ಚೆನ್ನೈ:ಕಸದ ತೊಟ್ಟಿಯಲ್ಲಿ ಪತ್ತೆಯಾದ ಬರೋಬ್ಬರಿ 5 ಲಕ್ಷ ರೂಪಾಯಿ ಮೌಲ್ಯದ ಡೈಮಂಡ್​ ನೆಕ್ಲೇಸ್​ ಅನ್ನು ಮಾಲೀಕರಿಗೆ ಹಿಂತಿರುಗಿಸುವ ಮೂಲಕ ಪೌರ ಕಾರ್ಮಿಕರು ಪ್ರಾಮಾಣಿಕತೆಯನ್ನು ಮೆರೆದಿದ್ದಾರೆ. ಈ ಘಟನೆ ತಮಿಳುನಾಡು ರಾಜಧಾನಿ ಚೆನ್ನೈನಲ್ಲಿ ನಡೆದಿದೆ.
ಚೆನ್ನೈ ನಗರದ ನಿವಾಸಿ ದೇವರಾಜ್​ ಎಂಬುವರು ಬೆಲೆ ಬಾಳುವ ಆಭರಣವನ್ನು ಆಕಸ್ಮಿಕವಾಗಿ ಕಳೆದುಕೊಂಡಿದ್ದರು. ಮುಂಬರುವ ತನ್ನ ಮಗಳ ಮದುವೆಗಾಗಿ ದೇವರಾಜ್​ ಅವರ ತಾಯಿ ಆ ಆಭರಣವನ್ನು ಉಡುಗೊರೆಯಾಗಿ ನೀಡಿದ್ದರು. ಆಭರಣವನ್ನು ಕಳೆದುಕೊಂಡಿರುವುದು ತನ್ನ ಅರಿವಿಗೆ ಬರುತ್ತಿದ್ದಂತೆ ತಕ್ಷಣ ಸ್ಥಳೀಯ ಪಾಲಿಕೆ ಅಧಿಕಾರಿಗಳನ್ನು ಸಂಪರ್ಕಿಸಿದ್ದರು.
ತ್ಯಾಜ್ಯ ನಿರ್ವಹಣೆಗಾಗಿ ಚೆನ್ನೈ ಕಾರ್ಪೊರೇಷನ್ ಗುತ್ತಿಗೆ ಪಡೆದಿರುವ ಉರ್ಬಸರ್ ಸುಮೀತ್ ಅವರ ಚಾಲಕ ಜೆ. ಆಂಥೋನಿಸಾಮಿ ನೇತೃತ್ವದಲ್ಲಿ ಸಮೀಪದ ಕಸದ ತೊಟ್ಟಿಗಳಲ್ಲಿ ಹುಡುಕಾಟವನ್ನು ಪ್ರಾರಂಭಿಸಲಾಯಿತು. ಈ ವೇಳೆ ಹಿರಿಯ ಅಧಿಕಾರಿಗಳು ಕೂಡ ಸ್ಥಳದಲ್ಲಿದ್ದರು. ತೀವ್ರ ಹುಡುಕಾಟದ ಬಳಿಕ ಕಸದ ತೊಟ್ಟಿಯೊಳಗೆ ಹಾರದಲ್ಲಿ ಸಿಕ್ಕಿಕೊಂಡಿದ್ದ ಡೈಮಂಡ್​ ನೆಕ್ಲೇಸ್​ ಪತ್ತೆಯಾಯಿತು.
ತನ್ನ ಮನವಿಗೆ ತಕ್ಷಣ ಸ್ಪಂದಿಸಿ ಬೆಲೆ ಬಾಳುವ ಉಡುಗೊರೆಯನ್ನು ಹುಡುಕಿ ಕೊಟ್ಟಿದ್ದಕ್ಕೆ ದೇವರಾಜ್ ಅವರು ಅಂಥೋನಿಸಾಮಿ ಹಾಗೂ ಕಸ ಸಂಗ್ರಹ ಸಿಬ್ಬಂದಿಗೆ ಕೃತಜ್ಞತೆ ಸಲ್ಲಿಸಿದರು.(ಏಜೆನ್ಸೀಸ್​)
ಒಂದೇ ಪಂದ್ಯದಲ್ಲಿ ಇಬ್ಬರು ಬೆನ್​ ಸ್ಟೋಕ್ಸ್​! ಒಂದು ಕ್ಷಣ ನಮ್ಮ ಕಣ್ಣುಗಳನ್ನೇ ನಂಬಲಾಗದ ದೃಶ್ಯವಿದು

ಕುತೂಹಲ ಮೂಡಿಸಿದ ಫ್ರಾಂಚೈಸಿ ಮಾಲೀಕರು-ಬಿಸಿಸಿಐ ಸಭೆ: ರಿಟೇನ್ ಆಟಗಾರರ ಸಂಖ್ಯೆ ನಿರ್ಧಾರ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four + eleven =
Remember me
