ಡೆಹ್ರಾಡೂನ್​:ಉತ್ತರಾಖಂಡದ ಕಾಂಗ್ರೆಸ್​ ಮುಖಂಡ ಸೂರ್ಯಕಾಂತ್​ ಧಸಮಾನ್​ ಅವರು ಕೊವಿಡ್​-19 ಬಗ್ಗೆ ನೀಡಿದ ಹೇಳಿಕೆಯೊಂದು ತೀವ್ರ ವಿವಾದ ಸೃಷ್ಟಿಸಿದೆ.
ಕರೊನಾವನ್ನು ಕಳಿಸಿದ್ದು ಭಗವಾನ್ ಕೃಷ್ಣ ಎಂದು ಹೇಳಿ ಅನೇಕರ ಆಕ್ರೋಶಕ್ಕೆ ಕಾರಣವಾಗಿದ್ದಾರೆ. ನಾನೇ ಸೃಷ್ಟಿಕೃರ್ತ..ನಾನೇ ವಿನಾಶಕ ಎಂದು ಭಗವಾನ್​ ಶ್ರೀಕೃಷ್ಣನೇ ಹೇಳಿದ್ದಾಗಿ ಭಗವದ್ಗೀತೆಯಲ್ಲಿ ಉಲ್ಲೇಖವಾಗಿದೆ. ನಾನು ಇದನ್ನು ಪದೇಪದೆ ಹೇಳುತ್ತಿರುತ್ತೇನೆ. ಆ ದೇವರಿಂದಲೇ ಎಲ್ಲ. ಈಗಲೂ ಅಷ್ಟೇ, ಕರೊನಾ ವೈರಸ್​ ಜಗತ್ತಿಗೆ ಆಕ್ರಮಿಸಲೂ ಶ್ರೀಕೃಷ್ಣನೇ ಕಾರಣ. ಇಡೀ ವಿಶ್ವದಲ್ಲಿ ಏನೇ ನಡೆದರೂ, ಅದು ಭಗವಂತನ ಇಚ್ಛೆ. ಅವನಿಂದಲೇ ಎಲ್ಲ ಎಂದು ಹೇಳಿದ್ದರು.
ಅಷ್ಟಕ್ಕೇ ಸುಮ್ಮನಿರದೆ…ಕೊವಿಡ್​-19 ಮತ್ತು ಕೃಷ್ಣ ಇವೆರಡೂ ಶಬ್ದಗಳೂ ಕ ದಿಂದಲೇ ಶುರುವಾಗುತ್ತವೆ ಎಂದೂ ಹೇಳಿದ್ದರು.ಆದರೆ ಧಸಮಾನ್ ಅವರ ಹೇಳಿಕೆ ಇಂಟರ್​ನೆಟ್​ನಲ್ಲಿ ಸಿಕ್ಕಾಪಟೆ ಚರ್ಚೆ ಹುಟ್ಟುಹಾಕಿದೆ. ಸಾಂಕ್ರಾಮಿಕ ರೋಗಕ್ಕೆ ಕಾರಣ ದೇವರೇ ಎಂದು ಹೇಳಿದ ಕಾಂಗ್ರೆಸ್​ ಮುಖಂಡನ ವಿರುದ್ಧ ನೆಟ್ಟಿಗರು ಕಿಡಿಕಾರುತ್ತಿದ್ದಾರೆ. ಈ ಮಧ್ಯೆ ಸೂರ್ಯಕಾಂತ್​ ಧಸಮಾನ್​ ಅವರೂ ಕೂಡ, ತಮ್ಮ ಹೇಳಿಕೆಯನ್ನು ತಿರುಚಲಾಗಿದೆ ಎಂದು ನುಣುಚಿಕೊಂಡಿದ್ದಾರೆ. (ಏಜೆನ್ಸೀಸ್​)
ನಮ್ಮ ಬೆಂಬಲ ಬಿಜೆಪಿಗೆ ಎಂದ್ರು ಬಿಎಸ್​ಪಿ ಮುಖ್ಯಸ್ಥೆ ಮಾಯಾವತಿ; ಕಾಂಗ್ರೆಸ್​ ವಿರುದ್ಧ ಕಿಡಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 3 =
Remember me
