ಜೈಪುರ್​:ಕಾಂಗ್ರೆಸ್​ ವರಿಷ್ಠರೊಂದಿಗೆ ಮುನಿಸಿಕೊಂಡು, ಸಿಎಂ ಅಶೋಕ್​ ಗೆಹ್ಲೋಟ್​ ಜತೆ ಹಗೆತನ ಸಾಧಿಸಿಕೊಂಡು ಕಳೆದ ಒಂದು ತಿಂಗಳಿನಿಂದ ಪಕ್ಷದಿಂದ ದೂರವಿದ್ದ ಸಚಿನ್​ ಪೈಲಟ್​ ಮಂಗಳವಾರ ರಾತ್ರಿ ಜೈಪುರ್​ಗೆ ಮರಳಿದರು. ಅವರ ಬೆಂಬಲಿಗರು ಭರ್ಜರಿ ಸ್ವಾಗತ ನೀಡಿ ಬರಮಾಡಿಕೊಂಡರು.
ರಾಜಸ್ಥಾನದ ಡಿಸಿಎಂ ಹುದ್ದೆ ಹಾಗೂ ಕಾಂಗ್ರೆಸ್​ ರಾಜ್ಯಾಧ್ಯಕ್ಷ ಸ್ಥಾನದಿಂದ ವಜಾಗೊಂಡಿರುವ ಸಚಿನ್​ ಪೈಲಟ್​ ಸುದ್ದಿಗಾರರೊಂದಿಗೆ ಮಾತನಾಡಿ, ತಾನು ಯಾವುದೇ ಆಕಾಂಕ್ಷಿಯಲ್ಲ ಹಾಗೂ ಯಾವುದೇ ರಾಜಕೀಯ ಕಲಹಕ್ಕೂ ಅವಕಾಶವಿಲ್ಲ ಎಂದು ಹೇಳಿದರು.
ಇದನ್ನೂ ಓದಿ;ರಾಜಸ್ಥಾನದಲ್ಲಿ ತೇಪೆ ಹಚ್ಚಿದ್ರು, ಮಣಿಪುರದಲ್ಲಿ ಹೋಳಾಯ್ತು; 6 ಕಾಂಗ್ರೆಸ್​ ಶಾಸಕರ ರಾಜೀನಾಮೆ
ದೆಹಲಿಯಿಂದ ಜೈಪುರ್​ನಲ್ಲಿರುವ ತಮ್ಮ ನಿವಾಸಕ್ಕೆ ಮರಳಿದ ಪೈಲಟ್​ ಜತೆಗೆ ಬಂಡಾಯ ಶಾಸಕರು ಹಾಜರಿದ್ದರು. ಜಿಲ್ಲಾ ಕಾಂಗ್ರೆಸ್​ ಕಚೇರಿ ಎದುರು ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಸಚಿನ್​ ಪೈಲಟ್​ ಜೈಪುರ್​ಗೆ ಬರುವ ಮುನ್ನವೇ ಸಿಎಂ ಅಶೋಕ್​ ಗೆಹ್ಲೋಟ್​ ಜೈಸಲ್ಮೇರ್​ಗೆ ಪ್ರಯಾಣಿಸಿದರು. ಆಗಸ್ಟ್​ 14ರಂದು ಅಧಿವೇಶನ ಆರಂಭವಾಗಲಿರುವ ಹಿನ್ನೆಲೆ ಕಾಂಗ್ರೆಸ್​ ಶಾಸಕರನ್ನು ಇರಿಸಲಾಗಿರುವ ರೆಸಾರ್ಟ್​ನಲ್ಲಿಯೇ ಶಾಸಕಾಂಗ ಪಕ್ಷದ ಸಭೆ ನಡೆಸಲಿದ್ದಾರೆ. ಇದಕ್ಕೂ ಮುನ್ನ ಮಾತನಾಡಿದ ಅವರು, ಪಕ್ಷದ ಶಾಸಕರ ಮನಸ್ಸನ್ನು ಮತ್ತೆ ಗೆಲ್ಲುವ ಸವಾಲು ಹಾಗೂ ಹೊಣೆಗಾರಿಕೆ ಪೈಲಟ್​ದಾಗಿದೆ ಎಂದು ಪ್ರತಿಕ್ರಿಯಿಸಿದರು.
ಇದನ್ನೂ ಓದಿ;88 ಸಾವಿರಕ್ಕೂ ಅಧಿಕ ಬಿಎಸ್ಸೆನೆಲ್​ ನೌಕರರು ಮನೆಗೆ ಹೋಗ್ತಾರೆ; ಸಂಸ್ಥೆ ಖಾಸಗೀಕರಣ ಮಾಡ್ತಾರೆ …!
ಪಕ್ಷದಲ್ಲಿ ಶಾಂತಿ ಹಾಗೂ ಭಾತೃತ್ವ ನೆಲೆಸಿರಬೇಕು. ಮೂರು ಸದಸ್ಯರ ಸಮಿತಿ ಕೈಗೊಳ್ಳುವ ನಿರ್ಣಯಗಳನ್ನು ಆಧರಿಸಿಯೇ ಮುಂದಿನ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ಗೆಹ್ಲೋಟ್​ ಮತ್ತೊಮ್ಮೆ ಸ್ಪಷ್ಟಪಡಿಸಿದರು.
ಎರಡೇ ವಾರದಲ್ಲಿ 97 ಸಾವಿರ ಮಕ್ಕಳಲ್ಲಿ ಸೋಂಕು; ಶಾಲೆಗಳ ಮರು ಆರಂಭ ನಿರ್ಧಾರ ಹುಟ್ಟು ಹಾಕಿದೆ ಭಾರಿ ಚರ್ಚೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:6 + 20 =
Remember me
