ಬೆಂಗಳೂರು:ಮೊನ್ನೆಯಂತೆ ಇಂದು ಬೆಳಗ್ಗೆ ಕೂಡಾ 11.58ರ ಹೊತ್ತಿಗೆ ಮತ್ತು ಮಧ್ಯಾಹ್ನ 12.12ರ ಹೊತ್ತಿಗೆ ಎರಡೆರಡು ಬಾರಿ ರಾಜ್ಯದ ಬಹುತೇಕರ ಮೊಬೈಲ್​ಗೆ ಬೀಪ್ ಸೌಂಡ್​ ಜತೆಯಲ್ಲಿ ಎಚ್ಚರಿಕೆ ಸಂದೇಶವೊಂದು ಬಂದಿದೆ. ಆದರೆ ಕೆಲವರ ಮೊಬೈಲ್​ಗೆ ಈ ಸಂದೇಶ ಬಂದಿಲ್ಲ. ಯಾಕೆ ಎನ್ನುವ ಪ್ರಶ್ನೆ ಇದೀಗ ಮುನ್ನೆಲೆಗೆ ಬಂದಿದೆ.
ಅಲರ್ಟ್ ಮೆಸೇಜ್ ಬರದೆ ಇರಲು ಸಂಭಾವ್ಯ ಕಾರಣ:1) ಅಲರ್ಟ್ ಮೆಸೇಜ್ ಸುಮಾರು 30 ನಿಮಿಷ ಕಾಲಘಟ್ಟದಲ್ಲಿ ಇರುತ್ತದೆ. ಈ ಅವಧಿಯಲ್ಲಿ ನಿಮ್ಮ ಮೊಬೈಲ್ ಸ್ವಿಚ್ ಆಫ್ ಆಗಿದ್ದರೆ ನಿಮಗೆ ಮೆಸೇಜ್ ಬಂದಿರುವುದಿಲ್ಲ.2) 30 ನಿಮಿಷದ ಅವಧಿಯೊಳಗೆ ನಿಮ್ಮ ಮೊಬೈಲ್ ಸ್ವಿಚ್ ಆನ್ ಆದಾಗ ಮೆಸೇಜ್ ಬರುತ್ತದೆ. ಅವಧಿ ಮೀರಿದ ಬಳಿಕ ಸ್ವಿಚ್ ಆನ್ ಮಾಡಿದರೂ ಮೆಸೇಜ್ ಬರುವುದಿಲ್ಲ.3) ನಿಮ್ಮ ಮೊಬೈಲ್​​ ಏರ್​ಪ್ಲೇನ್ ಮೋಡ್​ನಲ್ಲಿದ್ದರೂ ಅಲರ್ಟ್ ಮೆಸೇಜ್​​ ಬಂದಿರುವುದಿಲ್ಲ.4) ಏರ್​ಟೆಲ್, ಜಿಯೋ, ವೊಡಾಫೋನ್ ಇತ್ಯಾದಿ ಟೆಲಿಕಾಂ ಕಂಪನಿಗಳ ಬಳಕೆದಾರರಿಗೆ ಪ್ರತ್ಯೇಕವಾಗಿ ಈ ಅಲರ್ಟ್ ಮೆಸೇಜ್ ತಲುಪಿರುತ್ತದೆ.5) ಫೋನ್ ಸೆಟಿಂಗ್​ನಲ್ಲಿ ಎಮರ್ಜೆನ್ಸಿ ಅಲರ್ಟ್ ಸಿಸ್ಟಂ ಆಫ್ ಆಗಿರಬಹುದು.6 ) ನೀವು ಬಳಸುವ ಮೊಬೈಲ್​​ ಹಳೆಯದ್ದು, ಆಗಿದ್ದರೆ ಅಲರ್ಟ್ ಬರದೇ ಹೋಗಬಹುದು. ಎಮರ್ಜೆನ್ಸಿ ಸಿಸ್ಟಂ ವಾರ್ನಿಂಗ್ ವ್ಯವಸ್ಥೆಗೆ ನಿಮ್ಮ ಫೋನ್ ಹೊಂದಿಕೆಯಾಗಿರುವುದಿಲ್ಲ.8 ) ಪ್ರದೇಶವಾರು ಬೇರೆ ಬೇರೆ ಸಮಯದಲ್ಲಿ ಅಲರ್ಟ್ ಬಂದಿರಬಹುದು.
9) ನೀವು ಬಳಸುವ ಮೊಬೈಲ್​​ ಸಂಖ್ಯೆ ತುಂಬಾ ದಿನಗಳಿಂದ ಆಕ್ಟಿವ್​ ಆಗಿ ಇರದೆ ಇರಬಹುದು.
ಅಲರ್ಟ್​ ಮೆಸೇಜ್​ನಲ್ಲಿ ಏನಿದೆ?:ಇದು ಭಾರತ ಸರ್ಕಾರದ ದೂರಸಂಪರ್ಕ ಇಲಾಖೆಯಿಂದ ಸೆಲ್ ಬ್ರಾಡ್ ಕಾಸ್ಟಿಂಗ್ ಸಿಸ್ಟಮ್ ಮೂಲಕ ಕಳುಹಿಸಲಾದ ಮಾದರಿ ಪರೀಕ್ಷಾ ಸಂದೇಶವಾಗಿದೆ. ನಿಮ್ಮ ಕಡೆಯಿಂದ ಯಾವುದೇ ಕ್ರಿಯೆಯ ಅಗತ್ಯವಿಲ್ಲದ ಕಾರಣ ದಯವಿಟ್ಟು ಈ ಸಂದೇಶವನ್ನು ನಿರ್ಲಕ್ಷಿಸಿ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ಜಾರಿಗೊಳಿಸುತ್ತಿರುವ ಪ್ಯಾನ್-ಇಂಡಿಯಾ ತುರ್ತು ಎಚ್ಚರಿಕೆ ವ್ಯವಸ್ಥೆಯನ್ನು ಪರೀಕ್ಷಿಸಲು ಈ ಸಂದೇಶವನ್ನು ಕಳುಹಿಸಲಾಗಿದೆ. ಇದು ಸಾರ್ವಜನಿಕ ಸುರಕ್ಷತೆಯನ್ನು ಹೆಚ್ಚಿಸಲು ಮತ್ತು ತುರ್ತು ಸಂದರ್ಭಗಳಲ್ಲಿ ಸಕಾಲಿಕ ಎಚ್ಚರಿಕೆಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ ಎಂದು ಸಂದೇಶ ಮೆಸೇಜ್​ನಲ್ಲಿದೆ.ಈ ಅಲರ್ಟ್​ ಮೆಸೇಜ್​ ಈ ಬಗ್ಗೆ ಕೇಂದ್ರ ಸರ್ಕಾರದ ದೂರಸಂಪರ್ಕ ಇಲಾಖೆ ಮೊದಲೇ ಸ್ಪಷ್ಟನೆ ನೀಡಿತ್ತು. ಇದು ರಾಷ್ಟ್ರೀಯ ವಿಪತ್ತು ನಿರ್ವಹಣ ಪ್ರಾಧಿಕಾರದ ಸಹಯೋಗದಲ್ಲಿ ನಡೆದ ಸೆಲ್ ಬ್ರಾಡ್‌ಕಾಸ್ಟ್​ ಅಲರ್ಟ್​ ಸಿಸ್ಟಮ್​ ಪರೀಕ್ಷೆಯಾಗಿದೆ. ಅ. 12ರಂದು ಕರ್ನಾಟಕದಾದ್ಯಂತ ನಡೆಸುವುದಾಗಿ ರಾಜ್ಯದ ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಪತ್ರಿಕಾ ಪ್ರಕಟಣೆಯಲ್ಲಿ ಅ.10ರಂದು ತಿಳಿಸಿತ್ತು. ಮೊಬೈಲ್​ಗೆ ತುರ್ತು ಎಚ್ಚರಿಕೆಯ ಸಂದೇಶ ಬರಲಿದೆ. ಹೀಗಾಗಿ ಯಾರೂ ಗಾಬರಿ ಪಡಬೇಕಿಲ್ಲ. ಇದು ಸರ್ಕಾರದ ವತಿಯಿಂದಲೇ ನಡೆಯುತ್ತಿರುವ ಪರೀಕ್ಷೆಯಾಗಿದೆ ಎಂದು ಹೇಳಿತ್ತು.
ಏನಿದು ಸೆಲ್ ಬ್ರಾಡ್‌ಕಾಸ್ಟ್​ ಅಲರ್ಟ್​ ಸಿಸ್ಟಮ್​?: ಪ್ರಾಕೃತಿಕ ವಿಕೋಪದ ಸಂದರ್ಭದಲ್ಲಿ ನಮ್ಮ ನಾಗರಿಕರ ಅಮೂಲ್ಯವಾದ ಪ್ರಾಣವನ್ನು ಉಳಿಸಲು ತುರ್ತು ಸಂವಹನ ಅಭಿವೃದ್ಧಿಗಾಗಿ ಈ ಸೆಲ್ ಬ್ರಾಡ್‌ಕಾಸ್ಟ್​ ಅಲರ್ಟ್​ ಸಿಸ್ಟಮ್​ ಪರೀಕ್ಷೆಯನ್ನು ನಡೆಸಲಾಗುತ್ತಿದೆ. ಭಾರತದ ನಾಗರಿಕರು ಮತ್ತು ಸಮುದಾಯಗಳ ಸುರಕ್ಷತೆಗೆ ಪ್ರತಿ ಟೆಲಿಕಾಂ ಸೇವಾ ಪೂರೈಕೆದಾರರ ಮೇಲೆ ಸೆಲ್ ಬ್ರಾಡ್‌ಕಾಸ್ಟ್ ಅಲರ್ಟ್ ಸಿಸ್ಟಮ್‌ನ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಇದು ನಮ್ಮ ಬದ್ಧತೆಯೂ ಹೌದು ಎಂದು ದೂರಸಂಪರ್ಕ ಇಲಾಖೆ ತಿಳಿಸಿದೆ.

ಬೀಪ್​​​​​​ ಶಬ್ದದೊಂದಿಗೆ ನಿಮ್​ ಮೊಬೈಲ್​ಗೂ ಬಂತಾ ಅಲರ್ಟ್​ ಮೆಸೇಜ್? ಗಾಬರಿಯಾಗ್ಬೇಡಿ…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
Sign in to your account
Please enter an answer in digits:nine − 6 =
Remember me
