ಮುಂಬೈ:ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರು ಅಂಡರ್​ವರ್ಲ್ಡ್​ ಡಾನ್​ ಕರೀಮ್​ ಲಾಲ್​ರನ್ನು ಭೇಟಿ ಮಾಡಿದ್ದರು ಎಂಬ ಶಿವಸೇನಾ ಸಂಸದ ಸಂಜಯ್​ ರಾವತ್​ ಹೇಳಿಕೆ ತೀವ್ರ ಚರ್ಚೆಯನ್ನು ಹುಟ್ಟುಹಾಕಿದ್ದು, ಮುಂಬೈ ಅಂಡರ್​ವರ್ಲ್ಡ್​ನಿಂದ ಕಾಂಗ್ರೆಸ್​ ಫಂಡ್​ ಪಡೆಯುತಿತ್ತೇನೋ? ಎಂದು ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್​ ಸಂಶಯ ವ್ಯಕ್ತಪಡಿಸಿದ್ದಾರೆ.
ಇದರಿಂದ ರಾಜ್ಯದಲ್ಲಿ ರಾಜಕೀಯ ಅಪರಾಧೀಕರಣದ ಆರಂಭವಾಗಿರಬಹುದೇ? ಮುಂಬೈ ಮೇಲೆ ದಾಳಿ ನಡೆಸಿದವರಿಗೆ ಕಾಂಗ್ರೆಸ್​ ಬೆಂಬಲ ಸೂಚಿಸಿರಬಹುದೇ? ಆ ದಿನಗಳಲ್ಲಿ ಮಹಾರಾಷ್ಟ್ರ ಚುನಾವಣೆಯಲ್ಲಿ ಗೆಲುವು ಸಾಧಿಸಲು ಕಾಂಗ್ರೆಸ್​ ತೋಳ್ಬಲ ಉಪಯೋಗಿಸಿತ್ತೆ ಎಂದು ಫಡ್ನವಿಸ್​ ಪ್ರಶ್ನಿಸಿದ್ದಾರೆ.
ಇದನ್ನೂ ಓದಿ:ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರು ಮುಂಬೈ ಡಾನ್​ ಕರೀಮ್​ ಲಾಲ್​ರನ್ನು ಭೇಟಿಯಾಗಿದ್ದರು: ಸಂಜಯ್​ ರಾವತ್​
ಬುಧವಾರ ಮರಾಠಿ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಸಂಜಯ್​ ರಾವತ್​ ಮಾತನಾಡಿ, ಮುಂಬೈ ನಗರ ಆಯುಕ್ತ ಯಾರಾಗಬೇಕು? ಮತ್ತು ರಾಜ್ಯ ಸಚಿವಾಲಯ ಯಾರಾಗಬೇಕೆಂದು ಅಂಡರ್​ವರ್ಲ್ಡ್​ ನಿರ್ಧಾರ ಮಾಡುತ್ತಿತ್ತು. ಇಡೀ ಸಚಿವಾಲಯವೇ ಡಾನ್​ ಹಾಜಿ ಮಸ್ತಾನ್​ ನಗರದಲ್ಲಿದ್ದಾಗ ಭೇಟಿಯಾಗುತ್ತಿತ್ತು. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ದಕ್ಷಿಣ ಮುಂಬೈನಲ್ಲಿ ಡಾನ್​ ಕರೀಮ್​ ಲಾಲ್​ರನ್ನು ಭೇಟಿಯಾಗಿದ್ದರು ಎಂಬ ಆತಂಕಕಾರಿ ಮಾಹಿತಿಗಳನ್ನು ಸಂಜಯ್​ ರಾವತ್​ ಬಿಚ್ಚಿಟ್ಟಿದ್ದರು. ಇದು ಎಲ್ಲೆ ತೀವ್ರ ಚರ್ಚೆ ಹುಟ್ಟು ಹಾಕಿದೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:7 + 2 =
Remember me
