ಬೆಂಗಳೂರು:ಕೆಲವು ಬಟ್ಟೆಗಳು ನಮಗೆ ಇಷ್ಟವಾದರೆ ಸಾಕು ನಾವು ಖರೀದಿ ಮಾಡುತ್ತೇವೆ. ಹೆಚ್ಚಿನ ಬಟ್ಟೆಗಳು ನೋಡಲು ಒಂದೇತರ ಆಗಿರುತ್ತವೆ. ಆದರೆ ವಾಸ್ತವವಾಗಿ ಅವು ವಿಭಿನ್ನ ಹೆಸರುಗಳಿಂದ ಗುರುತಿಸಲಾಗುತ್ತದೆ.  ಬಹುತೇಕ 99 ಪ್ರತಿಶತ ಜನರಿಗೆ ಕೋಟ್ VS ಬ್ಲೇಜರ್ ನಡುವಿನ ವ್ಯತ್ಯಾಸ ಇವೆರಡರ ನಡುವಿನ ವ್ಯತ್ಯಾಸವನ್ನು ಹೇಳಲು ಸಾಧ್ಯವಿಲ್ಲ. ಬನ್ನಿ ನಾವು ಇಂದು ಈ ಗೊಂದಲಕ್ಕೆ ಪರಿಹಾರ ನೀಡುತ್ತೇವೆ.
ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅನೇಕ ಜನರು ಕೋಟ್ ಮತ್ತು ಬ್ಲೇಜರ್ ನಡುವಿನ ವ್ಯತ್ಯಾಸವೇನು ಎಂದು ಕೇಳಿದ್ದಾರೆ. ಪ್ರಶ್ನೆಗೆ ಪ್ರತಿಕ್ರಿಯೆಯಾಗಿ ಅನೇಕ ಬಳಕೆದಾರರು ವ್ಯತ್ಯಾಸವನ್ನು ವಿವರಿಸಲು ಪ್ರಯತ್ನಿಸಿದರು. ಈ ಪ್ರತಿಕ್ರಿಯೆಗಳಿಂದ ಹಲವಾರು ಪ್ರಮುಖ ಅಂಶಗಳು ಹೊರಹೊಮ್ಮಿದವು. ಆದ್ದರಿಂದ, ಕೋಟ್ ಮತ್ತು ಬ್ಲೇಜರ್ ನಡುವಿನ ಪ್ರಾಥಮಿಕ ವ್ಯತ್ಯಾಸವೆಂದು ತಿಳಿದುಕೊಳ್ಳೋಣ…
ಕೋಟ್ ಎಂದರೇನು?:ಕೋಟ್ ಅನ್ನು ಸೂಟ್ ಎಂದು ಪರಿಗಣಿಸಲಾಗುತ್ತದೆ.  ಅಂದರೆ ಕೋಟ್​ಗೆ ಹೊಂದಿಗೆ ಆಗುವ ಪ್ಯಾಂಟ್ ಬರುತ್ತದೆ. ಕೋಟನ್ನು ಧರಿಸಿದರೆ ಆಫೀಶಿಯಲ್​ ಆಗಿ ಕಾಣಿಸಿಕೊಳ್ಳುತ್ತಾರೆ. ಸಾಮಾನ್ಯವಾಗಿ ಕೋಟ್ ಅಥವಾ ಸೂಟ್ ಕಡು ಬಣ್ಣದಲ್ಲಿರುತ್ತದೆ. ಕೋಟುಗಳನ್ನು ಸಾಮಾನ್ಯವಾಗಿ ಟೆರ್ರಿ, ಉಣ್ಣೆಯ ಬಟ್ಟೆಗಳಿಂದ ತಯಾರಿಸಲಾಗುತ್ತದೆ.
ಬ್ಲೇಜರ್‌ ಎಂದರೇನು?: ಬ್ಲೇಜರ್‌ಗಳನ್ನು ಪ್ರತ್ಯೇಕವಾಗಿ ಖರೀದಿಸಬಹುದು. ಇದನ್ನು ಯಾವುದೇ ಪ್ಯಾಂಟ್ ಜೀನ್ಸ್‌ನೊಂದಿಗೆ ಧರಿಸಬಹುದು. ಬ್ಲೇಜರ್‌ಗಳನ್ನು ಯಾವುದೇ ಸಭೆ ಸಮಾರಂಭಗಳಲ್ಲಿ ಯಾವುದೇ ಪ್ಯಾಂಟ್​​ಗೂ ಧರಿಸಬಹುದು. ಬ್ಲೇಜರ್‌ಗಳನ್ನು ಯಾವುದೇ ಬಟ್ಟೆಯಿಂದ ತಯಾರಿಸಬಹುದು ಬ್ಲೇಜರ್ ಯಾವುದೇ ಬಣ್ಣವಾಗಿರಬಹುದು.
(ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಇಂಟರ್ನೆಟ್‌ನಲ್ಲಿರುವ ಮಾಹಿತಿ ಸಂಗ್ರಹಿಸಲಾಗಿದೆ ಎಂಬುದನ್ನು ಗಮನಿಸಬಹುದು.)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 + eight =
Remember me
