ಬೆಂಗಳೂರು:ಭಾರತದ ಯುವಜನತೆ ವಾರಕ್ಕೆ 70 ಗಂಟೆಗಳ ಕಾಲ ಕೆಸಲ ಮಾಡಬೇಕು ಎಂದು ದಿಗ್ಗಜ ಸಾಫ್ಟ್​ವೇರ್ ಕಂಪನಿಗಳ ಪೈಕಿ ಮುಂಚೂಣಿ ಸಂಸ್ಥೆ ಆಗಿರುವ ಇನ್​ಫೊಸಿಸ್​ನ ನಾರಾಯಣಮೂರ್ತಿ ಅವರು ಹೇಳಿದ್ದ ಮಾತುಗಳು ನಿನ್ನೆಯಿಂದ ಭಾರಿ ಸದ್ದು ಮಾಡುತ್ತಿವೆ.
ಭಾರತದ ವರ್ಕ್ ಕಲ್ಚರ್​ ಬದಲಾಗಬೇಕು, ಯುವಜನತೆ ವಾರಕ್ಕೆ 70 ಗಂಟೆಗಳ ಕಾಲ ಕೆಲಸ ಮಾಡಬೇಕು ಎಂದು ಅವರು ಹೇಳಿದ್ದ ಮಾತುಗಳಿಗೆ ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿದೆ. ಇವತ್ತಿಡೀ ಈ ವಿಷಯ ಚರ್ಚೆಯಲ್ಲಿದ್ದು, ಬಹುತೇಕ ಎಲ್ಲೆಡೆ ಟಾಪ್ ಟ್ರೆಂಡಿಂಗ್​ನಲ್ಲೂ ಇತ್ತು.
ಇದನ್ನೂ ಓದಿ:ನಾಳೆ ವರ್ಷದ ಕೊನೆಯ ಗ್ರಹಣ: ಆಪತ್ತು ಕಾದಿದೆಯೇ? ಯಾರ್ಯಾರಿಗೆ ಅಪಾಯಕಾರಿ?
ಕಳೆದ ಎರಡು ಮೂರು ದಶಕಗಳಲ್ಲಿ ಆರ್ಥಿಕವಾಗಿ ಗಣನೀಯ ಪ್ರಗತಿ ಕಂಡ ರಾಷ್ಟ್ರಗಳ ಜತೆ ಭಾರತ ಪೈಪೋಟಿ ನಡೆಸಬೇಕಾದರೆ ಭಾರತದ ವರ್ಕ್ ಕಲ್ಚರ್ ಬದಲಾಗಬೇಕು. ಇಲ್ಲಿನ ಯುವಜನತೆ ವಾರಕ್ಕೆ 70 ಗಂಟೆಗಳ ಕಾಲ ಕೆಲಸ ಮಾಡಬೇಕು ಎಂದು ಹೇಳುವುದರ ಜತೆಗೆ ಅವರು ಇನ್ನೊಂದು ಪ್ರಮುಖ ವಿಷಯವನ್ನು ಅದೇ ಸಂದರ್ಭದಲ್ಲಿ ಪ್ರಸ್ತಾಪಿಸಿದ್ದರು.
ಇದನ್ನೂ ಓದಿ:‘ವಾರಕ್ಕೆ 70 ಗಂಟೆ ದುಡಿಯಬೇಕು…’ಎಂಬ ಇನ್ಫೋಸಿಸ್ ನಾರಾಯಣ ಮೂರ್ತಿಯವರ ಸಲಹೆಗೆ ಯುವಕರ ಪ್ರತಿಕ್ರಿಯೆ ಹೇಗಿದೆ ಗೊತ್ತಾ?
ಆದರೆ ‘ವಾರಕ್ಕೆ 70 ಗಂಟೆಗಳ ಕೆಲಸದ ನಡುವೆ’ ಆ ಮಾತು ಕಳೆದುಹೋಯ್ತೇನೋ ಎಂಬಂತಾಗಿದೆ. ಅರ್ಥಾತ್, ವಾರಕ್ಕೆ 70 ಗಂಟೆಗಳ ಕಾಲ ಕೆಲಸ ಮಾಡಬೇಕು ಎಂಬ ವಿಷಯ ಚರ್ಚೆಯಾದಷ್ಟೂ ಆ ಇನ್ನೊಂದು ಗಂಭೀರ ಸಂಗತಿಯ ಬಗ್ಗೆ ಅಷ್ಟೇನೂ ಚರ್ಚೆ ಆಗಿಲ್ಲ.
ಇದನ್ನೂ ಓದಿ:ರಾತ್ರಿ ಸರಿಯಾಗಿ ನಿದ್ರೆ ಬರದಿದ್ದರೆ ಅದಕ್ಕೆ ಇವೇ ಕಾರಣಗಳಂತೆ!
ವಾರಕ್ಕೆ 70 ಗಂಟೆಗಳ ಕಾಲ ಕೆಲಸ ಮಾಡಬೇಕು ಎಂಬ ವಿಷಯದ ಜೊತೆಗೇ ಅವರು ದೇಶವನ್ನು ಕಾಡುತ್ತಿರುವ ಗಂಭೀರ ಸಮಸ್ಯೆಯಾದ ಭ್ರಷ್ಟಾಚಾರದ ಬಗ್ಗೆ ಪ್ರಸ್ತಾಪಿಸಿದ್ದರು. ಸರ್ಕಾರ ಹಾಗೂ ಅಧಿಕಾರಿಗಳ ಭ್ರಷ್ಟಾಚಾರ ಪ್ರಗತಿಗೆ ತಡೆಯೊಡ್ಡುತ್ತಿದೆ ಎಂಬುದನ್ನೂ ನಾರಾಯಣಮೂರ್ತಿ ಹೇಳಿದ್ದರು. ಸರ್ಕಾರದ ಮಟ್ಟದಲ್ಲಿ ಭ್ರಷ್ಟಾಚಾರವನ್ನು ಸ್ವಲ್ಪಮಟ್ಟಿಗಾದರೂ ತಗ್ಗಿಸದಿದ್ದರೆ ನಾವು ತೀರ ಮುಂದುವರಿದ ರಾಷ್ಟ್ರಗಳೊಂದಿಗೆ ಪೈಪೋಟಿ ನಡೆಸಲು ಸಾಧ್ಯವಿಲ್ಲ ಎಂದಿದ್ದರು. ಆದರೆ ವಾರಕ್ಕೆ 70 ಗಂಟೆಗಳ ಕೆಲಸದ ವಿಚಾರಕ್ಕೆ ಸಿಕ್ಕಷ್ಟು ಪ್ರಾಧಾನ್ಯತೆ ಆ ವಿಷಯಕ್ಕೆ ಸಿಗಲಿಲ್ಲ.
ಹುಲಿ ಉಗುರು: ಏನಿದರ ಧರಿಸುವಿಕೆ ಹಿಂದಿನ ಅಸಲಿಯತ್ತು? ನಕಲಿ ಶೋಕಿಯೋ, ಬಚಾವಾಗೋ ಕರಾಮತ್ತೋ?
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:nineteen + three =
Remember me
