ನವದೆಹಲಿ: ರಾಜ್ಯಸಭೆಗೆ ಹತ್ತು ರಾಜ್ಯಗಳಿಂದ ಶುಕ್ರವಾರ ನಡೆದ ಚುನಾವಣೆಗಳಲ್ಲಿ ಕಾಂಗ್ರೆಸ್​ನ ನಾಯಕ ದಿಗ್ವಿಜಯ ಸಿಂಗ್, ಬಿಜೆಪಿಯ ಜ್ಯೋತಿರಾದಿತ್ಯ ಸಿಂಧಿಯಾ ಸಹಿತ ಹಲವು ಪ್ರಮುಖರು ಗೆಲುವು ಸಾಧಿಸಿದ್ದಾರೆ. ಸಿಂಗ್ ಮತ್ತು ಸಿಂಧಿಯಾ ಮಧ್ಯಪ್ರದೇಶದಿಂದ ಆಯ್ಕೆಯಾಗಿದ್ದಾರೆ. ಬಿಜೆಪಿಯ ಇನ್ನೊಬ್ಬ ಅಭ್ಯರ್ಥಿ ಸುಮೇರ್ ಸಿಂಗ್ ಸೋಳಂಕಿ ಕೂಡ ಜಯ ಸಾಧಿಸಿದ್ದಾರೆ. ಇದು ಸಿಂಗ್​ಗೆ ಸತತ ಎರಡನೇ ಗೆಲುವಾದರೆ ಇತ್ತೀಚೆಗೆ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದ ಸಿಂಧಿಯಾ ಇದೇ ಮೊದಲ ಬಾರಿಗೆ ಮೇಲ್ಮನೆ ಪ್ರವೇಶಿಸಿದ್ದಾರೆ. ರಾಜಸ್ಥಾನದಲ್ಲಿ ಕಾಂಗ್ರೆಸ್ ಎರಡು ಸ್ಥಾನಗಳಲ್ಲಿ ಜಯ ದಾಖಲಿಸಿದ್ದು ಪ್ರತಿಪಕ್ಷ ಬಿಜೆಪಿ ಒಂದರಲ್ಲಿ ಗೆದ್ದಿದೆ. ಕಾಂಗ್ರೆಸ್​ನ ಕೆ.ಸಿ. ವೇಣುಗೋಪಾಲ್ ಮತ್ತು ನೀರಜ್ ಡಾಂಗಿ, ಬಿಜೆಪಿಯ ರಾಜೇಂದ್ರ ಗೆಹ್ಲೊಟ್ ರಾಜಸ್ಥಾನ ವಿಧಾನಸಭೆಯಿಂದ ರಾಜ್ಯಸಭೆಗೆ ಆಯ್ಕೆಯಾದರು.
ಗುಜರಾತ್​ನಲ್ಲಿ ಫಲಿತಾಂಶ ವಿಳಂಬ:ಚುನಾವಣೆ ನಡೆದ ಪ್ರಮುಖ ರಾಜ್ಯಗಳಲ್ಲಿ ಒಂದಾದ ಗುಜರಾತ್​ನಲ್ಲಿ ಫಲಿತಾಂಶ ಪ್ರಕಟಣೆ ವಿಳಂಬಗೊಂಡಿದೆ. ಬಿಜೆಪಿಯ ಇಬ್ಬರು ಶಾಸಕರ ಮತಗಳನ್ನು ವಿವಿಧ ಕಾರಣಗಳಿಗೆ ಅಸಿಂಧುಗೊಳಿಸಬೇಕೆಂದು ಕಾಂಗ್ರೆಸ್ ಆಗ್ರಹಿಸಿರುವುದೇ ಇದಕ್ಕೆ ಕಾರಣ.
ಇದನ್ನೂ ಓದಿ:ಸಿದ್ಧಗಂಗಾ ಮಠದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗೆ ಕರೊನಾ: ಇತರ 400 ವಿದ್ಯಾರ್ಥಿಗಳಿಗೆ ಆತಂಕ!
ಶಿಬು ಸೊರೇನ್​ಗೆ ಗೆಲುವು:ಮಾಜಿ ಮುಖ್ಯಮಂತ್ರಿ ಹಾಗೂ ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ಅಧ್ಯಕ್ಷ ಶಿಬು ಸೊರೇನ್ ಮತ್ತು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ದೀಪಕ್ ಪ್ರಕಾಶ್ ಜಾರ್ಖಂಡ್​ನಲ್ಲಿ ಗೆಲುವು ದಾಖಲಿಸಿದ್ದಾರೆ. ಮೇಘಾಲಯದಿಂದ ಏಕೈಕ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಆಳುವ ಮೇಘಾಲಯ ಪ್ರಜಾಸತ್ತಾತ್ಮಕ ಮೈತ್ರಿಕೂಟದ ಅಭ್ಯರ್ಥಿ ವಾನ್​ವೀ ರಾಯ್ ಖರ್​ಲುಖಿ ಆಯ್ಕೆಯಾಗಿದ್ದಾರೆಂದು ಚುನಾವಣೆ ಆಯೋಗ ಘೋಷಿಸಿದೆ.
ಕರೊನಾ ಅಟ್ಯಾಕ್ ಆದ್ರೂ ಗೆದ್ದೆ ನಾನು: ಅಮ್ಮನನ್ನು ರಿಸ್ಕ್​​ಗೆ ತಳ್ಳೋಕೆ ರೆಡಿ ಇರಲಿಲ್ಲ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:7 + seventeen =
Remember me
