ನವದೆಹಲಿ:ಲಡಾಖ್​ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಭಾರತ ಘೋಷಿಸಿರುವ ಡಿಜಿಟಲ್​ ವಾರ್​ ಅಡಿ ಚೀನಾ ಮೂಲದ ಆ್ಯಪ್​ಗಳನ್ನು ನಿಷೇಧಿಸಿರುವುದಕ್ಕೆ ಚೀನಾ ಆಕ್ಷೇಪ ವ್ಯಕ್ತಪಡಿಸಿದೆ. ಉದ್ದೇಶಪೂರ್ವಕವಾಗಿ ಹಸ್ತಕ್ಷೇಪ ಮಾಡುವ ಮೂಲಕ ಈ ವಿಷಯದಲ್ಲಿ ತಪ್ಪು ಮಾಡಿದ್ದೀರಿ. ಅದನ್ನು ಸರಿಪಡಿಸಿಕೊಳ್ಳಿ ಎಂದು ತಾಕೀತು ಮಾಡಿದೆ.
ಈ ಬಗ್ಗೆ ಮಂಗಳವಾರ ಹೇಳಿಕೆ ನೀಡಿರುವ ಭಾರತದಲ್ಲಿನ ಚೀನಾ ರಾಯಭಾರ ಕಚೇರಿಯ ವಕ್ತಾರ ಕೌನ್ಸೆಲರ್​ ಜಿ ರಾಂಗ್​, ಈ ತಪ್ಪನ್ನು ಸರಿಪಡಿಸಿಕೊಳ್ಳದಿದ್ದರೆ ಚೀನಾದ ವಾಣಿಜ್ಯೋದ್ಯಮಿಗಳ ಹಿತಕಾಯಲು ಯಾವ ಹಂತಕ್ಕೆ ಬೇಕಾದರೂ ಹೋಗುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ.
ಲಡಾಖ್​ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಭಾರತ ಟಿಕ್​ಟಾಕ್​ ಸೇರಿ ಚೀನಾ ಮೂಲದ 59 ಆ್ಯಪ್​ಗಳ ಬಳಕೆಯನ್ನು ನಿಷೇಧಿಸಿತ್ತು. ಇದರ ಬೆನ್ನಲ್ಲೇ ಈಗ ನಿಷೇಧಿತ ಆ್ಯಪ್​ಗಳ ತದ್ರೂಪಿಗಳಂತೆ ಕಾರ್ಯನಿರ್ವಹಿಸುವ ಟಿಕ್​ಟಾಕ್​ ಲೈಟ್​, ಶೇರ್​ಇಟ್​ ಲೈಟ್​ ಸೇರಿ 47 ಆ್ಯಪ್​ಗಳ ಬಳಕೆಯನ್ನು ನಿಷೇಧಿಸುವ ಬಗ್ಗೆ ಭಾರತ ಇತ್ತೀಚೆಗೆ ನಿರ್ಣಯ ಕೈಗೊಂಡಿದೆ. ಭಾರತದ ಈ ಕ್ರಮ ಚೀನಾವನ್ನು ಕೆರಳಿಸಿದೆ.
ಇದನ್ನೂ ಓದಿ:ಯುವಕನ ಹಣೆಗೆ ಬೈಕ್​ ಕೀಯಿಂದ ಇರಿದ ಪೊಲೀಸ್​…ಹೆಲ್ಮೆಟ್​ ಧರಿಸದೆ ಇದ್ರೆ ಇಷ್ಟು ಕ್ರೂರ ಶಿಕ್ಷೆನಾ?
ವಿಶೇಷವಾಗಿ ವಿಚ್ಯಾಟ್​ (WeChat) ಆ್ಯಪ್​ ನಿಷೇಧಿಸಿರುವ ಭಾರತದ ಕ್ರಮಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಜಿ ರಾಂಗ್​, ಆ್ಯಪ್​ಗಳ ನಿಷೇಧ ಕುರಿತ ಕ್ರಮಗಳ ಬಗೆಗಿನ ವರದಿಗಳನ್ನು ನಾವು ಗಮನಿಸಿದ್ದೇವೆ. ಭಾರತ ಸರ್ಕಾರ ಜೂ.29ರಂದು ವಿಚ್ಯಾಟ್​ ಸೇರಿ ಚೀನಾ ಮೂಲದ 59 ಆ್ಯಪ್​ಗಳನ್ನು ನಿಷೇಧಿಸಿತ್ತು. ಇದರಿಂದಾಗಿ ಚೀನಾ ಕಂಪನಿಗಳ ನ್ಯಾಯಸಮ್ಮತವಾದ ಹಕ್ಕುಗಳು ಮತ್ತು ಹಿತಾಸಕ್ತಿಗಳಿಗೆ ಧಕ್ಕೆಯುಂಟಾಗಿದೆ. ಈ ಹಿನ್ನೆಲೆಯಲ್ಲಿ ಚೀನಾದವರು ಭಾರತಕ್ಕೆ ಸೂಕ್ತ ರೀತಿಯಲ್ಲಿ ಮನವಿ ಅರ್ಪಿಸಿದ್ದಾರೆ. ಈ ತಪ್ಪುಗಳನ್ನು ಸರಿಪಡಿಸಿಕೊಳ್ಳುವಂತೆ ಕೋರಿಕೊಂಡಿದ್ದಾರೆ ಎಂದು ಹೇಳಿದ್ದಾರೆ.
ಈ ವಿಷಯವಾಗಿ ಇರುವ ಅಂತಾರಾಷ್ಟ್ರೀಯ ನಿಯಮಗಳು ಮತ್ತು ನೈತಿಕತೆಯನ್ನು ಪಾಲಿಸುವಂತೆ ಅವರು ಭಾರತವನ್ನು ಆಗ್ರಹಿಸಿದ್ದಾರೆ. ಬಾಹ್ಯ ಸಹಕಾರದ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ನಿಯಮಗಳು ಮತ್ತು ಸ್ಥಳೀಯ ಕಾನೂನು, ನಿಯಮ-ನಿಬಂಧನೆಗಳನ್ನು ಪಾಲಿಸುವಂತೆ ಚೀನಾದ ಕಂಪನಿಗಳಿಗೆ ನಾವು ಸಲಹೆ ಕೊಡುತ್ತಲೇ ಇರುತ್ತೇವೆ. ಇದೀಗ ಅವುಗಳ ನ್ಯಾಯಸಮ್ಮತ ಹಕ್ಕು ಮತ್ತು ಚೀನಾದ ವಾಣಿಜ್ಯೋದ್ಯಮಿಗಳದ್ದು ಸೇರಿ ಅಂತಾರಾಷ್ಟ್ರೀಯ ಹೂಡಿಕೆದಾರರ ಹಿತಾಸಕ್ತಿಗಳನ್ನು ಕಾಯುವುದು ಭಾರತ ಸರ್ಕಾರದ ಜವಾಬ್ದಾರಿಯಾಗಿದೆ ಎಂದು ತಿಳಿಸಿದ್ದಾರೆ.
ಚೀನಾ ಮೂಲದ ಆ್ಯಪ್​ಗಳನ್ನು ನಿಷೇಧಿಸುವ ಭಾರತದ ಕ್ರಮ ಉದ್ದೇಶಪೂರ್ವಕ ಹಸ್ತಕ್ಷೇಪ ಎಂದು ಬಣ್ಣಿಸಿರುವ ಅವರು, ಚೀನಾದ ಕಂಪನಿಗಳ ವಿರುದ್ಧ ಈ ರೀತಿಯ ಆರ್ಥಿಕ ನಿರ್ಬಂಧಗಳನ್ನು ಹೇರುವುದು ಭಾರತದ ಹಿತಾಸಕ್ತಿ ದೃಷ್ಟಿಯಿಂದ ಸರಿಯಲ್ಲ. ಅಷ್ಟೇ ಅಲ್ಲ, ಚೀನಾದ ಕಂಪನಿಗಳ ಹಿತಾಸಕ್ತಿ ಕಾಪಾಡಲು ಯಾವ ಹಂತಕ್ಕೆ ಬೇಕಾದರೂ ಹೋಗಬಲ್ಲೆವು ಎಂದು ಬೆದರಿಕೆ ಹಾಕಿದ್ದಾರೆ.
ಸುಶಾಂತ್​ ಆತ್ಮಹತ್ಯೆಗೆ ರಿಯಾ ಚಕ್ರವರ್ತಿ ಪ್ರಚೋದನೆ, ದೂರು ದಾಖಲಿಸಿದ ರಜಪೂತ್​ ತಂದೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × four =
Remember me
