ನವದೆಹಲಿ:ಕೇಂದ್ರ ಬಜೆಟ್​ನಲ್ಲಿ ಪ್ರಸ್ತಾಪಗೊಂಡಿರುವ ಡಿಜಿಟಲ್ ರುಪಿ ನಗದೀಕರಿಸಬಹುದಾಗಿದ್ದು, ಫಿನ್​ಟೆಕ್ ವಲಯದಲ್ಲೂ ಹೊಸ ಅವಕಾಶಗಳನ್ನು ತೆರೆಯಲಿದೆ. ಇದರ ಜತೆಗೆ ಆನ್​ಲೈನ್ ಪಾವತಿಯನ್ನು ಅಪಾಯಮುಕ್ತಗೊಳಿಸಿ ಇನ್ನಷ್ಟು ಸುರಕ್ಷಿತವಾಗಿಸಿ ಡಿಜಿಟಲ್ ಅರ್ಥವ್ಯವಸ್ಥೆಗೆ ಬಲ ತುಂಬಲಿದೆ.
ಬಜೆಟ್ ಬೆನ್ನಲ್ಲೇ ಬುಧವಾರ ಬಿಜೆಪಿ ಆಯೋಜಿಸಿದ್ದ ‘ಆತ್ಮನಿರ್ಭರ ಅರ್ಥ ವ್ಯವಸ್ಥೆ’ ಎಂಬ ಸಮಾವೇಶ ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಈ ಮಾಹಿತಿ ತೆರೆದಿಟ್ಟರು. ಡಿಜಿಟಲ್ ಆರ್ಥಿಕತೆಗೆ ಸೆಂಟ್ರಲ್ ಬ್ಯಾಂಕ್ ಡಿಜಿಟಲ್ ಕರೆನ್ಸಿ (ಸಿಬಿಡಿಸಿ)ಬಲ ತುಂಬಲಿದ್ದು, ಡಿಜಿಟಲ್ ರುಪಿ ಮೂಲಕ ಪಾವತಿ, ಸ್ವೀಕೃತಿ ಮಾಡಬಹುದು. ಇದನ್ನು ಸ್ವೀಕರಿಸಿದ ವ್ಯಕ್ತಿ ಭೌತಿಕ ರೂಪಾಯಿಗೆ ಪರಿವರ್ತಿಸಿಕೊಳ್ಳಬಹುದು. ಜಾಗತಿಕ ಪಾವತಿ ವ್ಯವಸ್ಥೆ ಅಭಿವೃದ್ಧಿಪಡಿಸುವಲ್ಲಿ ಈ ವ್ಯವಸ್ಥೆ ಪೂರಕವಾಗಿ ಇರಲಿದೆ ಎಂದು ಪ್ರಧಾನಿ ವಿವರಿಸಿದರು. ಡಿಜಿಟಲ್ ರುಪಿ ಹೊಸ ಹೊಸ ಅವಕಾಶಗಳನ್ನು ಸೃಷ್ಟಿಸಲಿದೆ. ರೂಪಾಯಿ ಕರೆನ್ಸಿ ಮುದ್ರಣ, ನಿರ್ವಹಣೆ, ಸಾಗಣೆ ಮುಂತಾದ ವೆಚ್ಚದ ಹೊರೆ ತಗ್ಗಿಸಲಿದೆ.
ಸ್ವಾವಲಂಬಿ ಭಾರತ:ಕರೊನೋತ್ತರ ಜಗತ್ತು ಬದಲಾವಣೆಯ ಹಾದಿಯಲ್ಲಿದೆ. ಕ್ಷಿಪ್ರಗತಿಯಲ್ಲಿ ಸ್ವಾವಲಂಬಿ ದೇಶವಾಗಿ ರೂಪುಗೊಳ್ಳಬೇಕಾದ ಅನಿವಾರ್ಯತೆಯನ್ನು ಭಾರತ ಎದುರಿಸುತ್ತಿದೆ. ಇಂತಹ ಭಾರತ ನಿರ್ವಣಕ್ಕಾಗಿ ಈ ಬಜೆಟ್ ಮೀಸಲಾಗಿದೆ. 5ಜಿ ತಂತ್ರಜ್ಞಾನ ಪರಿಚಯ, ಕೃಷಿ ಕ್ಷೇತ್ರಕ್ಕೆ ಯೋಜನೆಗಳು, ಆಗ್ರಾಮಗಳ ಅಭ್ಯುದಯಕ್ಕೆ ಸಂಬಂಧಪಟ್ಟ ಯೋಜನೆಗಳೊಂದಿಗೆ ಈ ಬಜೆಟ್ ದೇಶವನ್ನು ಸರಿಯಾದ ದಿಶೆಯಲ್ಲಿ ಮುನ್ನಡೆಸಲು ಸಹಕಾರಿ ಎಂದರು.
ಲಕ್ಷಾಧೀಶರರಾಗುತ್ತಿದ್ದಾರೆ ಬಡವರು:ಕೇಂದ್ರ ಮುಂಗಡಪತ್ರ ವಿಶೇಷವಾಗಿ ಬಡ, ಮಧ್ಯಮ ವರ್ಗ ಮತ್ತು ಯುವಜನರ ಕಡೆಗೆ ಗಮನಕೇಂದ್ರೀಕರಿಸಿದೆ. ಅವರಿಗೆ ಮೂಲಸೌಕರ್ಯ ಒದಗಿಸುವತ್ತ ಹೆಚ್ಚು ಆದ್ಯತೆ ಕೊಟ್ಟಿದೆ. ಬಡವರಿಗೆ ವಸತಿ ಕಲ್ಪಿಸುವ ಸಲುವಾಗಿ 80 ಲಕ್ಷ ಮನೆಗಳ ನಿರ್ವಣಕ್ಕೆ ಬಜೆಟ್​ನಲ್ಲಿ 48,000 ಕೋಟಿ ರೂಪಾಯಿಯನ್ನು ಹಂಚಿಕೆ ಮಾಡಿದೆ. ಈ ಮೂಲಕ ಬಡವರನ್ನು ‘ಲಕ್ಷಾಧೀಶ’ರನ್ನಾಗಿಸಲಿದೆ. ಕಳೆದ ಏಳು ವರ್ಷಗಳಲ್ಲಿ ಮೂರು ಕೋಟಿ ಬಡವರಿಗೆ ‘ಪಕ್ಕಾ’ ಮನೆಗಳನ್ನು ವಿತರಿಸಿದ್ದು, ಅವರನ್ನು ಲಕ್ಷಾಧೀಶರನ್ನಾಗಿ ಮಾಡಿದ್ದೇವೆ. ಅವರೆಲ್ಲರೂ ಕೊಳಚೆ ಪ್ರದೇಶದಲ್ಲಿದ್ದವರು. ಈಗ ಸ್ವಂತ ಮನೆಗೆ ಸ್ಥಳಾಂತರಗೊಂಡಿದ್ದಾರೆ. ಈ ಮನೆಗಳ ಗಾತ್ರ ಮತ್ತು ದರವನ್ನು ನಮ್ಮ ಸರ್ಕಾರ ಹೆಚ್ಚಿಸಿದೆ ಎಂದರು.
ಇಲ್ಲಿ ಮಕ್ಕಳು ಶಿಕ್ಷಣ ಚಟುವಟಿಕೆ ಮುಂದುವರಿಸುವುದಕ್ಕೂ ಸ್ಥಳಾವಕಾಶವಿದೆ. ಮಹಿಳೆಯರನ್ನೂ ನಾವು ಮನೆಯ ಮಾಲೀಕರನ್ನಾಗಿ ಮಾಡಿದ್ದೇವೆ ಎಂದು ಪ್ರಧಾನಿ ಮೋದಿ ವಿವರಿಸಿದರು. 2013-14ರಲ್ಲಿ ಸಾರ್ವಜನಿಕ ಹೂಡಿಕೆ 1.87 ಲಕ್ಷ ಕೋಟಿ ರೂಪಾಯಿ ಇತ್ತು. ಈ ವರ್ಷ ಇದು 7.5 ಲಕ್ಷ ಕೋಟಿ ರೂಪಾಯಿಗೆ ಏರಿಕೆಯಾಗಿದೆ. ಯುಪಿಎ ಆಡಳಿತಾವಧಿಗೆ ಹೋಲಿಸಿದರೆ ನಾಲ್ಕುಪಟ್ಟು ಹೆಚ್ಚಳವಾಗಿದೆ ಎಂದು ಪ್ರಧಾನಿ ತಿಳಿಸಿದರು.
ಪರಿಣಾಮಕಾರಿ ನೀತಿ ಫಲಿತಾಂಶ:ದೇಶದ ಜಿಡಿಪಿ ಹೆಚ್ಚಿಸುವಲ್ಲಿ ಸರ್ಕಾರ ಜಾರಿಗೊಳಿಸಿದ ‘ಪರಿಣಾಮಕಾರಿ’ ನೀತಿಗಳು ಕೆಲಸ ಮಾಡಿವೆ. ಏಳು ವರ್ಷಗಳ ಹಿಂದೆ 1.10 ಲಕ್ಷ ಕೋಟಿ ರೂಪಾಯಿ ಇದ್ದ ಜಿಡಿಪಿ ಈಗ 2.30 ಲಕ್ಷ ಕೋಟಿ ರೂ. ಆಗಿದೆ.ಇದೇ ರೀತಿ, ರಫ್ತು ಪ್ರಮಾಣ 2013-14ರಲ್ಲಿ 2.5 ಲಕ್ಷ ಕೋಟಿ ರೂಪಾಯಿ ಇದ್ದುದು ಈಗ 4.70 ಲಕ್ಷ ಕೋಟಿ ರೂಪಾಯಿ ಆಗಿದೆ. ವಿದೇಶಿ ಮೀಸಲು ನಿಧಿ 275 ಶತಕೋಟಿ ಡಾಲರ್​ನಿಂದ 630 ಶತಕೋಟಿ ಡಾಲರ್​ಗೆ ಹೆಚ್ಚಾಗಿದೆ ಎಂದು ಪ್ರಧಾನಿ ವಿವರಿಸಿದರು.
ಖಾತೆಗೆ ಕನಿಷ್ಠ ಬೆಂಬಲ ಬೆಲೆ:ನಮ್ಮ ಸರ್ಕಾರವು ಈ ಸೀಸನ್​ನಲ್ಲೇ ಭತ್ತದ ಕೃಷಿಕರ ಖಾತೆಗೆ ನೇರವಾಗಿ 1.5 ಲಕ್ಷ ಕೋಟಿ ರೂ. ಕನಿಷ್ಠ ಬೆಂಬಲ ಬೆಲೆ ಜಮೆ ಮಾಡಲಿದೆ. ಕೃಷಿ ಅಭಿವೃದ್ಧಿಗೆ ಸರ್ಕಾರ ಕ್ರಮ ತೆಗೆದು ಕೊಂಡಿದೆ. ಯೋಜನೆಗಳನ್ನು ಜಾರಿಗೊಳಿಸಿದೆ. ಸರ್ಕಾರ ರೈತರಿಂದ ಗರಿಷ್ಠ ಪ್ರಮಾಣದಲ್ಲಿ ಭತ್ತ, ಗೋಧಿ ಖರೀದಿಸುತ್ತಿದೆ. ಕನಿಷ್ಠ ಬೆಂಬಲ ಬೆಲೆಯ ಮೊತ್ತ ನೇರವಾಗಿ ಫಲಾನುಭವಿ ರೈತರ ಬ್ಯಾಂಕ್ ಖಾತೆಗೆ ಜಮೆಯಾಗುತ್ತಿದೆ. ಮಧ್ಯವರ್ತಿಗಳ ಕಾಟ ಇಲ್ಲ. ಇವೆಲ್ಲದರ ಹೊರತಾಗಿಯೂ ವಿರೋಧ ಪಕ್ಷಗಳು ಸುಳ್ಳುಸುದ್ದಿ ಹರಡುತ್ತಿವೆ ಎಂದು ಮೋದಿ ಹೇಳಿದರು.
ಪಿಸ್ತೂಲ್ ತೋರಿಸಿ ಬೆದರಿಸಿದ ಬಿಜೆಪಿ ಮುಖಂಡ; ಎಗ್​ರೈಸ್​ ಅಂಗಡಿ ವಿಚಾರಕ್ಕೆ ಜಗಳ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:six − one =
Remember me
