ನವದೆಹಲಿ:ಅನಂತ್​ ಅಂಬಾನಿ ಮತ್ತು ಭಾವಿ ಪತ್ನಿ ರಾಧಿಕಾ ಮರ್ಚೆಂಟ್ ಕುಟುಂಬಸ್ಥರು ತಮ್ಮ ಆಪ್ತ ಸ್ನೇಹಿತರು, ಉದ್ಯಮಿಗಳು ಹಾಗೂ ಸಿನಿಮಾದ ಪ್ರಮುಖ ವ್ಯಕ್ತಿಗಳಿಗೆ ದೂರದ ಇಟಲಿಯಲ್ಲಿ ನಾಲ್ಕು ದಿನಗಳ ಪ್ರೀ-ವೆಡ್ಡಿಂಗ್​ ಸೆಲೆಬ್ರೇಷನ್ ಆಯೋಜಿಸಿದ್ದಾರೆ. ಆಂಡ್ರಿಯಾ ಬೊಸೆಲ್ಲಿಯವರ ಪ್ರದರ್ಶನವನ್ನು ಒಳಗೊಂಡಂತೆ ಕಾರ್ಯಕ್ರಮವೊಂದಕ್ಕೆ ಅಂಬಾನಿ ಕುಟುಂಬ ಪೊರ್ಟೊಫಿನೊದಲ್ಲಿನ ಸಂಪೂರ್ಣ ಪ್ಲಾಜಾವನ್ನೇ ಮುಚ್ಚಿಸಿದ್ದರು. ಸಂಭ್ರಮಾಚರಣೆಗೆ ಸಂಬಂಧಿಸಿದ ಫೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಅಂಬಾನಿ ಭಾವಿ ಸೊಸೆ ರಾಧಿಕಾ ಮರ್ಚೆಂಟ್​ ಧರಿಸಿದ್ದ ಉಡುಗೆ ಎಲ್ಲರ ಗಮನ ಸೆಳೆಯುತ್ತಿದೆ.
ರಾಧಿಕಾ ಅವರು ಪ್ರೀ ವೆಡ್ಡಿಂಗ್​ ಆಚರಣೆ ವೇಳೆ ಬಾರ್ಬಿಕೋರ್ ಟ್ರೆಂಡ್​ ಅನ್ನು ಅನುಸರಿಸಿದರು. ಅವರು ಯೆವ್ಸ್ ಸೇಂಟ್ ಲಾರೆಂಟ್ ವಿನ್ಯಾಸಗೊಳಿಸಿದ ಕ್ರಿಶ್ಟಿಯನ್ ಡಿಯೊರ್‌ನ ಶರತ್ಕಾಲದ ಚಳಿಗಾಲದ 1959ರ ಹಾಟ್ ಕೌಚರ್ ಕಾಕ್‌ಟೈಲ್ ಉಡುಪನ್ನು ಧರಿಸಿದ್ದರು. ಕ್ರಿಸ್ಟಿಯನ್ ಡಿಯೊರ್ ಅವರ ಮನೆಯ ಹೆಚ್ಚಿನ ಆರ್ಕೈವಲ್ ಡ್ರೆಸ್‌ಗಳು ಇಂದು ಮ್ಯೂಸಿಯಂಗಳಲ್ಲಿದ್ದು, ರಾಧಿಕಾ ಅವರು ಧರಿಸಿದ್ದ ಉಡುಗೆಯನ್ನು 2016 ರಲ್ಲಿ ಹರಾಜು ಮಾಡಲಾಯಿತು. ಅಂದು ಆ ಉಡುಗೆ 3,20,714 ರೂಪಾಯಿ (3,840 ಅಮೆರಿಕ ಡಾಲರ್​)ಗೆ ಮಾರಾಟವಾಗಿತ್ತು.

A post shared by Ambani Family (@ambani_update)

ಜೂಲಿಯನ್ ಅವರ ಅಧಿಕೃತ ವೆಬ್‌ಸೈಟ್ ಪ್ರಕಾರ, ರಾಧಿಕಾ ಅವರ ಡಿಯರ್ ಉಡುಪನ್ನು ಸ್ಯಾನ್ ಫ್ರಾನ್ಸಿಸ್ಕೋದ ಕಸ್ಸಂದ್ರ ಕಾರ್ಪೆಂಟರ್ ಅವರಿಂದ ಪಡೆಯಲಾಗಿದೆ. ಆದರೆ, ಇದನ್ನು ಮೂಲತಃ ಜೀನಿ ಮ್ಯಾಗ್ನಿನ್ ಅವರಿಂದ ಪಡೆಯಲಾಗಿದೆ. ವರದಿಗಳ ಪ್ರಕಾರ ಹಳೆಯ ಉಡುಪುಗಳಲ್ಲಿ ಪರಿಣಿತರಾದ ಡೋರಿಸ್ ರೇಮಂಡ್ ಅವರು ಈ ಉಡುಪನ್ನು ಹರಾಜು ಹಾಕಿದರು.

ಇದೇ ಸಂದರ್ಭದಲ್ಲಿ ಈ ವಿಶೇಷ ಉಡುಗೆಯ ಕುರಿತಾದ ಮಾಹಿತಿ ಸಹ ವೈರಲ್ ಆಗಿದೆ. ಇದು ಬಾರ್ಬಿಕೋರ್ ಮತ್ತು ಕೊಕ್ವೆಟ್ ಕೋರ್ ಫ್ಯಾಷನ್ ಜತೆಗೆ ರಾಸ್​ಬೇರಿ ಗುಲಾಬಿ ಬಣ್ಣ ಮತ್ತು ಬೌ ಅಂಡ್​ ಫ್ರಿಲ್​ ಅಲಂಕಾರಗಳನ್ನು ಹೊಂದಿದೆ. ಸ್ಲೀವ್ ಲೆಸ್ ಡ್ರೆಸ್ 1959ನೇ ಇಸವಿಯದ್ದಾದರೂ ಆಶ್ಚರ್ಯಕರ ರೀತಿಯಲ್ಲಿ ತುಂಬಾ ಮಾಡರ್ನ್ ಆಗಿದೆ. ಹೆಚ್ಚುವರಿಯಾಗಿ ವಿಶಾಲವಾದ ಭುಜದ ಪಟ್ಟಿಗಳು, ಚೌಕಾಕಾರದ ಕಂಠರೇಖೆಯ ಮೇಲಿನ ಸೀಳು, ಅಳವಡಿಸಲಾದ ರವಿಕೆ, ಸೊಂಟದ ರೇಖೆ ಮತ್ತು ನೆರಿಗೆಯು ಸ್ಕರ್ಟ್​ನ ಸೌಂದರ್ಯವನ್ನು ಹೆಚ್ಚಿಸುತ್ತವೆ.
ಅಂದಹಾಗೆ ಜುಲೈ 12 ರಿಂದ 14 ರವರೆಗೆ ಮೂರು ದಿನಗಳ ಸಮಾರಂಭದಲ್ಲಿ ರಾಧಿಕಾ ಮರ್ಚೆಂಟ್ ಮತ್ತು ಅನಂತ್ ಅಂಬಾನಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. (ಏಜೆನ್ಸೀಸ್​)
ಶಾಹೀನ್ ಅಫ್ರಿದಿ ಕೊಟ್ಟ ವಸ್ತುವನ್ನೇ ನಾವಿನ್ನೂ ಬಳಸುತ್ತಿದ್ದೇವೆ: ಅಚ್ಚರಿಯ ಹೇಳಿಕೆ ನೀಡಿದ ಬುಮ್ರಾ ಪತ್ನಿ!

ಈ ವಿಚಾರಕ್ಕೆ ಹೆದರಿದ್ರಾ ನಿವೇದಿತಾ? ಇಡೀ ಕುಟುಂಬ ಈ ನಿರ್ಧಾರ ತೆಗೆದುಕೊಂಡಿದ್ದೇಕೆ? ಮೊಬೈಲ್​ ಕೂಡ….

ಟೂರ್ನಮೆಂಟ್​​ ನಡುವೆ ಕ್ರಿಕೆಟಿಗರ S*X ಜೀವನ ಹೇಗಿರುತ್ತೆ? ಶಾಕಿಂಗ್ ಉತ್ತರ ನೀಡಿದ KKR ಸಹಾಯಕ ಕೋಚ್​!

ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
Sign in to your account
Please enter an answer in digits:4 + thirteen =
Remember me
