ನವದೆಹಲಿ:ಪಶ್ಚಿಮ ಬಂಗಾಳದಲ್ಲಿ ಚುನಾವಣೆ ಸನ್ನಿಹಿತವಾಗುತ್ತಿದ್ದಂತೆಯೇ ಆಡಳಿತ ಪಕ್ಷವಾದ ಟಿಎಂಸಿಗೆ ಶಾಕ್​ ಮೇಲೆ ಶಾಕ್​ ಎದುರಾಗುತ್ತಿದೆ. ಇದೀಗ ಹಿರಿಯ ನಾಯಕರೊಬ್ಬರು ಪಕ್ಷ ತೊರೆದು ಬಿಜೆಪಿ ಸೇರಿದ್ದಾರೆ.
ಕೇಂದ್ರ ಸರ್ಕಾರದ ಮಾಜಿ ರೈಲ್ವೆ ಸಚಿವ ಹಾಗೂ ಸಂಸದ ದಿನೇಶ್​ ತ್ರಿವೇದಿ ಇದೀಗ ಬಿಜೆಪಿ ಸೇರ್ಪಡೆಗೊಂಡಿದ್ದಾರೆ. ನವದೆಹಲಿಯಲ್ಲಿರುವ ಪಕ್ಷದ ಪ್ರಧಾನ ಕಚೇರಿಯಲ್ಲಿ ಕೇಂದ್ರ ಸಚಿವ ಪಿಯೂಷ್​ ಗೋಯಲ್ ಅವರು ದಿನೇಶ್​ ಅವರನ್ನು ಬಿಜೆಪಿಗೆ ಸ್ವಾಗತಿಸಿದ್ದಾರೆ. ಪಕ್ಷ ಸೇರಿದ ದಿನೇಶ್ ಮಾತನಾಡಿ, ತಾವು ಬಿಜೆಪಿ ಸೇರುವುದಕ್ಕೆ ಹಲವು ಕಾಲದಿಂದ ಕಾದಿದ್ದು, ಇದು ಸುವರ್ಣ ಕ್ಷಣ ಎಂದು ಹೇಳಿಕೊಂಡಿದ್ದಾರೆ. “ತಪ್ಪು ಪಕ್ಷದಲ್ಲಿ ಸರಿಯಾದ ವ್ಯಕ್ತಿ ಇದ್ದರು ಆದರೆ ಇದೀಗ ಅವರು ಸರಿಯಾದ ಪಕ್ಷಕ್ಕೆ ಬಂದಿದ್ದಾರೆ” ಎಂದು ಬಿಜೆಪಿ ಮುಖ್ಯಸ್ಥ ಜೆ.ಪಿ.ನಡ್ಡಾ ಹೇಳಿದ್ದಾರೆ.
ದಿನೇಶ್​ ತ್ರಿವೇದಿ ಅವರು 2019 ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಸೋತ ನಂತರ ಪಕ್ಷವು ಅವರನ್ನು ಮೇಲ್ಮನೆಗೆ ಕಳುಹಿಸಿತ್ತು. ಅವರು ಫೆಬ್ರವರಿ 8ರಂದು ರಾಜ್ಯಸಭೆ ಹಾಗೂ ತೃಣಮೂಲ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದರು. ರಾಜ್ಯದಲ್ಲಿ ನಡೆಯುತ್ತಿರುವ ಹಿಂಸಾಚಾರ ಮತ್ತು ಅದನ್ನು ಕಂಡೂ ಏನೂ ಮಾಡಲಾಗದ ಅಸಮರ್ಥತೆಯಿಂದಾಗಿ ಉಸಿರು ಕಟ್ಟಿದ್ದಾಗಿ ಅವರು ಹೇಳಿಕೊಂಡಿದ್ದರು. (ಏಜೆನ್ಸೀಸ್​)
ನಾನು ಸೇಫ್​, ನಾನು ಸೇಫ್​- ಜಿಗಿಜಿಗಿದು ಕುಪ್ಪಳಿಸಿದ ಪಾಕಿಸ್ತಾನ ಪ್ರಧಾನಿ ಇಮ್ರಾನ್​ ಖಾನ್​

ಅಪ್ಪನ ಹೆಸರು ಕೇಳಿದವನಿಗೆ ಕಾದಿತ್ತು ಶಾಕ್! 27 ವರ್ಷಗಳ ಹಿಂದೆ ನಡೆದಿತ್ತು ಅಪರಾಧ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen + 20 =
Remember me
