ನಡೆದಿದೆ ಎಂಬುದು ನಿಖರವಾಗಿ ತಿಳಿದುಬಂದಿಲ್ಲ. ಆದರೆ, ವಿಡಿಯೋ ವೈರಲ್​ ಆಗಿದೆ. ಪೊಲೀಸರು, ಕರೆ ಮಾಡಿದನ ಮನೆಗೆ ಬಂದು ನೋಡಿದಾಗ ಅಲ್ಲಿ ಬೀದಿ ನಾಯಿಯೊಂದು ಇತ್ತು. ಆಕಸ್ಮಿಕವಾಗಿ ಬೀದಿ ನಾಯಿ ಮನೆಯೊಳಗೆ ನುಗ್ಗಿಬಿಟ್ಟಿತ್ತು. ಅದನ್ನು ಹೊರಗಾಕಲು ಮನೆಯ ಮಾಲೀಕ ಪೊಲೀಸರಿಗೆ ಕರೆ ಮಾಡಿದ್ದ.
ಕರೆ ಮಾಡಿದ್ದನ್ನು ನೋಡಿ ಏನೋ ಸಮಸ್ಯೆ ಇರಬಹುದು ಅಂತ ತಕ್ಷಣವೇ ಸ್ಥಳಕ್ಕೆ ಆಗಮಿಸಿದ ಪೊಲೀಸರಿಗೆ ಅಸಲಿ ಸಂಗತಿಯನ್ನು ತಿಳಿದು ಭ್ರಮನಿರಸನವಾಯಿತು. ಮನೆ ಮಾಲೀಕ ಮಾಡಿದ ಅವಾಂತರವನ್ನು ಪೊಲೀಸರು ವಿಡಿಯೋ ಮಾಡಿದ್ದಾರೆ. ಈ ರೀತಿ ಕರೆ ಮಾಡುವುದು ಸರಿಯಲ್ಲ ಮತ್ತು ನಮ್ಮ ಅಮೂಲ್ಯ ಸಮಯವನ್ನು ಹಾಳು ಮಾಡಬೇಡಿ ಎಂದು ಮನೆಯ ಮಾಲೀಕನಿಗೆ ಬುದ್ಧಿವಾದ ಹೇಳಿದ್ದಾರೆ.
కుక్కలు ఇంట్లోకి వస్తున్నాయని 100 నెంబర్‌కి కాల్ చేసి కంప్లేట్ చేస్తున్న మనుషులు.pic.twitter.com/MH0imz02h6
— Telugu Scribe (@TeluguScribe)May 28, 2024

ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ಬಗ್ಗೆ ನೆಟ್ಟಿಗರು ವಿಭಿನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಪೊಲೀಸರು ಹೇಳಿದ್ದರಲ್ಲಿ ತಪ್ಪೇನಿಲ್ಲ, ಸಣ್ಣ ಪುಟ್ಟ ವಿಷಯಗಳಿಗೂ ಕರೆ ಮಾಡುವುದು ಸರಿಯಲ್ಲ ಎನ್ನುತ್ತಾರೆ ಕೆಲವರು. ಆದರೆ ಇನ್ನು ಕೆಲವರು ಆ ವ್ಯಕ್ತಿ ಮಾಡಿದ್ದರಲ್ಲಿ ತಪ್ಪೇನಿಲ್ಲ, ನಾಯಿ ಕಚ್ಚುತ್ತದೆ ಎಂಬ ಭಯದಿಂದ ಪೊಲೀಸರಿಗೆ ಕರೆ ಮಾಡಿದ್ದಾನೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ.(ಏಜೆನ್ಸೀಸ್​)
ಸ್ಟಾರ್ಕ್​ಗೆ 24.75 ಕೋಟಿ ನಿಮ್ಗೆ ಮಾತ್ರ 55 ಲಕ್ಷ ರೂ. ಏಕೆ? ರಿಂಕು ಕೊಟ್ಟ ಉತ್ತರಕ್ಕೆ ತಲೆಬಾಗಿತು ಕ್ರೀಡಾಜಗತ್ತು!

ಕಿರಾತಕ ಚಿತ್ರದಲ್ಲಿ ಯಶ್​ ತಂಗಿ ಪಾತ್ರದಲ್ಲಿ ನಟಿಸಿದ್ದ ಅರ್ಪಿತಾ ಈ ಹೇಗಿದ್ದಾರೆ ಗೊತ್ತಾ? ಎಷ್ಟು ಬದಲಾಗಿದ್ದಾರೆ ನೋಡಿ…

ಆನಂದ್​ ನೀನು ನನ್ನ ಕುಟುಂಬದವನು ನನ್ನನ್ಯಾಕೆ ಇಕ್ಕಟ್ಟಿಗೆ ಸಿಲುಕಿಸುತ್ತೀಯಾ? ಕೊನೆಗೂ ನಿಜ ಒಪ್ಪಿಕೊಂಡ್ರಾ ರಶ್ಮಿಕಾ?

ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:11 − three =
Remember me
