ತಿರುವನಂತಪುರ: ನ್ಯಾಷನಲ್ ಇನ್​ವೆಸ್ಟಿಗೇಶನ್ ಏಜೆನ್ಸಿ (ಎನ್​ಐಎ) ತಂಡ ಕಳೆದ ವಾರ ಅಲ್​ ಕೈದಾ ಉಗ್ರರನ್ನು ಕೇರಳದಿಂದ ಬಂಧಿಸಿದ ಬೆನ್ನಿಗೆ, ಅನೇಕ ವಿಚಾರಗಳು ಬಹಿರಂಗವಾಗಿವೆ. ಕೇರಳದ ಹತ್ತು ಜಿಲ್ಲೆಗಳಲ್ಲಿ ಉಗ್ರರ ಸ್ಲೀಪರ್ ಸೆಲ್​​ಗಳು ಕೆಲಸ ಮಾಡುತ್ತಿವೆ ಎಂಬ ಆತಂಕಕಾರಿ ವಿಚಾರ ಬಹಿರಂಗವಾಗಿದೆ.
ಎನ್​ಐಎ ತನಿಖೆ ವೇಳೆ, ಈಗಾಗಲೇ ಬಂಧಿತ ಲಷ್ಕರ್ ಏ ತೊಯ್ಬಾ ಉಗ್ರ ತಡಿಯಂತವೀಡ್​ ನಜೀರ್, ಕಮ್ಯೂನಿಸ್ಟ್ ಉಗ್ರ ನಾಯಕ ಮಲ್ಲ ರಾಜಾ ರೆಡ್ಡಿ, ಅಬ್ದುಲ್ ನಾಸಿರ್ ಮದನಿ ಮತ್ತು ಮೂವರು ಅಲ್ ಕೈದಾ ಉಗ್ರರ ಬಂಧನದ ಬಳಿಕ ಸಾಕಷ್ಟು ಮಾಹಿತಿಗಳು ಬಹಿರಂಗವಾಗಿವೆ. ಇವರೆಲ್ಲರ ಕಾರ್ಯಕ್ಷೇತ್ರ ಮತ್ತು ಸಹಚರರ ಸಂಖ್ಯೆ ಗಮನಿಸಿ ಸಿಕ್ಕ ಮಾಹಿತಿ ಪ್ರಕಾರ ಕೇರಳದ ಹತ್ತು ಜಿಲ್ಲೆಗಳಲ್ಲಿ ಉಗ್ರರ ಸ್ಲೀಪರ್ ಸೆಲ್​ಗಳು ಸಕ್ರಿಯವಾಗಿವೆ. ಆ ಮೂಲಕ ಕೇರಳ ಉಗ್ರರಿಗೆ ಸುರಕ್ಷಿತ ತಾಣವಾಗಿ ಬದಲಾಗುತ್ತಿದೆ ಎಂಬ ಕಳವಳಕಾರಿ ವಿಚಾರ ಬೆಳಕಿಗೆ ಬಂದಿದೆ.
ಇದನ್ನೂ ಓದಿ:ಜನಪ್ರತಿನಿಧಿಗಳನ್ನು ಅಣಕಿಸಿ ರಸ್ತೆ ಹಳ್ಳದಲ್ಲಿ ಬಾಗಿನ ಸಲ್ಲಿಸಿದ ರೈತ ಸಂಘ
ಎನ್​ಐಎ ತಂಡ ಕರ್ನಾಟಕದಿಂದ ಕೆಲವು ಶಂಕಿತ ಉಗ್ರರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿತ್ತು. ಆಗ ಅವರು ನೀಡಿದ ಮಾಹಿತಿ ಪ್ರಕಾರ, ಉಗ್ರರು ಕೇರಳಕ್ಕೆ ಆಗಮಿಸುತ್ತಿದ್ದು, ವಿವಿಧೆಡೆ ಬೇರೆ ಬೇರೆ ವೇಷದಲ್ಲಿ ನೆಲೆ ಕಂಡುಕೊಳ್ಳುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿತ್ತು. ಇದನ್ನು ಕೇರಳ ಸರ್ಕಾರಕ್ಕೆ, ಪೊಲೀಸ್ ಇಲಾಖೆಗೆ ಒದಗಿಸಿದ್ದರೂ ಕ್ರಮ ತೆಗೆದುಕೊಳ್ಳದ ಕಾರಣ, ಉಗ್ರರು ಕೇರಳವನ್ನು ನೆಲೆಯಾಗಿ ಬಳಸಿಕೊಳ್ಳಲಾರಂಭಿಸಿದ್ದಾರೆ ಎಂಬ ಆರೋಪ ರಾಜಕೀಯವಾಗಿ ಕೇಳತೊಡಗಿದೆ. (ಏಜೆನ್ಸೀಸ್)
ಮನೆ ಬಾಡಿಗೆಗೆ ಕೇಳ್ತಾ ಬಂದವರು ಮಾಲೀಕನ ಹತ್ಯೆಗೆ ಯತ್ನಿಸಿದ್ರು..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve − six =
Remember me
