ನವದೆಹಲಿ:ಚಿಲ್ಲರೆ ಮಾರಾಟ ಕ್ಷೇತ್ರದಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಡಿಜಿಟಲ್ ರೂಪಾಯಿ ಗುರುವಾರದಿಂದ ಪ್ರಾಯೋಗಿಕವಾಗಿ ಚಲಾವಣೆಗೆ ಬಂದಿದೆ. ಬೆಂಗಳೂರು ಸೇರಿ ನಾಲ್ಕು ನಗರಗಳಲ್ಲಿ ಇದರ ಪ್ರಯೋಗ ಆರಂಭವಾಗಿದೆ. ಸಗಟು ಮಟ್ಟದಲ್ಲಿ ಡಿಜಿಟಲ್ ಕರೆನ್ಸಿಯ ಪ್ರಾಯೋಗಿಕ ಬಳಕೆಯನ್ನು ಆರ್​ಬಿಐ ನವೆಂಬರ್ 1ರಿಂದ ಜಾರಿಗೆ ತಂದಿದೆ. ಈಗ ಸಾಮಾನ್ಯ ಜನರ ಬಳಕೆಗಾಗಿ ಚಿಲ್ಲರೆ ವ್ಯವಹಾರಗಳಿಗೆ ಇ-ರುಪಿ (ಡಿಜಿಟಲ್ ರೂಪಾಯಿ) ಚಲಾವಣೆಯನ್ನು ವಿಸ್ತರಿಸಿದೆ.
ಬಳಸುವುದು ಹೇಗೆ?
ಯೋಜನೆಯಲ್ಲಿ ಪಾಲ್ಗೊಂಡಿರುವ ನಾಲ್ಕು ಬ್ಯಾಂಕ್​ಗಳು ನೀಡುವ ಡಿಜಿಟಲ್ ವ್ಯಾಲೆಟ್ ಮೂಲಕ ಡಿಜಿಟಲ್ ರೂಪಾಯಿ ಬಳಸಿ ವಹಿವಾಟು ನಡೆಸಬಹುದಾಗಿದೆ. ವ್ಯಕ್ತಿಯಿಂದ ವ್ಯಕ್ತಿಗೆ (ಪಿ2ಪಿ), ವ್ಯಕ್ತಿಯಿಂದ ವ್ಯಾಪಾರಿಗೆ(ಪಿ2ಎಂ) ಎರಡು ಮಾದರಿಗಳಲ್ಲಿ ವಹಿವಾಟು ನಡೆಸಲು ಅವಕಾಶವಿದೆ. ವ್ಯಾಪಾರಿಗಳ ಜತೆ ವಹಿವಾಟು ನಡೆಸಬೇಕೆಂದರೆ ಅಂಗಡಿಯಲ್ಲಿ ಇಟ್ಟಿರುವ ಕ್ಯೂಆರ್​ಕೋಡ್ ಸ್ಕಾ್ಯನ್ ಬಳಸಿ ಡಿಜಿಟಲ್ ಕರೆನ್ಸಿಯ ವಹಿವಾಟು ನಡೆಸಬಹುದಾಗಿದೆ. ನೀವು ಹೊಂದಿರುವ ಡಿಜಿಟಲ್ ಕರೆನ್ಸಿಗೆ ಬ್ಯಾಂಕ್​ಗಳು ಯಾವುದೇ ಬಡ್ಡಿ ನೀಡುವುದಿಲ್ಲ. ಆದರೆ ವ್ಯಾಲೆಟ್​ನಲ್ಲಿರುವ ವಿವಿಧ ಉಳಿತಾಯ ಖಾತೆಗಳಿಗೆ ಇದನ್ನು ವರ್ಗಾಯಿಸಬಹುದು ಎಂದು ಆರ್​ಬಿಐ ತಿಳಿಸಿದೆ.
ಯಾವ್ಯಾವ ನಗರಗಳಲ್ಲಿ
ಬೆಂಗಳೂರು, ಮುಂಬೈ, ನವದೆಹಲಿ ಮತ್ತು ಭುವನೇಶ್ವರದಲ್ಲಿ ಈ ಪ್ರಾಯೋಗಿಕ ಯೋಜನೆಯನ್ನು ಮೊದಲಿಗೆ ಜಾರಿಗೊಳಿಸಲಾಗುತ್ತಿದೆ. ನಂತರ ಅಹಮದಾಬಾದ್, ಗ್ಯಾಂಗ್ಟಕ್, ಗುವಾಹಟಿ, ಹೈದರಾಬಾದ್, ಇಂದೋರ್, ಕೊಚ್ಚಿ, ಲಖನೌ , ಪಾಟ್ನಾ ಮತ್ತು ಶಿಮ್ಲಾಕ್ಕೆ ವಿಸ್ತರಣೆಯಾಗಲಿದೆ.
ವಿತರಣೆ ಹೇಗೆ?
ಕಾಗದದ ಕರೆನ್ಸಿ ಮತ್ತು ನಾಣ್ಯಗಳ ಮಾದರಿಯಲ್ಲಿ ಅದೇ ಮುಖಬೆಲೆಯಲ್ಲಿ ಡಿಜಿಟಲ್ ಕರೆನ್ಸಿಯನ್ನು ಆರ್​ಬಿಐ ಜತೆ ಒಪ್ಪಂದ ಮಾಡಿಕೊಂಡ ನಾಲ್ಕು ಬ್ಯಾಂಕ್​ಗಳಲ್ಲಿ ವಿತರಣೆ ಮಾಡಲಾಗುತ್ತದೆ.
ಇ-ರುಪಿ ಎಂದರೇನು?
ಸರಳವಾಗಿ ಹೇಳುವುದಾದರೆ ಡಿಜಿಟಲ್ ರೂಪಾಯಿ ನಗದು ಕರೆನ್ಸಿಯ ಎಲೆಕ್ಟ್ರಾನಿಕ್ ರೂಪವಾಗಿದೆ. ಡಿಜಿಟಲ್ ರೂಪಾಯಿ ಡಿಜಿಟಲ್ ಟೋಕನ್ ರೂಪದಲ್ಲಿ ಇರಲಿದೆ. ಡಿಜಿಟಲ್ ವಹಿವಾಟನ್ನು ಉತ್ತೇಜಿಸಲು ಪೂರಕವಾಗಿ ಇದು ಕಾರ್ಯ ನಿರ್ವಹಿಸಲಿದೆ. ಇದು ಕಾನೂನುಬದ್ಧ, ವಿಶ್ವಾಸರ್ಹ ಮತ್ತು ಸುರಕ್ಷಿತ ವಹಿವಾಟು ಆಗಿದೆ. ಡಿಜಿಟಲ್ ಕರೆನ್ಸಿಯಿಂದ ಭೌತಿಕ ನಗದು ನಿರ್ವಹಣೆ ವೆಚ್ಚ ಕಡಿಮೆಯಾಗಲಿದೆ ಎಂದು ಆರ್​ಬಿಐ ವಿಶ್ವಾಸ ವ್ಯಕ್ತಪಡಿಸಿದೆ.
ಯಾವ್ಯಾವ ಬ್ಯಾಂಕ್​ಗಳಲ್ಲಿ ಲಭ್ಯ
ಮೊದಲ ಹಂತದಲ್ಲಿ ಎಸ್​ಬಿಎಂ, ಐಸಿಐಸಿಐ ಬ್ಯಾಂಕ್, ಯೆಸ್ ಬ್ಯಾಂಕ್, ಐಡಿಎಫ್​ಸಿ ಫಸ್ಟ್ ಬ್ಯಾಂಕ್​ಗಳಲ್ಲಿ ಡಿಜಿಟಲ್ ಕರೆನ್ಸಿ ಲಭ್ಯವಾಗಲಿದೆ. ನಂತರ ಬ್ಯಾಂಕ್ ಆಫ್ ಬರೋಡಾ, ಯೂನಿಯನ್ ಬ್ಯಾಂಕ್, ಎಚ್​ಡಿಎಫ್​ಸಿ, ಕೋಟಕ್ ಮಹೀಂದ್ರ ಬ್ಯಾಂಕ್​ಗಳು ಈ ಯೋಜನೆಗೆ ಸೇರ್ಪಡೆಗೊಳ್ಳಲಿವೆ. ನಂತರ ಹಂತ ಹಂತವಾಗಿ ಇತರೆ ಬ್ಯಾಂಕ್​ಗಳಿಗೆ ಈ ಯೋಜನೆ ವಿಸ್ತರಿಸಲಾಗುತ್ತದೆ.
ಪ್ರಯೋಜನ ಏನು?
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine − three =
Remember me
