ನವದೆಹಲಿ:ರಾಹುಲ್ ಗಾಂಧಿ ಒಬ್ಬ ಸಾಮಾನ್ಯ ಸಂಸದರಾಗಿದ್ದು, ಮಾಧ್ಯಮಗಳು ಅವರ ಮಟ್ಟ ಮೀರಿ ಅವರನ್ನು ಹೈಲೈಟ್ ಮಾಡಬಾರದು ಎಂದು ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಮಧ್ಯಪ್ರದೇಶದ ಮಾಜಿ ಸಿಎಂ ದಿಗ್ವಿಜಯ್ ಸಿಂಗ್ ಸಹೋದರ ಲಕ್ಷ್ಮಣ್ ಸಿಂಗ್ ಹೇಳಿದ್ದಾರೆ.
ಇದನ್ನೂ ಓದಿ:ಫುಟ್ಬಾಲ್ ದಿಗ್ಗಜ ಮಾರಡೊನಾಗೂ ಸಿಗದ ಮನ್ನಣೆ ಮೆಸ್ಸಿಗೆ!: 10ನೇ ಜರ್ಸಿ ಕುರಿತು ಅರ್ಜೆಂಟೀನಾ ಪ್ರಮುಖ ನಿರ್ಧಾರ?
ಗುಣಾದ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ಲಕ್ಷ್ಮಣ್ ಸಿಂಗ್, ಲೋಕಸಭೆಯಲ್ಲಿ ಘೋಷಣೆಗಳನ್ನು ಕೂಗಿದಾಗ ರಾಹುಲ್‌ ಮುಖವನ್ನು ಟಿವಿಯಲ್ಲಿ ಸ್ವಲ್ಪ ಸಮಯ ತೋರಿಸಿದ್ದರ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿ, ರಾಹುಲ್‌ ಗಾಂಧಿ ಕೇವಲ ಸಂಸದರಷ್ಟೇ, ಪಕ್ಷದ ಅಧ್ಯಕ್ಷರಲ್ಲ, ಕಾರ್ಯಕರ್ತ.ರಾಹುಲ್ ಗಾಂಧಿ ಬಗ್ಗೆ ಹೇಳಲು ಏನೂ ಇಲ್ಲ..ಮಾಧ್ಯಮಗಳು ಅವರನ್ನು ಹೈಲೈಟ್ ಮಾಡುವ ಅಗತ್ಯವಿಲ್ಲ ಎಂದು ಹೇಳಿದರು.
ರಾಹುಲ್ ಕೇವಲ ಸಂಸದರಾಗಿದ್ದು, ಪಕ್ಷದ ಇತರ ಸಂಸದರಿಗೆ ಸಮಾನರು. ಹುಟ್ಟಿನಿಂದಲೇ ಯಾರೂ ಪ್ರಸಿದ್ಧರಾಗಲ್ಲ. ಅವರ ಕಠಿಣ ಶ್ರಮ ಮತ್ತು ಜನರಲ್ಲಿ ಬೆರೆಯುವ ನಡವಳಿಕೆ ಮತ್ತು ವರ್ತನೆಗಳಿಂದ ವರ್ಚಸ್ಸು ಹೆಚ್ಚುತ್ತದೆ ಎಂದು ಐದು ಬಾರಿ ಸಂಸದ, ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಲಕ್ಷ್ಮಣ್ ಸಿಂಗ್ ಹೇಳಿದರು.
ರಾಹುಲ್ ಗಾಂಧಿ ಅವರನ್ನು ಮಹಾನ್ ನಾಯಕ ಎಂದು ಪರಿಗಣಿಸಬಾರದು. ಅವರ ಕಾಮೆಂಟ್‌ಗಳ ಬಗ್ಗೆ ಸ್ಪಷ್ಟನೆ ಕೇಳಿದಾಗ ನಾನೊಬ್ಬ ಪಕ್ಷದ ಕಾರ್ಯಕರ್ತ ಮಾತ್ರ ಎಂದು ರಾಹುಲ್ ಗಾಂಧಿ ಅವರೇ ಹೇಳಿದ್ದಾರೆ ಎಂದು ನೆನಪಿಸಿದರು.
ಇನ್ನು ಲಕ್ಷ್ಮಣ್ ಸಿಂಗ್ ಹೇಳಿಕೆ ಕಾಂಗ್ರೆಸ್ ಪಕ್ಷದಲ್ಲಿ ಸಂಚಲನ ಮೂಡಿಸಿದೆ. ಲಕ್ಷ್ಮಣ್ ಸಿಂಗ್ ಅವರ ಹೇಳಿಕೆಯನ್ನು ಪಕ್ಷದ ನಾಯಕತ್ವ ಒಪ್ಪುತ್ತಿಲ್ಲ. ಮತ್ತೊಂದೆಡೆ, ಸಹೋದರನ ಕಾಮೆಂಟ್‌ಗಳಿಗೆ ದಿಗ್ವಿಜಯ್ ಸಿಂಗ್ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದು ಕುತೂಹಲಕಾರಿಯಾಗಿದೆ. ಇದೇ ವೇಳೆ ಲಕ್ಷ್ಮಣ್ ಸಿಂಗ್ ಹೇಳಿಕೆಗೆ ಬಿಜೆಪಿ ಪ್ರತಿಕ್ರಿಯಿಸಿದೆ.
ಈ ಹಿಂದೆ ಕಾಂಗ್ರೆಸ್ ನಲ್ಲಿ ದುಡಿದ ಬಿಜೆಪಿ ಮುಖಂಡ ಹೆಜಾದ್ ಪೂನಾವಾಲ ಮಾತನಾಡಿ, ಪಕ್ಷವನ್ನು ಶಾಶ್ವತವಾಗಿ ಕುಟುಂಬದ ಅಂಗಡಿಯಂತೆ ನಡೆಸಿಕೊಂಡು ಹೋಗಬೇಕು ಎಂಬ ಮನೋಭಾವವನ್ದುನು ಕಾಂಗ್ರೆಸ್ ನಾಯಕರು ಮರುಚಿಂತನೆ ಮಾಡಬೇಕಾದ ಕಾಲ ಬಂದಿದೆ ಎಂದಿದ್ದಾರೆ.
ಉಜ್ವಲಾ ಯೋಜನೆಯ ಫಲಾನುಭವಿ ಮನೆಗೆ ಪ್ರಧಾನಿ ದಿಢೀರ್​ ಭೇಟಿ; ಹಮ್ಮುಬಿಮ್ಮಿಲ್ಲದೆ ಚಹಾ ಸೇವಿಸಿದ ಮೋದಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − one =
Remember me
