ಕಣ್ಣೂರು:ಮಳೆಗಾಲ ಬಂತೆಂದರೆ ಸಾಕು ಹಾವುಗಳು ಬೆಚ್ಚನೆಯ ಪ್ರದೇಶವನ್ನು ಹುಡುಕಿಕೊಂಡು ಬರುತ್ತವೆ. ಈ ವೇಳೆ ಶೂ, ಹೆಲ್ಮೆಟ್​, ಬೈಕ್​ಗಳಲ್ಲಿ ಅಷ್ಟೇ ಯಾಕೆ ಮನೆಗಳಲ್ಲಿನ ಇಕ್ಕಾಟದ ಪ್ರದೇಶಗಳಲ್ಲಿ ಹಾವುಗಳು ಅಡಗಿಕೊಳ್ಳುವುದನ್ನು ನಾವು ನೋಡಿದ್ದೇವೆ. ಅದೇ ರೀತಿ ಹಲ್ಮೆಟ್ ಒಳಗೆ ದೈತ್ಯಾಕಾರದ ಹೆಬ್ಬಾವು ಪ್ರತ್ಯಕ್ಷವಾಗಿದೆ.​ ಆಘಾತಕಾರಿ ಸಂಗತಿ ಏನೆಂದರೆ, ಹಾವನ್ನು ಗಮನಿಸದೇ ಹೆಲ್ಮೆಟ್​ ಧರಿಸಿದ ಯುವಕನಿಗೆ ಹೆಬ್ಬಾವು ಸಹ ಕಚ್ಚಿದೆ.
ಈ ಘಟನೆ ಕೇರಳ ಕಣ್ಣೂರಿನ ಇರಿಟಿಯಲ್ಲಿ ನಿನ್ನೆ (ಜೂನ್​ 01) ನಡೆದಿದೆ. ಪಟಿಯೂರು ನೀತಿಯೋಟಿ ಮೂಲದ ಕೆ. ರತೀಶ್‌ ಎಂಬುವರ ತಲೆಗೆ ಹಾವು ಕಚ್ಚಿದೆ. ಮನೆ ಮುಂದೆ ನಿಲ್ಲಿಸಿದ್ದ ಬೈಕ್​ನಲ್ಲಿ ಯುವಕನ ಹೆಲ್ಮೆಟ್ ಇತ್ತು. ಬೆಚ್ಚಗಿನ ಪ್ರದೇಶವನ್ನು ಹುಡುಕಿ ಬಂದ ಮರಿ ಹೆಬ್ಬಾವು ಹೆಲ್ಮೆಟ್​ ಒಳಗೆ ನುಸುಳಿತ್ತು. ಬೆಳಗ್ಗೆ ಕೆಲಸಕ್ಕೆ ತೆರಳಿದ ಯುವಕ ಹೆಲ್ಮೆಟ್​ ಪರಿಶೀಲಿಸದೇ ಧರಿಸಿದ್ದ.
ಏನೋ ಕಚ್ಚಿದಂತೆ ಭಾಸವಾದಾಗ ಯುವಕ ತನ್ನ ಹೆಲ್ಮೆಟ್​ ತೆಗೆದು ನೋಡಿದಾಗ ಹೆಬ್ಬಾವು ಕಂಡು ಬೆಚ್ಚಿಬಿದ್ದಿದ್ದಾನೆ. ತಕ್ಷಣ ಹೆಲ್ಮೆಟ್​ ಅನ್ನು ನೆಲಕ್ಕೆ ಬೀಸಾಡಿದ್ದಾರೆ. ಈ ವೇಳೆ ಹಾವು ಹೆಲ್ಮೆಟ್​ನಿಂದ ಇಳಿದು ಹೋಯಿತು. ಹಾವು ಕಚ್ಚಿದ ಬಗ್ಗೆ ರತೀಶ್​ ತನ್ನ ಪಾಲಕರಿಗೆ ಮಾಹಿತಿ ನೀಡಿದನು. ಆದರೆ, ತನಗೆ ಕಚ್ಚಿದ ಹಾವು ಯಾವುದು ಎಂದು ಆತನಿಗೆ ತಿಳಿದಿರಲಿಲ್ಲ.
ಪಾಲಕರಿಗೆ ಮಾಹಿತಿ ತಿಳಿದ ಕೂಡಲೇ ರತೀಶ್​ನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ನಡೆಸಿದ ಪರೀಕ್ಷೆಯಲ್ಲಿ ವಿಷರಹಿತ ಹೆಬ್ಬಾವು ಕಚ್ಚಿರುವುದು ಬೆಳಕಿಗೆ ಬಂದಿದೆ. ಅಂದಹಾಗೆ ರತೀಶ್​ ಅವರು ಅರಣ್ಯ ಇಲಾಖೆಯ ಹಂಗಾಮಿ ಉದ್ಯೋಗಿಯಾಗಿದ್ದಾರೆ.
ಸಾರ್ವಜನಿಕರು ಗಮನಿಸಬೇಕಾದ ಸಂಗತಿ ಏನೆಂದರೆ, ಹಾವುಗಳು ಬೇಸಿಗೆಯಲ್ಲಿ ತಣ್ಣನೆ ಮತ್ತು ಮಳೆಗಾಲದಲ್ಲಿ ಬೆಚ್ಚನೆಯ ಪ್ರದೇಶಗಳನ್ನು ಹುಡುಕಿ ಬರುವುದು ಹೆಚ್ಚು. ಹೀಗಾಗಿ ಹಾವು ಕಡಿತದ ಘಟನೆಗಳೂ ಹೆಚ್ಚುತ್ತವೆ. ಮನೆಗಳಲ್ಲಿ ಹೊಂಡ ಮತ್ತು ರಂಧ್ರಗಳಿದ್ದರೆ ಅವುಗಳನ್ನು ಸಾಧ್ಯವಾದಷ್ಟು ಬೇಗ ಮುಚ್ಚಬೇಕು. ಹೆಲ್ಮೆಟ್ ಮತ್ತು ಬೂಟುಗಳನ್ನು ಧರಿಸುವ ಮೊದಲು, ಏನಾದರೂ ಇದೆಯಾ ಎಂಬುದನ್ನು ಪರಿಶೀಲಿಸಬೇಕು.
ಮನೆ ಮತ್ತು ಸುತ್ತಮುತ್ತಲಿನ ಪರಿಸರವನ್ನು ಯಾವಾಗಲೂ ಸ್ವಚ್ಛವಾಗಿಟ್ಟುಕೊಳ್ಳುವುದು ಅತ್ಯಗತ್ಯ. ಹಾವುಗಳು ಸಾಮಾನ್ಯವಾಗಿ ಇದ್ದಿಲಿನ ಒಲೆಗಳು, ಮರದ ದಿಮ್ಮಿಗಳು, ಹುಲ್ಲು, ಕಲ್ಲುಗಳು ಮತ್ತು ಪ್ಲಾಸ್ಟಿಕ್ ವಸ್ತುಗಳ ನಡುವೆ ಇರುತ್ತವೆ. ಆದ್ದರಿಂದ, ಅವುಗಳನ್ನು ಮನೆಯ ಸುತ್ತಲೂ ಅಥವಾ ಕಿಟಕಿಗಳ ಬಳಿ ಸಂಗ್ರಹಿಸದಂತೆ ಎಚ್ಚರಿಕೆ ವಹಿಸಬೇಕು. ಮನೆ ಆವರಣದಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಿ. ನೀರಿದ್ದರೆ ಹಾವುಗಳನ್ನು ವಿಶೇಷವಾಗಿ ಜಲಚರ ಹಾವುಗಳನ್ನು ಆಕರ್ಷಿಸುತ್ತದೆ. ತೋಟಗಳಲ್ಲಿ ನೀರು ನಿಲ್ಲಲು ಬಿಡಬೇಡಿ. ಮನೆಯ ಆವರಣದಲ್ಲಿ ದನದ ಕೊಟ್ಟಿಗೆ ಅಥವಾ ಕೋಳಿ ಗೂಡು ಇದ್ದರೆ ಎಚ್ಚರಿಕೆ ವಹಿಸಬೇಕು. ಕೋಳಿ ಗೂಡುಗಳಲ್ಲಿ ಹಾವುಗಳ ಉಪಸ್ಥಿತಿ ಸಾಮಾನ್ಯವಾಗಿರುತ್ತವೆ.
ಬೆಳ್ಳುಳ್ಳಿಯನ್ನು ಪುಡಿಮಾಡುವುದು ಮತ್ತು ಸುಗಂಧ ದ್ರವ್ಯವನ್ನು ಸಿಂಪಡಿಸುವುದರಿಂದ ಸ್ವಲ್ಪ ಮಟ್ಟಿಗೆ ಹಾವುಗಳನ್ನು ದೂರವಿಡಬಹುದು. ಬೆಳ್ಳುಳ್ಳಿಯನ್ನು ನುಜ್ಜುಗುಜ್ಜು ಮಾಡಿ ಮತ್ತು ನೀರಿನಲ್ಲಿ ಮಿಶ್ರಣ ಮಾಡಿ ಮತ್ತು ಈ ನೀರನ್ನು ಮನೆಯ ಸುತ್ತಲೂ ಸಿಂಪಡಿಸಿ. ಪುಡಿಮಾಡಿದ ಈರುಳ್ಳಿ ಅಥವಾ ರಸವನ್ನು ಮನೆಯ ಸುತ್ತಲೂ ಸಿಂಪಡಿಸಬಹುದು. ಇದರಲ್ಲಿರುವ ಗಂಧಕದ ವಾಸನೆ ಹಾವುಗಳು ಬರದಂತೆ ತಡೆಯುತ್ತದೆ.(ಏಜೆನ್ಸೀಸ್​)
ನುಗ್ಗೆಕಾಯಿ ಬೇಯಿಸಿದ ನೀರು ಕುಡಿಯಿರಿ.. ನಂತ್ರ ನಿಮ್ಮ ಆರೋಗ್ಯದಲ್ಲಾಗುವ ಜಾದೂ ನೋಡಿ…

ನನಗೆ ಆ ಸಮಸ್ಯೆ ಇದೆ..ಈಗಲೂ ಆ ನೋವಿನಿಂದ ನರಳುತ್ತಿದ್ದೇನೆಂದ ಶ್ರುತಿ ಹಾಸನ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 1 =
Remember me
