ಅಮೆರಿಕದಲ್ಲಿ ಕಳೆದ 10 ದಶಕಗಳ ಹಿಂದಿದ್ದ ಜನನ ಪ್ರಮಾಣ ಕುಸಿಯುತ್ತಾ ಬಂದಿದೆ. ಈ ನಿಟ್ಟಿನಲ್ಲಿ ಅಮೆರಿಕದಲ್ಲಿ ಕಳೆದ ಕೆಲ ತಿಂಗಳ ಹಿಂದಿನಿಂದಲೂ DINKS ಟ್ರೆಂಡ್​​ ಪ್ರಾರಂಭವಾಗಿದೆ. ಅಮೆರಿಕದಲ್ಲಿ ನಡೆದ 2021 ರ ಪ್ಯೂ ರಿಸರ್ಚ್​​ ವರದಿಯ ಪ್ರಕಾರ, ಫಲವತ್ತತೆಯ ದರ ಕಡಿಮೆಯಾಗುತ್ತಿದೆ.
ಹಾಗಾಗಿ ಮದುವೆಯಾದ ನವ ದಂಪತಿಗಳು DINKS ಅಂತ್ಹೇಳಿ ಸೋಷಿಯಲ್​ ಮೀಡಿಯಾದಲ್ಲಿ ಹೆಚ್ಚಾಗಿ ಟಿಕ್​-ಟಾಕ್​ನಲ್ಲಿ ಡಬಲ್​ ಇನ್​ಕಮ್​​​ ನೋ ಕಿಡ್ಸ್​​ ಅನ್ನುವಂತಹ ವಿಡಿಯೋಗಳನ್ನ ಪೋಸ್ಟ್​​​ ಮಾಡುತ್ತಿದ್ದಾರೆ. ಈ ವಿಡಿಯೋದಲ್ಲಿ ಇಬ್ಬರೂ ಜತೆಯಾಗಿ ಮದುವೆಯ ಬಳಿಕ ದುಡಿಯೋಣ. ನಮಗೆ ಬೇಕಾದಂತೆ ದೇಶ-ವಿದೇಶಕ್ಕೆ ಟ್ರಿಪ್​​ ಮಾಡೋಣ, ಮನೆ ಕಟ್ಟಿಕೊಳ್ಳೋಣ, ಇನ್ವೆಸ್ಟ್​​ಮೆಂಟ್​​ ಮಾಡೋಣ. ನಮಗೆ ಹುಟ್ಟುವ ಮಕ್ಕಳಿಗೆ ಖರ್ಚು ಮಾಡೋ ಹಣವನ್ನ ನಾವಿಬ್ಬರೂ ದುಡಿದಲ್ಲಿ ಅದು ಡಬಲ್​ ಇನ್​​ಕಮ್​ನಂತೆ ಪರಿಗಣಿಸಲಾಗುತ್ತೆ. ಹಾಗಾಗಿ ಮಕ್ಕಳಿಗೆ ಖರ್ಚು ಮಾಡುವ ದುಡ್ಡನ್ನ ನಾವೇ ಬಳಸೋಣ ಅನ್ನೋದು ಈ ವಿಡಿಯೋದ ಸಂದೇಶವಾಗಿದೆ.
I always thought I would want kids eventually, later in my life but ever since I saw a tiktok of a DINK (dbl income no kids) couple I’m starting to think that’s more the life for me. Why do I let tiktok invade my thoughts like this
ಅಮೆರಿಕನ್ನರು ಈ ವಿಡಿಯೋಗಳನ್ನ ಟಿಕ್​-ಟಾಕ್​ನಲ್ಲಿ ಹಂಚಿಕೊಳ್ಳುತ್ತಿದ್ದಂತೆಯೇ ಅದು ಮಿಲಿಯನ್​​ ಗಟ್ಟಲೆ ವೀಕ್ಷಣೆಯನ್ನ ಪಡೆದುಕೊಂಡಿದ್ದು, ಕೆಲವರು ಈ ಟ್ರೆಂಡ್​​ಗೆ ಮೆಚ್ಚುಗೆಯನ್ನ ಸೂಚಿಸಿದ್ದಾರೆ. ಇನ್ನೂ ಹಲವರು ಇದು ವೈಜ್ಞಾನಿಕವಾಗಿ ಮನುಷ್ಯ ಅಳಿವಿಗೆ ಮೊದಲ ಹೆಜ್ಜೆ ಎಂದು ಕಾಮೆಂಟ್​​​ಗಳನ್ನ ಮಾಡುತ್ತಿದ್ದಾರೆ.
the little DINKS (dual income, no kids) trend on tiktok is how I aspire to be.
ಸದ್ಯ ಕರ್ನಾಟಕದಲ್ಲೂ ಈ ವಿಡಿಯೋ ಟ್ರೆಂಡಿಂಗ್​ನಲ್ಲಿದ್ದು, DINKWAD ಅಂದ್ರೆ ಡಬಲ್ ಇನ್​ಕಮ್​ ನೋ ಕಿಡ್ಸ್​​​ ವಿದ್​​ ಎ ಡಾಗ್​​ ಅಂತಲೂ ಕೆಲವರು ಹ್ಯಾಶ್​ಟ್ಯಾಗ್​ ಬಳಸಿ ಕಾಮೆಂಟ್​ ಮಾಡುತ್ತಿದ್ದಾರೆ. ಇನ್ನೂ ಕೆಲವರು ಮಕ್ಕಳಿಗಿಂತ ಶ್ವಾನಗಳನ್ನ ಸಾಕೋದೆ ಉತ್ತಮವೆಂದು ಹೇಳುತ್ತಿದ್ದಾರೆ. ಜತೆಗೆ DINKWAH ಅಂದ್ರೆ ಡಬಲ್ ಇನ್​ಕಮ್​ ನೋ ಕಿಡ್ಸ್​​​ ವಿದ್​​ ಎ ಹೌಸ್​​ ಎಂಬ ಟ್ರೆಂಡನ್ನೂ ಫಾಲೋ ಮಾಡುತ್ತಿದ್ದಾರೆ ಅನೇಕ ದಂಪತಿಗಳು. ಇನ್ನೂ ಸಾಕಷ್ಟು ಮಂದಿ ಮಕ್ಕಳಿಲ್ಲದ ಜೀವನ ಯಾರಿಗೂ ಬೇಡ.
ಇದನ್ನ ಫಾಲೋ ಮಾಡಿದ್ರೆ ಹೆಚ್ಚು ಸೇವಿಂಗ್ಸ್​​ ಮಾಡಬಹುದು..!ಟಿಕ್​-ಟಾಕ್​, ಇನ್ಸ್​​ಟಾಗ್ರಾಂ, ಫೇಸ್ಬುಕ್​ನಲ್ಲಿ ಈ ಟ್ರೆಂಡ್​ ಹೆಚ್ಚಾಗಿದ್ದು, ಸದ್ಯ ಅಮೆರಿಕದಲ್ಲಿ ಪ್ರಾರಂಭವಾದ ಈ ಟ್ರೆಂಡ್​ನಿಂದ ಮದೆವೆಯಾದ ನವದಂಪತಿಗಳು ಇಬ್ಬರೂ ದುಡಿದು ಹೆಚ್ಚು ಸೇವಿಂಗ್ಸ್​​, ಇನ್ವೆಸ್ಟ್​​ಮೆಂಟ್​​, ಸಂಪಾದನೆ ಎಲ್ಲವೂ ದುಪ್ಪಟ್ಟಾಗಿದೆ ಎಂದು ಅಲ್ಲಿ ನಡೆಸಿದ ರಿಸರ್ಚ್​​ ಮೂಲಕ ವರದಿಯಾಗಿದೆ.
ಆದರೆ ಅಮೆರಿಕದಲ್ಲಿ 57 ಪ್ರತಿಶತ ವಿವಾಹಿತ ಮತ್ತು ಮಕ್ಕಳಿಲ್ಲದ ದಂಪತಿಗಳಿಗೆ ಹೋಲಿಸಿದರೆ 63 ಪ್ರತಿಶತ ವಿವಾಹಿತ ಪೋಷಕರು ತಮ್ಮ ಮದುವೆಯ ಬಗ್ಗೆ ತುಂಬಾ ಸಂತೋಷಪಟ್ಟಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × three =
Remember me
