ನವದೆಹಲಿ:ಕನ್ನಡ ಸುದ್ದಿ ಮಾಧ್ಯಮದಲ್ಲಿ ತನ್ನದೇ ಛಾಪು ಮೂಡಿಸಿರುವ ವಿಆರ್​ಎಲ್ ಮೀಡಿಯಾ ಸಂಸ್ಥೆಯ ‘ದಿಗ್ವಿಜಯ 247 ನ್ಯೂಸ್’ನ ಸಾಮಾಜಿಕ ಕಳಕಳಿಯ ವರದಿಗಳು ಮತ್ತೊಮ್ಮೆ ರಾಷ್ಟ್ರೀಯ ಮನ್ನಣೆಗೆ ಪಾತ್ರವಾಗಿವೆ. ರಾಷ್ಟ್ರೀಯ ಮತ್ತು ಪ್ರಾದೇಶಿಕ ಸುದ್ದಿವಾಹಿನಿಗಳ ಸಾಧನೆಯನ್ನು ಪರಿಗಣಿಸಿ ಪ್ರತಿವರ್ಷ ನೀಡಲಾಗುವ ಎನ್​ಬಾ (ಉಘಆಅ-ಎಕ್ಸ್ ಚೇಂಜ್ ಫಾರ್ ಮೀಡಿಯಾ ನ್ಯೂಸ್ ಬ್ರಾಡ್​ಕಾಸ್ಟಿಂಗ್ ಅವಾರ್ಡ್ಸ್) ಪ್ರಶಸ್ತಿಗಳ ವಿವಿಧ ವಿಭಾಗದಲ್ಲಿ ದಿಗ್ವಿಜಯ ನ್ಯೂಸ್ ಪ್ರಶಸ್ತಿಗೆ ಭಾಜನವಾಗಿದ್ದು, 8 ಪ್ರಶಸ್ತಿಗಳನ್ನು ತನ್ನ ಮುಡಿಗೇರಿಸಿಕೊಂಡಿದೆ. ಕಳೆದ ಬಾರಿ 3 ಪ್ರಶಸ್ತಿಗಳನ್ನು ಗೆದ್ದಿದ್ದ ದಿಗ್ವಿಜಯ ನ್ಯೂಸ್ ಈ ಬಾರಿ 8 ಪ್ರಶಸ್ತಿಗಳಿಗೆ ಪಾತ್ರವಾಗಿರುವುದು ವಿಶೇಷ.
ಉತ್ತರ ಪ್ರದೇಶದ ನೋಯ್ಡಾ ಫಿಲಂ ಸಿಟಿಯಲ್ಲಿರುವ ರಾಡಿಸನ್ ಹೊಟೇಲ್​ನಲ್ಲಿ ಭಾನುವಾರ ಏರ್ಪಡಿಸಲಾಗಿದ್ದ 2022ನೇ ಸಾಲಿನ 15ನೇ ಆವೃತ್ತಿಯ ಎನ್​ಬಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಎಕ್ಸ್​ಚೇಂಜ್ ಫಾರ್ ಮೀಡಿಯಾ ಸಂಸ್ಥೆಯ ಮುಖ್ಯಸ್ಥ ಅನುರಾಗ್ ಬತ್ರಾ ಹಾಗೂ ಗಣ್ಯರು ದಿಗ್ವಿಜಯ ನ್ಯೂಸ್​ಗೆ ಪ್ರಶಸ್ತಿ ನೀಡಿ ಗೌರವಿಸಿದರು. ವಿಜಯವಾಣಿ-ದಿಗ್ವಿಜಯ ನ್ಯೂಸ್ ದೆಹಲಿ ವಿಶೇಷ ಪ್ರತಿನಿಧಿ ರಾಘವ ಶರ್ಮ ನಿಡ್ಲೆ ಮತ್ತು ವಿಆರ್​ಎಲ್ ಮೀಡಿಯಾ ದೆಹಲಿ ಬ್ಯೂರೋದ ಚೀಫ್ ಜನರಲ್ ಮ್ಯಾನೇಜರ್ ದೀಪಕ್ ಭಾಟಿಯಾ ದಿಗ್ವಿಜಯ ಸುದ್ದಿವಾಹಿನಿ ಪರವಾಗಿ ಪ್ರಶಸ್ತಿ ಸ್ವೀಕರಿಸಿದರು.
ದಿಗ್ವಿಜಯ ನ್ಯೂಸ್ ತಂಡ 1 ಚಿನ್ನ, 5 ಬೆಳ್ಳಿ ಮತ್ತು ಎರಡು ಕಂಚಿನ ಪದಕಕ್ಕೆ ಭಾಜನವಾಗಿದೆ. ಪ್ರತಿದಿನ ಬೆಳಗ್ಗೆ 8.30ಕ್ಕೆ ಪ್ರಸಾರವಾಗುವ ಬ್ರೇಕಿಂಗ್ ಬುಲೆಟಿನ್​ಗೆ ಚಿನ್ನ, ಉತ್ಕೃಷ್ಟ ಸಮಗ್ರ ಸರಣಿ ವರದಿ ವಿಭಾಗದಲ್ಲಿ ಆಧಾರ್ ಕಾರ್ಡ್ ಅಕ್ರಮ ಕುರಿತ ಸ್ಟಿಂಗ್ ಆಪರೇಷನ್​ಗೆ ಬೆಳ್ಳಿ, ಬೆಸ್ಟ್ ಲೇಟ್ ಪ್ರೖೆಮ್ೈಮ್ ಶೋ – ದಿ ಸ್ಪೆಷಲ್ ಕಾರ್ಯಕ್ರಮಕ್ಕೆ ಬೆಳ್ಳಿ, ಸಾಮಾಜಿಕ ಕಳಕಳಿಯ ಅತ್ಯುತ್ತಮ ಅಭಿಯಾನ ವಿಭಾಗದಲ್ಲಿ ರಾಯಚೂರು ಕುಡಿಯುವ ನೀರಿನ ಸಮಸ್ಯೆಯ ವರದಿಗೆ ಬೆಳ್ಳಿ, ಪ್ರಚಲಿತ ಸುದ್ದಿಗಳ ಅತ್ಯುತ್ತಮ ಕಾರ್ಯಕ್ರಮ ವಿಭಾಗದಲ್ಲಿ ಬರ್ನಿಂಗ್ ಸ್ಟೋರಿಗೆ ಬೆಳ್ಳಿ, ಬೆಸ್ಟ್ ಅರ್ಲಿ ಪ್ರೖೆಮ್ ಶೋ ವಿಭಾಗದಲ್ಲಿ ಡಿಚ್ಚಿ ಗಿಲಿಗಿಲಿಗೆ ಬೆಳ್ಳಿ, ದಕ್ಷಿಣ ಭಾರತದ ಅತ್ಯುತ್ತಮ ನಿರೂಪಕ ವಿಭಾಗದಲ್ಲಿ ಹರೀಶ್ ನಾಗರಾಜ್​ಗೆ ಕಂಚು ಮತ್ತು ಬೆಸ್ಟ್ ಪ್ರೖೆಮ್ ಟೈಮ್ ಶೋ ವಿಭಾಗದಲ್ಲಿ ಪ್ರೖೆಮ್ ಪಂಚ್ ಕಾರ್ಯಕ್ರಮಕ್ಕೆ ಕಂಚಿನ ಪದಕ ನೀಡಿ ಗೌರವಿಸಲಾಗಿದೆ.
ವಿವಿಧ ವಿಭಾಗಗಳಲ್ಲಿ ಪ್ರಶಸ್ತಿ:7 ವಿವಿಧ ವಿಭಾಗಗಳಲ್ಲಿ ಎನ್​ಬಾ ಪ್ರಶಸ್ತಿಗಳನ್ನು ದೇಶದ ಸುದ್ದಿವಾಹಿನಿಗಳಿಗೆ ನೀಡಲಾಗಿದೆ. ಕಾರ್ಯಕ್ರಮ ರೂಪಿಸುವುದು, ವ್ಯಕ್ತಿತ್ವ, ಮಾರ್ಕೆಟಿಂಗ್, ಡಿಜಿಟಲ್ ಮಾಧ್ಯಮ, ಅಂತಾರಾಷ್ಟ್ರೀಯ ಸುದ್ದಿ, ಒಟ್ಟಾರೆ ಶ್ರೇಷ್ಠತೆ ವಿಭಾಗದಲ್ಲಿ ವರದಿಗಾರರು ಹಾಗೂ ಸುದ್ದಿಸಂಸ್ಥೆಗಳನ್ನು ಗೌರವಿಸಲಾಗಿದೆ. ಅದೇ ರೀತಿ ವಿಶೇಷ ಪ್ರಶಸ್ತಿಗಳನ್ನು ಹಲವು ಉಪ ವರ್ಗಗಳಾಗಿ ವಿಂಗಡಿಸಿ ಪ್ರಶಸ್ತಿಗಳನ್ನು ನೀಡಲಾಗಿದೆ. ರಾಜಕೀಯ, ಸಾಮಾಜಿಕ, ವಾಣಿಜ್ಯ, ಪರಿಸರ ಸೇರಿ ವಿವಿಧ ಗಣ್ಯರನ್ನೊಳಗೊಂಡ ತೀರ್ಪಗಾರರ ತಂಡ ಪ್ರಶಸ್ತಿಗಳನ್ನು ಆಯ್ಕೆ ಮಾಡಿತ್ತು. 2022ರ ಎನ್​ಬಾ ತೀರ್ಪಗಾರ ತಂಡದ ನೇತೃತ್ವವನ್ನು ಮಾಜಿ ಹಿರಿಯ ಅಧಿಕಾರಿ ಮತ್ತು ಭಾರತದ ಮಾಜಿ ಚುನಾವಣಾ ಆಯುಕ್ತ ಸುನಿಲ್ ಅರೋರಾ ವಹಿಸಿದ್ದರು.

ಕಳೆದ ವರ್ಷ ಮೂರು ಪ್ರಶಸ್ತಿಗೆ ಪಾತ್ರವಾಗಿದ್ದ ದಿಗ್ವಿಜಯ ನ್ಯೂಸ್ ಈ ಬಾರಿ 8 ಪದಕ ಪಡೆದಿರುವುದು ಹೆಮ್ಮೆಯ ವಿಚಾರವಾಗಿದ್ದು, ವಿಆರ್​ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ ಹಾಗೂ ವ್ಯವಸ್ಥಾಪಕ ನಿರ್ದೇಶಕ ಡಾ. ಆನಂದ ಸಂಕೇಶ್ವರ ಅವರು ದಿಗ್ವಿಜಯ ನ್ಯೂಸ್ ಮುಖ್ಯ ಸಂಪಾದಕ ಸಿದ್ದು ಕಾಳೋಜಿ ಮತ್ತು ಪದಕ ವಿಜೇತರು ಹಾಗೂ ಸಂಸ್ಥೆಯ ಸಮಸ್ತ ಸಿಬ್ಬಂದಿಯನ್ನು ಅಭಿನಂದಿಸಿದ್ದಾರೆ.
ಪುರಸ್ಕಾರ ಕುರಿತು:ಎಕ್ಸ್​ಚೇಂಜ್ ಫಾರ್ ಮೀಡಿಯಾ ಸಂಸ್ಥೆ 2008ರಿಂದ ಎಕ್ಸ್ ಚೇಂಜ್ ಫಾರ್ ಮೀಡಿಯಾ ನ್ಯೂಸ್ ಬ್ರಾಡ್​ಕಾಸ್ಟಿಂಗ್ ಅವಾರ್ಡ್ಸ್ (ಪ್ರಶಸ್ತಿ) ಗಳನ್ನು ನೀಡುತ್ತಾ ಬಂದಿದೆ. ಅತ್ಯುತ್ತಮ ಸುದ್ದಿ ವಾಹಿನಿ, ವರ್ಷದ ಟಿವಿ ಸಂಪಾದಕ, ಮುಖ್ಯ ಕಾರ್ಯನಿರ್ವಹಣಾಧಿಕಾರಿ, ವರ್ಷದ ಸಂಪಾದಕ ಮಂಡಳಿ ಮುಖ್ಯಸ್ಥ, ಟಿವಿ ವರದಿಗಾರ ಹಾಗೂ ವಿವಿಧ ಗಮನಸೆಳೆಯುವ ವರದಿ, ಕಾರ್ಯಕ್ರಮಗಳನ್ನು ಗುರುತಿಸಿ ಪ್ರಶಸ್ತಿ ನೀಡಿ ಗೌರವಿಸುತ್ತಿದೆ.
ಪ್ರಜ್ಞಾನಂದ ಪಾಲಕರಿಗೆ ಸಿಗಲಿದೆ ಆ ಭರ್ಜರಿ ಕೊಡುಗೆ; ಅದೇ ಯಾಕೆ? ಇಲ್ಲಿದೆ ಮಾಹಿತಿ..

ಜನಗಣತಿ ಅಧಿಕಾರ ಇರುವುದು ಕೇಂದ್ರ ಸರ್ಕಾರಕ್ಕೆ ಮಾತ್ರ: ಸುಪ್ರೀಂ ಕೋರ್ಟ್​ಗೆ ಅಫಿಡವಿಟ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen + six =
Remember me
