ನವದೆಹಲಿ:ಇಲ್ಲೊಬ್ಬ ಬುದ್ಧಿಮಾಂದ್ಯ ವ್ಯಕ್ತಿ ಎಂಟು ತಿಂಗಳ ಹಿಂದೆ ತಪ್ಪಿಸಿಕೊಂಡು ಪರದಾಡುತ್ತಿದ್ದು, ಕೊನೆಗೂ ಒಂದೇ ಒಂದು ಪದದಿಂದಾಗಿ ಈತ ಮತ್ತೆ ಮನೆ ಸೇರುವಂತಾಗಿದೆ. 30 ವರ್ಷದ ಈ ಬುದ್ಧಿಮಾಂದ್ಯ ವ್ಯಕ್ತಿಯನ್ನು ಪುನಃ ತನ್ನ ಮನೆಯವರೊಂದಿಗೆ ಸೇರಿಸುವ ಮೂಲಕ ದೆಹಲಿ ಪೊಲೀಸರು ಮಾನವೀಯತೆ ಮೆರೆದಿದ್ದಾರೆ.
ಫೆ. 23-24ರ ರಾತ್ರಿ ಗಸ್ತಿನಲ್ಲಿದ್ದ ದೆಹಲಿ ಪೊಲೀಸ್ ಸಿಬ್ಬಂದಿಗೆ ದೆಹಲಿಯ ಸುಲ್ತಾನ್​ಪುರ ಗ್ರಾಮದಲ್ಲಿ ಈ ವ್ಯಕ್ತಿ ಕಾಣಿಸಿದ್ದಾನೆ. ಪೊಲೀಸರು ಈತನನ್ನು ವಿಚಾರಿಸಿದರೆ ಒಂದೇ ಒಂದು ಪದ ಬಿಟ್ಟು ಬೇರೇನೂ ಹೇಳುತ್ತಿರಲಿಲ್ಲ. ಆದರೂ ಬೇಸರಗೊಳ್ಳದ ಪೊಲೀಸ್ ಅದೊಂದು ಪದವನ್ನೇ ಆಧಾರವಾಗಿಟ್ಟುಕೊಂಡು ತನಿಖೆ ನಡೆಸಿ ಕೊನೆಯೂ ಈ ವ್ಯಕ್ತಿಯನ್ನು ಮನೆಯವರೊಂದಿಗೆ ಸೇರಿಸಿದ್ದಾರೆ.
ಇದನ್ನೂ ಓದಿ:ಬೈಕ್​ನಲ್ಲಿ ಹೋಗುವಾಗ ಪ್ರಿಯಕರನ ಬೆನ್ನಿಗೆ ಇರಿದ ಪ್ರೇಯಸಿ; ಬಿದ್ದರೂ ಬಿಡದೆ ಮತ್ತೆ ಮತ್ತೆ ಇರಿದು ಸಾಯಿಸಿದಳು!
ಪೊಲೀಸರು ಕೇಳಿದಾಗ ತನ್ನ ಹೆಸರು ಗೌರವ್ ಎಂಬುದನ್ನು ಬಿಟ್ಟರೆ ಆತ ಹೇಳುತ್ತಿದ್ದುದು ಒಂದೇ ಪದ, ಅದು ‘ಹಾಸ್ಪಿಟಲ್’. ಹಾಸ್ಪಿಟಲ್​ ಎಂಬ ಪದವನ್ನು ಬಿಟ್ಟು ಬೇರೇನೂ ಹೇಳದ ಈ ವ್ಯಕ್ತಿಯನ್ನು ಮನೆ ಸೇರಿಸುವ ಸಲುವಾಗಿ ಪೊಲೀಸರು ಸುತ್ತಮುತ್ತ ತಮ್ಮ ನೆಟ್​ವರ್ಕ್ ಬಳಸಿ ವಿಚಾರಿಸಿದರೂ ಸುಳಿವು ಸಿಗಲಿಲ್ಲ.
ನಂತರ ಮನೋವೈದ್ಯರ ಬಳಿಗೆ ಕರೆದೊಯ್ದು ಈ ವ್ಯಕ್ತಿಯನ್ನು ಕೌನ್ಸೆಲಿಂಗ್​ಗೆ ಒಳಪಡಿಸಿದಾಗ ಈತ ಇನ್ನೊಂದು ಪದ ಹೇಳಿದ್ದ. ಈ ಬಾರಿ ‘ಕಲಾವತಿ ಹಾಸ್ಪಿಟಲ್’ ಎಂದು ಹೇಳಿದ್ದ. ಅಲ್ಲಿಂದ ಕಲಾವತಿ ಹಾಸ್ಪಿಟಲ್​ಗೆ ಈತನನ್ನು ಕರೆದೊಯ್ದು ವಿಷಯ ತಿಳಿಸಿದರೂ ಅಲ್ಲಿ ಯಾರೂ ಈತನನ್ನು ಗುರುತಿಸಲಿಲ್ಲ, ಅಂದರೆ ಈತನಿಗೆ ಸಂಬಂಧಪಟ್ಟವರು ಯಾರೂ ಅಲ್ಲಿರಲಿಲ್ಲ.
ಇದನ್ನೂ ಓದಿ:ಸೆಕ್ಸ್​ ಮಾಡುವಾಗ ಉಸಿರುಗಟ್ಟಿ ಸತ್ತೇ ಹೋದಳು… ಬ್ಯಾಚಲರ್​ ಮನೆಯಲ್ಲಿ ವಿವಾಹಿತೆ ಸಾವು!
ಬಳಿಕ ಈತನ ಹೆಸರನ್ನು ಆಧರಿಸಿ ಸುತ್ತಮುತ್ತಲ ಊರಿನಲ್ಲಿ ದಾಖಲಾಗಿರುವ ನಾಪತ್ತೆ ಪ್ರಕರಣಗಳ ವಿವರಗಳನ್ನು ಕಲೆ ಹಾಕಿದಾಗ ದೆಹಲಿಯ ಶಾಸ್ತ್ರಿಪಾರ್ಕ್​ನ ಪಟ್ವಾ ಚೌಕ್​ ನಿವಾಸಿ ಗೌರವ್​ ಎಂಬ 30 ವರ್ಷದ ವ್ಯಕ್ತಿ ಕಾಣೆಯಾಗಿರುವ ಕುರಿತು 2020ರ ಜುಲೈ 11ರಂದು ದೂರು ದಾಖಲಾಗಿರುವುದು ತಿಳಿದು ಬಂದಿತ್ತು. ಈ ಹಿನ್ನೆಲೆಯಲ್ಲಿ ಹೆಚ್ಚಿನ ಹುಡುಕಾಟ ನಡೆಸಿದ ಪೊಲೀಸರಿಗೆ ಗೌರವ್​ ತಾಯಿಯನ್ನು ಪತ್ತೆ ಮಾಡಿ ಒಪ್ಪಿಸುವುದು ಸಾಧ್ಯವಾಗಿತ್ತು. ಕಳೆದ ಜುಲೈನಲ್ಲಿ ಈತನ ತಾಯಿ ಕಲಾವತಿ ಹಾಸ್ಪಿಟಲ್​ಗೆ ತಪಾಸಣೆಗೆಂದು ಕರೆದುಕೊಂಡು ಬಂದಿದ್ದಾಗ ಈತ ತಪ್ಪಿಸಿಕೊಂಡಿದ್ದು, ಹುಡುಕಾಡಿದರೂ ಸಿಕ್ಕಿರಲಿಲ್ಲ. ಆದರೆ ಈಗ ಪೊಲೀಸರು ಒಂದು ಪದದ ಬೆನ್ನತ್ತಿ ಇಬ್ಬರನ್ನು ಮತ್ತೆ ಒಂದಾಗಿಸುವಲ್ಲಿ ಯಶಸ್ವಿಯಾಗಿದ್ದಾರೆ. (ಏಜೆನ್ಸೀಸ್)
ಕ್ಷಣಕ್ಷಣದ ಮಾಹಿತಿಗಾಗಿವಿಜಯವಾಣಿಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

‘ಪಬ್ಲಿಕ್ ಐ’ನಲ್ಲಿ ಸಿಕ್ಕಿಬಿದ್ದ ಪೊಲೀಸರು!?; ವಾಹನ ವಿಮೆ ಅವಧಿ ಮುಗಿದು ಒಂದೂವರೆ ವರ್ಷ ಕಳೆದರೂ ನವೀಕರಿಸಿಲ್ಲ!

ಮದ್ವೆಯಾದ ಮೂರೇ ದಿನಕ್ಕೆ ಪ್ರೇಮಿಗಳನ್ನು ದೂರ ಮಾಡಿದ್ರಾ ಪೊಲೀಸರು?; ಈ ದಾಂಪತ್ಯದಲ್ಲೀಗ ‘ಚೈತನ್ಯ’ವೂ ಇಲ್ಲ, ‘ತೇಜಸ್ಸೂ’ ಇಲ್ಲ..!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 − 5 =
Remember me
