ಶಿರಡಿ:ಸಾಯಿ ಬಾಬಾನ ದರ್ಶನಕ್ಕೆ ಆಗಮಿಸುವ ಭಕ್ತಾದಿಗಳಿಗೆ ತೆರೆದಿರುತ್ತದೆ ದೇವಾಸ್ಥಾನ ಎಂದು ಶಿರಡಿ ಸಾಯಿ ದೇಗುಲದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದೀಪಕ್​ ಮುಗ್ಲಿಕರ್​ ಸ್ಪಷ್ಟಪಡಿಸಿದ್ದಾರೆ.
ಮಾಧ್ಯಮಗಳಲ್ಲಿ ಭಾನುವಾರ (ಜ.19)ದಿಂದ ಸಾಯಿಬಾಬಾನ ದೇಗುಲ ಬಂದ್​ ಇರುತ್ತದೆ ಎಂದು ಸುದ್ದಿಯಾಗಿತ್ತು. ಆದರೆ ದೇವಾಸ್ಥಾನ ತೆರೆದಿದ್ದು, ಬಂದ ಭಕ್ತರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಅವರು ಸ್ಪಷ್ಟ ಪಡಿಸಿದ್ದಾರೆ.
ಕಳೆದ ವಾರ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್​ ಠಾಕ್ರೆ ಅವರು ಪ್ರಭಾನಿ ಜಿಲ್ಲೆಯ ಪಥ್ರಿ ಎಂಬ ಗ್ರಾಮವೇ ಸಾಯಿ ಬಾಬಾ ಅವರ ಜನ್ಮ ಸ್ಥಳ ಎಂದಿದ್ದರು. ಅಲ್ಲದೆ ಈ ಬಾರಿ ಬಜೆಟ್​ನಲ್ಲಿ ಸಾಯಿ ಬಾಬಾ ಜನ್ಮ ಸ್ಥಳವಾದ ಪಥ್ರಿ ಅಭಿವೃದ್ಧಿಗೆ 100 ಕೋಟಿ ರೂಪಾಯಿಗಳ ಅನುದಾನ ನೀಡಲಾಗುವುದು ಎಂದು ಘೋಷಿಸಿದ್ದರು.
ಉದ್ಧವ್​ ಠಾಕ್ರೆ ಅವರ ಈ ಹೇಳಿಕೆಯಿಂದಾಗಿ ವಿವಾದ ಉಂಟಾಗಿತ್ತು. ಈ ನಡುವೆ ಶಿರಡಿಯ ಸಾಯಿ ಬಾಬಾ ಸಂಸ್ಥಾನ ಟ್ರಸ್ಟ್​ ಈ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿ, ಭಾನುವಾರದಿಂದ ದೇಗುಲ ಬಂದ್​ ಮಾಡಲಾಗುವುದು ಎಂದು ಮಾಧ್ಯಮಗಳಿಗೆ ತಿಳಿಸಿತ್ತು.
ಆದರೆ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದೀಪಕ್​ ಮುಗ್ಲಿಕರ್​ ಅದನ್ನು ಅಲ್ಲಗಳೆದಿದ್ದಾರೆ.(ಏಜೆನ್ಸೀಸ್​)
Maharashtra: Devotees visit Shirdi Sai Baba temple amid bandh called today in#Shirditown, against CM Uddhav Thackeray's reported comment calling Pathri (in Parbhani) as Sai Baba's birthplace.pic.twitter.com/z5nPzxMiFZ
— ANI (@ANI)January 19, 2020

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen + 12 =
Remember me
