ಮುಂಬೈ:ಕಳೆದ 23 ವರ್ಷಗಳಿಂದ ಪೊಲೀಸರ ಕೈಗೆ ಸಿಗದಂತೆ ಓಡಾಡಿಕೊಂಡಿದ್ದ ವಜ್ರದ ಕಳ್ಳಸಾಗಾಣಿಕೆದಾರ ಕೊನೆಗೂ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ಈತನನ್ನು ಬಂಧಿಸಿರುವ ಮುಂಬೈ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಹರೀಶ್​ ಕಲ್ಯಾಣ್​ದಾಸ್​ ಭಾವಸಾರ ಅಲಿಯಾಸ್​ ಪರೇಶ್​ ಜಾವೇರಿ (53) ಬಂಧಿತ. ಈತ 1997ರಲ್ಲಿ 130 ಕೋಟಿ ರೂಪಾಯಿ ಮೌಲ್ಯದ ವಜ್ರಗಳನ್ನು ಕಳ್ಳಸಾಗಣೆ ಮಾಡಿದ್ದ. ಇದಕ್ಕೆ ಈತನ ಸಹೋದರ ಸಹಕರಿಸಿದ್ದ. ಅಂದಿನಿಂದಲೂ ಹುಡುಕಾಡುತ್ತಿದ್ದ ಮುಂಬೈ ಪೊಲೀಸರಿಗೆ ಈತ ಬುಧವಾರ ಸಿಕ್ಕಿಬಿದ್ದಿದ್ದಾನೆ.
ಇದನ್ನೂ ಓದಿ:ಪೊಲೀಸರಿಗೆ 25 ಸಾವಿರ ಫೇಸ್‌ ಷೀಲ್ಡ್‌: ಮುಂದುವರೆದಿದೆ ನಟ ಸೋನುಸೂದ್‌ ಸೇವೆ
ಪರೇಶ್​ ಜಾವೇರಿ ತನ್ನ ಸಹೋದರನ ಜತೆಗೂಡಿ ಸಿಂಗಾಪುರದಿಂದ ಕಚ್ಚಾ ಚಿನ್ನ ಮತ್ತು ವಜ್ರಗಳನ್ನು ಆಮದು ಮಾಡಿಕೊಳ್ಳುತ್ತಿದ್ದ. ಆದರೆ, ಯಾವುದಕ್ಕೂ ತೆರಿಗೆ ಪಾವತಿಸದೆ, ಕಳ್ಳಸಾಗಣೆ ಮಾಡುತ್ತಿದ್ದ. ಇದು ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯ ಪರೇಶ್​ ಮತ್ತು ಆತನ ಸಹೋದರ ವಿರುದ್ಧ ತನಿಖೆಗೆ ಆದೇಶಿಸಿದ್ದಲ್ಲದೆ, ಕಾಫೆಪೋಸಾ (ವಿದೇಶಿ ವಿನಿಮಯ ಸಂರಕ್ಷಣೆ ಮತ್ತು ಕಳ್ಳಸಾಗಾಣಿಕ ಕೃತ್ಯಗಳ ತಡೆ ಕಾಯ್ದೆ) ಕಾಯ್ದೆ, 1997ರಡಿ ಅವರಿಬ್ಬರನ್ನೂ ಬಂಧಿಸುವಂತೆ ಪೊಲೀಸರಿಗೆ ಸೂಚಿಸಿತ್ತು. ಆದರೆ, ಇಬ್ಬರೂ ತಲೆಮರೆಸಿಕೊಂಡಿದ್ದರು.
23 ವರ್ಷ ಇವರಿಬ್ಬರಿಗಾಗಿ ಪೊಲೀಸರು ಶೋಧ ನಡೆಸುತ್ತಲೇ ಇದ್ದರು. ಆದರೆ, ಪ್ರತಿ ಬಾರಿಯೂ ಪೊಲೀಸರಿಗೆ ವಂಚಿಸಿ ಕಣ್ತಪ್ಪಿಸಿಕೊಳ್ಳುತ್ತಿದ್ದ ಎನ್ನಲಾಗಿದೆ. ಆದರೆ, ಅದೃಷ್ಟ ಕೈಕೊಟ್ಟು ಇದೀಗ ಸಿಕ್ಕಿಬಿದ್ದಿದ್ದಾನೆ. ಈತನನ್ನು ಬಂಧಿಸಿರುವ ಪೊಲೀಸರು ಈತನ ಸಹೋದರ ಆಸ್ತಿಗಳನ್ನು ಜಪ್ತಿ ಮಾಡಿದ್ದಾರೆ.
video/ ಕಾಲು ಮುರಿದ ನೋವನ್ನೇ ಮರೆಸಿದ ‘ಕುರುಬನ ರಾಣಿ’, ಆಸ್ಪತ್ರೆಯಲ್ಲಿ ಮಲಗಿದ್ದರೂ ಡಾನ್ಸ್!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 − 13 =
Remember me
