ನವದೆಹಲಿ:ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಇತ್ತೀಚೆಗೆ ತಮ್ಮ ಕುಟುಂಬದೊಂದಿಗೆ ಭಾರತಕ್ಕೆ ಆಗಮಿಸಿದ್ದರು. ಡೊನಾಲ್ಡ್​ ಟ್ರಂಪ್​ಗೆ ಇದು ಪ್ರಥಮ ಭೇಟಿಯಾದರೂ, ಅವರ ಪುತ್ರಿ ಇವಾಂಕಾ ಭಾರತಕ್ಕೆ ಆಗಮಿಸಿದ್ದು ಎರಡನೇಬಾರಿ.
ಭಾರತಕ್ಕೆ ಆಗಮಿಸಿದ್ದ ಡೊನಾಲ್ಡ್​ ಟ್ರಂಪ್​ ಕುಟುಂಬ ಮೊದಲನೇ ದಿನವೇ ಆಗ್ರಾದ ತಾಜ್​​ಮಹಲ್​ಗೆ ಭೇಟಿ ನೀಡಿದೆ. ಟ್ರಂಪ್​ ತಮ್ಮ ಪತ್ನಿ ಮೆಲಾನಿಯಾ ಜತೆಗೆ ತಾಜ್​ ಮಹಲ್​ ಎದುರು ಫೋಟೋ ತೆಗೆಸಿಕೊಂಡರೆ, ಅವರ ಪುತ್ರಿ ಇವಾಂಕಾ ತಮ್ಮ ಪತಿ ಜೇರ್ಡ್​ ಕುಶ್ನರ್​ ಜತೆ ಪೋಸ್​ ಕೊಟ್ಟಿದ್ದಾರೆ. ಆದರೆ ಈಗ ಇವಾಂಕಾ ಫೋಟೋಗಳು ತುಂಬ ವೈರಲ್​ ಆಗುತ್ತಿವೆ. ಅದೂ ಕೂಡ ವಿವಿಧ ರೀತಿಯ ಟ್ರೋಲ್​ ಮಾಡಿ, ಫೋಟೋಶಾಪ್​​ ಮೂಲಕ ವಿಭಿನ್ನವಾಗಿ ಎಡಿಟ್​ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗುತ್ತಿದೆ.
ಆದರೆ ಹೀಗೆ ಟ್ವಿಟರ್​ನಲ್ಲಿ ಶೇರ್​ ಆದ ಫನ್ನಿ ಫೋಟೋಗಳಿಗೆ ಇವಾಂಕಾ ಟ್ರಂಪ್​ ಸಕಾರಾತ್ಮಕವಾಗಿ ಪ್ರತಿಕ್ರಿಯೆ ನೀಡಿದ್ದು ತುಂಬ ವಿಶೇಷ. ಅದರಲ್ಲೂ ಭಾರತೀಯರಿಗೆ ಧನ್ಯವಾದ ತಿಳಿಸಿದ ಅವರ ದೊಡ್ಡಗುಣಕ್ಕೆ ನೆಟ್ಟಿಗರು ಫಿದಾ ಆಗಿದ್ದಾರೆ.
ನಟ, ಗಾಯಕ ದಿಲ್ಜಿತ್ ದೋಸಾಂಜ್ ಅವರು ಕೂಡ ಇವಾಂಕಾ ಟ್ರಂಪ್​ ಅವರ ಎಡಿಟೆಡ್​ ಫೋಟೋವನ್ನು ತಮ್ಮ ಟ್ವಿಟರ್​ನಲ್ಲಿ ಪೋಸ್ಟ್ ಮಾಡಿಕೊಂಡಿದ್ದರು. ತಾಜ್​ ಮಹಲ್ ಎದುರಿನ ಬೆಂಚ್​ ಮೇಲೆ ಕುಳಿತಿದ್ದ ಇವಾಂಕಾ ಪಕ್ಕ ತಾವು ಕುಳಿತಂತೆ ಎಡಿಟ್​ ಮಾಡಿದ ಫೋಟೋವನ್ನು ಟ್ವಿಟರ್​ನಲ್ಲಿ ಪೋಸ್ಟ್​ ಮಾಡಿ, ನಾನು ಮತ್ತು ಇವಾಂಕಾ ಎಂದು ಬರೆದುಕೊಂಡಿದ್ದರು. ಅಲ್ಲದೆ, ನಾನೇ ಅವರನ್ನು ತಾಜ್​ಮಹಲ್​ಗೆ ಕರೆದುಕೊಂಡು ಹೋದೆ ಎಂದು ಫನ್ನಿಯಾಗಿ ಹೇಳಿದ್ದರು.
ಅದಕ್ಕೆ ಇವಾಂಕಾ ಕೂಡ ತುಂಬ ಫನ್ನಿಯಾಗಿ, ಅಷ್ಟೇ ಸಕಾರಾತ್ಮಕವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಜಗತ್ತಿನ ಅದ್ಭುತಗಳಲ್ಲಿ ಒಂದಾದ ತಾಜ್​ ಮಹಲ್​ಗೆ ನನ್ನನ್ನು ಕರೆದುಕೊಂಡು ಹೋಗಿದ್ದಕ್ಕೆ ನಿಮಗೆ ಧನ್ಯವಾದ. ಆ ಸುಂದರ ಅನುಭವವನ್ನು ನಾನೆಂದಿಗೂ ಮರೆಯುವುದಿಲ್ಲ ಎಂದು ಹೇಳಿದ್ದಾರೆ.
ಇವಾಂಕಾ ಪ್ರತಿಕ್ರಿಯೆ ನೋಡಿ ಆಶ್ಚರ್ಯಚಕಿತರಾದ ದಿಲ್ಜಿತ್​, ಓ ಮೈ ಗಾಡ್​..ಅತಿಥಿ ದೇವೋ ಭವ. ಮುಂದಿನ ಬಾರಿ ನಮ್ಮ ಲುಧಿಯಾನಾಕ್ಕೆ ಭೇಟಿ ನೀಡಿ ಎಂದು ಟ್ವೀಟ್ ಮಾಡಿದ್ದಾರೆ.
ಹಾಗೇ ಆದಿತ್ಯ ಚೌಧರಿ ಎಂಬುವರು ಕೂಡ ತಮ್ಮ ಟ್ವಿಟರ್​ನಲ್ಲಿ ಇವಾಂಕಾ ಅವರ ಫೋಟೋಶಾಪ್ಡ್​ ಫೋಟೋಗಳನ್ನು ಪೋಸ್ಟ್ ಮಾಡಿಕೊಂಡಿದ್ದರು. ಇವಾಂಕಾ ಟ್ರಂಪ್ ಸೈಕಲ್​ ಮೇಲೆ ಹೋಗುತ್ತಿರುವಂತೆ, ಅವರ ಪಕ್ಕದಲ್ಲಿ ಹಲವರನ್ನು ಕೂರಿಸಿದಂತೆ ಎಡಿಟ್​ ಮಾಡಿದ್ದ ಫೋಟೋಗಳನ್ನೂ, ಮೀಮ್ಸ್​​ಗಳನ್ನು ಪೋಸ್ಟ್ ಮಾಡಿದ್ದರು. ಈ ಟ್ವಿಟರ್​ ಪೋಸ್ಟ್​ಗೆ ಕೂಡ ಇವಾಂಕಾ ಪ್ರತಿಕ್ರಿಯೆ ನೀಡಿದ್ದಾರೆ.
ಭಾರತೀಯರ ಆದರಣೆ ನೋಡಿ ತುಂಬ ಖುಷಿಯಾಗಿದೆ. ನನಗೆ ಹಲವು ಹೊಸ ಸ್ನೇಹಿತರು ಸಿಕ್ಕಂತಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.
ಅವರ ಈ ಸರಳತೆಯನ್ನು ಭಾರತೀಯ ನೆಟ್ಟಿಗರು ತುಂಬ ಮೆಚ್ಚಿಕೊಂಡಿದ್ದಾರೆ. ತಮ್ಮನ್ನು ಟ್ರೋಲ್​ ಮಾಡಿದರೂ, ಮನಬಂದಂತೆ ಎಡಿಟ್​ ಮಾಡಿದ ಫೋಟೋಗಳನ್ನು ನೋಡಿ ಕೂಡ ಇವಾಂಕಾ ತುಂಬ ಪ್ರಬುದ್ಧವಾಗಿ ಪ್ರತಿಕ್ರಿಯೆ ನೀಡಿದ್ದಾರೆಂದು ಹಲವರು ಕಾಮೆಂಟ್​ ಮಾಡಿದ್ದಾರೆ. (ಏಜೆನ್ಸೀಸ್​)
Thank you for taking me to the spectacular Taj Mahal,@diljitdosanjh! 😉
It was an experience I will never forget!https://t.co/VgqFuYBRIg
— Ivanka Trump (@IvankaTrump)March 1, 2020

Thank you for taking me to the spectacular Taj Mahal,@diljitdosanjh! 😉
It was an experience I will never forget!https://t.co/VgqFuYBRIg
— Ivanka Trump (@IvankaTrump)March 1, 2020

I appreciate the warmth of the Indian people.
…I made many new friends!!!https://t.co/MXz5PkapBg
— Ivanka Trump (@IvankaTrump)March 1, 2020

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × one =
Remember me
