ನವದೆಹಲಿ:2021ನೇ ಸಾಲಿನ ಜಾಗತಿಕ ಹಸಿವಿನ ಸೂಚ್ಯಂಕದಲ್ಲಿ (ಜಿಎಚ್​ಐ) ಭಾರತ 101ನೇ ಸ್ಥಾನಕ್ಕೆ ಕುಸಿದಿದೆ. ಕಳೆದ ಸಾಲಿನಲ್ಲಿ ಭಾರತ 94ನೇ ಸ್ಥಾನದಲ್ಲಿತ್ತು. ಸೂಚ್ಯಂಕದಲ್ಲಿ ಭಾರತವು ನೆರೆಯ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ನೇಪಾಳಕ್ಕಿಂತಲೂ ಕಳಪೆ ಸಾಧನೆ ಮಾಡಿದೆ ಎಂದು ಗುರುವಾರ ಬಿಡುಗಡೆಯಾದ ಸೂಚ್ಯಂಕ ತಿಳಿಸಿದೆ. ಚೀನಾ, ಬ್ರೆಜಿಲ್​ ಮತ್ತು ಕುವೈತ್​ ಸಹಿತ 18 ದೇಶಗಳು ಸೂಚ್ಯಂಕ ಪಟ್ಟಿಯಲ್ಲಿ ಉನ್ನತ ಸ್ಥಾನದಲ್ಲಿದೆ ಎಂದು ಹಸಿವು ಮತ್ತು ಅಪೌಷ್ಟಿಕತೆಯನ್ನು ಅಳೆಯುವ ಜಿಎಚ್​ಐ ಹೇಳಿದೆ. ಐರಿಷ್​ನ ನೆರವು ಸಂಸ್ಥೆ “ಕನ್ಸರ್ನ್​ ವರ್ಲ್ಡ್​ವೈಡ್​’ ಮತ್ತು ಜರ್ಮನಿಯ “ವೆಲ್ಟ್​ ಹಂಗರ್​ ಹಿಲ್ಫೆ’ ಜಂಟಿಯಾಗಿ ಈ ಇಂಡೆಕ್ಸ್​ ಸಿದ್ಧಪಡಿಸಿವೆ.
ಭಾರತದ ಹಸಿವಿನ ಮಟ್ಟ “ಕಳವಳಕಾರಿ’ಯಾಗಿದೆ ಎಂದು ವರದಿ ಅಭಿಪ್ರಾಯಪಟ್ಟಿದೆ. 2020ರಲ್ಲಿ 107 ದೇಶಗಳ ಪೈಕಿ ಭಾರತ ಜಿಎಚ್​ಐನಲ್ಲಿ 94ನೇ ಸ್ಥಾನ ಗಳಿಸಿತ್ತು. ಈ ವರ್ಷ ಒಟ್ಟು 116 ದೇಶಗಳಲ್ಲಿ ಸಮೀೆ ನಡೆಸಲಾಗಿದ್ದು 101ನೇ ರ್ಯಾಂಕ್​ ಪಡೆದಿದೆ.
ಯಾವ ಆಧಾರದಲ್ಲಿ ಸಮೀಕ್ಷೆ?ಅಪೌಷ್ಟಿಕತೆ. ಐದು ವರ್ಷಕ್ಕಿಂತ ಒಳಗಿನ ಮಕ್ಕಳು ಅವರ ಎತ್ತರಕ್ಕೆ ಅನುಗುಣವಾದ ತೂಕ ಹೊಂದಿರದೆ ಕಡಿಮೆ ತೂಕವಿರುವುದು. ಇದನ್ನು ಚೈಲ್ಡ್​ ವೇಸ್ಟಿಂಗ್​ ಎನ್ನುತ್ತಾರೆ. ಐದು ವರ್ಷಕ್ಕಿಂತ ಒಳಗಿನ ಮಕ್ಕಳು ತಮ್ಮ ವಯಸ್ಸಿಗೆ ಅನುಗುಣವಾದ ಎತ್ತರ ಹೊಂದಿಲ್ಲದಿರುವುದು. ಇದನ್ನು ಚೈಲ್ಡ್​ ಸ್ಟಂಟಿಂಗ್​ ಎನ್ನುತ್ತಾರೆ. ಐದು ವರ್ಷದೊಳಗಿನ ಮಕ್ಕಳ ಸಾವಿನ ದರ.
ಕಾಂಗ್ರೆಸ್​ ಟೀಕೆಬೆಂಗಳೂರು: ಜಾಗತಿಕ ಹಸಿವಿನ ಸೂಚ್ಯಂಕದಲ್ಲಿ ಭಾರತ ಕುಸಿತ ಕಂಡಿದ್ದು ಅತಿ ಆತಂಕಕಾರಿ. ನಿರಂತರ ಬೆಲೆ ಏರಿಕೆ ಇನ್ನಷ್ಟು ಬಡವರ ಮನೆಯ ಒಲೆಗಳನ್ನು ಆರಿಸುತ್ತದೆ. ನಿರುದ್ಯೋಗ ಇನ್ನಷ್ಟು ಹಸಿದವರನ್ನ ಹೆಚ್ಚಿಸುತ್ತದೆ ಎಂದು ಕಾಂಗ್ರೆಸ್​ ಕಳವಳ ವ್ಯಕ್ತಪಡಿಸಿದೆ. ಆಹಾರ ಭಾರತದ ಪ್ರತಿ ನಾಗರಿಕನ ಹಕ್ಕು ಎಂದು ನಿರ್ಧರಿಸಿದ ಮಹತ್ತರವಾದ ಆಹಾರ ಭದ್ರತಾ ಕಾಯ್ದೆಯನ್ನು ಯುಪಿಎ ಸರ್ಕಾರ ಜಾರಿಗೊಳಿಸಿತ್ತು.ಆದರೆ ಈಗ ಬಿಜೆಪಿ ಸರ್ಕಾರ ಹಸಿವನ್ನೇ ದೇಶಕ್ಕೆ ಕೊಡುಗೆಯಾಗಿ ನೀಡಿದೆ ಎಂದು ಟೀಕಿಸಿದೆ.
ಸಿದ್ದರಾಮಯ್ಯ ಕಿಡಿನಮ್ಮ ಸರ್ಕಾರದ ಅನ್ನಭಾಗ್ಯ, ಕ್ಷೀರಭಾಗ್ಯ, ಬಿಸಿಯೂಟ, ಇಂದಿರಾ ಕ್ಯಾಂಟೀನ್​ ಯೋಜನೆಗಳ ಟೀಕಾಕಾರರು ದಯವಿಟ್ಟು ಹಂಗರ್​ ಇಂಡೆಕ್ಸ್​ ವರದಿಯನ್ನು ಓದಬೇಕು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ. ನೆರೆಯ ದೇಶಗಳಾದ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ನೇಪಾಳ ದೇಶಗಳ ಸ್ಥಿತಿ ನಮ್ಮ ದೇಶಕ್ಕಿಂತ ಉತ್ತಮವಾಗಿದೆ ಎಂದು ಕೇಂದ್ರ ಸರ್ಕಾರವನ್ನು ಅವರು ಲೇವಡಿ ಮಾಡಿದ್ದಾರೆ.
ತಪ್ಪು ವಿಧಾನಕ್ಕೆ ಸರ್ಕಾರ ಆಕ್ರೋಶಜಾಗತಿಕ ಹಸಿವು ಸೂಚ್ಯಂಕದಲ್ಲಿ (ಜಿಎಚ್​ಐ) ಭಾರತ 101ನೇ ಸ್ಥಾನಕ್ಕೆ ಕುಸಿದಿರುವ ವರದಿ ಪ್ರಕಟವಾಗಿರುವ ಬಗ್ಗೆ ಸರ್ಕಾರ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಸೂಚ್ಯಂಕದ ಲೆಕ್ಕಾಚಾರಕ್ಕೆ ಬಳಸಿದ ವಿಧಾನ ತೀರಾ ಅವೈಜ್ಞಾನಿಕವಾಗಿದೆ ಎಂದು ಸರ್ಕಾರ ಹೇಳಿದೆ. ವಿಶ್ವ ಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆ (ಎ್​ಎಒ) ಮಾಡಿದ ಅಂದಾಜಿನ ಆಧಾರದಲ್ಲಿ ಜಿಎಚ್​ಐನಲ್ಲಿ ಭಾರತದ ರ್ಯಾಂಕ್​ ಕಡಿಮೆ ಮಾಡಿದೆ. ಅಪೌಷ್ಟಿಕತೆಯ ಜನಸಂಖ್ಯೆ ಅನುಪಾತದ ಆಧಾರದಲ್ಲಿ ಈ ಲೆಕ್ಕಾಚಾರ ಹಾಕಲಾಗಿದೆ. ನಿಜಕ್ಕೂ ಅದು ವಾಸ್ತವತೆಗೆ ದೂರವಾದುದು ಹಾಗೂ ಗಂಭೀರ ವೈಧಾನಿಕ ತಪು$್ಪಗಳಿಂದ ಕೂಡಿದೆ. ಜಿಎಚ್​ಐ ಸಿದ್ಧಪಡಿಸಿದ ಸಂಸ್ಥೆಗಳು ತಮ್ಮ ಕೆಲಸವನ್ನು ಶ್ರದ್ಧೆಯಿಂದ ಮಾಡಿಲ್ಲ ಎಂದು ಕೇಂದ್ರ ಸರ್ಕಾರ ಟೀಕಿಸಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty + 15 =
Remember me
