ಕೋವಿಡ್​ನ ಮೊದಲನೆಯ ಅಲೆ, ಎರಡನೆಯ ಅಲೆ ತಡೆಯುವುದಕ್ಕಾಗಿ ಜಾರಿಗೊಳಿಸಿದ್ದ ಲಾಕ್​ಡೌನ್ ಕಾರಣ ಉದ್ಯೋಗ ನಷ್ಟ, ಆದಾಯ ನಷ್ಟ, ಉತ್ಪಾದನೆ ನಷ್ಟ ಸೇರಿ ಅರ್ಥವ್ಯವಸ್ಥೆಯ ಮೇಲೆ ಕೆಟ್ಟ ಪರಿಣಾಮವಾಗಿದೆ. ಬಹುತೇಕ ಎಲ್ಲ ರಾಷ್ಟ್ರಗಳೂ ವಿತ್ತೀಯ ಕೊರತೆ ಎದುರಿಸುತ್ತಿವೆ. ಆದಾಗ್ಯೂ, ಭಾರತದಲ್ಲಿ ಕರೊನಾದ ಎರಡು ಅಲೆಗಳ ಬಳಿಕವೂ ಅರ್ಥವ್ಯವಸ್ಥೆ ಚೇತರಿಕೆಯ ಲಕ್ಷಣಗಳನ್ನು ತೋರುತ್ತಿರುವುದು ಆಶಾದಾಯಕ ಬೆಳವಣಿಗೆ. ಇದೇ ವೇಳೆ, ಅರ್ಥವ್ಯವಸ್ಥೆಯ ಪುನಶ್ಚೇತನಕ್ಕಾಗಿ ಮನಿ ಪ್ರಿಂಟಿಂಗ್, ಡೆಟ್ ಮಾನೆಟೈಸೇಶನ್, ಡೈರೆಕ್ಟ್ ಮಾನೆಟೈಸೇಶನ್ ಮುಂತಾದ ವಿಚಾರಗಳು ಚರ್ಚೆಯಲ್ಲಿವೆ. ಅರ್ಥವ್ಯವಸ್ಥೆ ಪುನಶ್ಚೇತನಕ್ಕೆ ಇವುಗಳು ಸುಲಭ ಪರಿಹಾರ ಒದಗಿಸಬಲ್ಲವು ಎಂಬ ವಾದ ಇರುವಂತೆಯೇ, ಇದು ಕೊನೆಯ ಆಯ್ಕೆಯಾಗಬೇಕೆಂಬ ಎಚ್ಚರಿಕೆಯನ್ನೂ ತಜ್ಞರು ಕೊಡುತ್ತಿದ್ದಾರೆ. ಕೋವಿಡ್ ಸಂಕಷ್ಟದ ಕಾರಣ ಕುಸಿದ ಅರ್ಥವ್ಯವಸ್ಥೆಗೆ ಪುನಶ್ಚೇತನ ಒದಗಿಸುವುದಕ್ಕಾಗಿ ಜಗತ್ತಿನಾದ್ಯಂತ ಎಲ್ಲ ಸರ್ಕಾರಗಳು ತಮ್ಮದೇ ಆದ ರೀತಿಯಲ್ಲಿ ಪ್ರಯತ್ನ ನಡೆಸಿವೆ. ವಿವಿಧ ಕ್ಷೇತ್ರಗಳ ಸುಧಾರಣೆಗಾಗಿ ವಿಭಿನ್ನ ರೀತಿಯ ಆರ್ಥಿಕ ಪ್ಯಾಕೇಜ್​ಗಳನ್ನು ಘೋಷಿಸಿವೆ. ತೆರಿಗೆ ರಜೆ, ತೆರಿಗೆ ವಿನಾಯಿತಿ, ಸಬ್ಸಿಡಿ ಮತ್ತು ಇತರ ಪರಿಹಾರ ಉಪ್ರಕಮಗಳನ್ನೂ ಜಾರಿಗೊಳಿಸಿವೆ. ಸರಳವಾಗಿ ಹೇಳಬೇಕು ಎಂದರೆ ಸರ್ಕಾರಗಳು ಎರಡು ಮೂಲತತ್ತ್ವಗಳ ವಿಧಾನದ ಮೂಲಕ ಅಂದರೆ ಸಾಲ ಪಡೆಯುವುದು ಅಥವಾ ತೆರಿಗೆ ಹೆಚ್ಚಿಸುವುದರ ಮೂಲಕ ಅವುಗಳ ವಿತ್ತೀಯ ಕೊರತೆ ಸರಿದೂಗಿಸಲು ಪ್ರಯತ್ನಿಸಿವೆ. ಇವಕ್ಕೆ ಹೊರತಾಗಿ ಸರ್ಕಾರಗಳ ಎದುರು 3ನೇ ಆಯ್ಕೆಯೊಂದು ಲಭ್ಯವಿದ್ದು, ಆಯಾ ರಾಷ್ಟ್ರಗಳ ಅರ್ಥವ್ಯವಸ್ಥೆಗೆ ಅನುಗುಣವಾಗಿ ಇದನ್ನು ಮನಿ ಪ್ರಿಂಟಿಂಗ್, ಡೆಟ್ ಮಾನೆಟೈಸೇಶನ್, ಡೈರೆಕ್ಟ್ ಮಾನೆಟೈಸೇಶನ್ ಎನ್ನುತ್ತಾರೆ.
ಮನಿ ಪ್ರಿಂಟಿಂಗ್:ಪ್ರಿಂಟಿಂಗ್ ಮೂಲಕ ಸರ್ಕಾರ ಹೇಗೆ ಹಣ ಗಳಿಸಬಹುದು? ಇದು ಮಾನೆಟೈಸೇಶನ್​ಗೆ ಸರ್ಕಾರಗಳು ಬಳಸುವ ಅಸಾಂಪ್ರದಾಯಿಕವಾದ ಮೂರನೇ ಪರ್ಯಾಯ ವಿಧಾನವಾಗಿದೆ. ಯಾವಾಗ ಸೆಂಟ್ರಲ್ ಬ್ಯಾಂಕ್ ಸರ್ಕಾರದಿಂದ ನೇರವಾಗಿ ಬಾಂಡ್​ಗಳನ್ನು ಖರೀದಿಸುತ್ತದೆಯೋ ಆಗ ಮಾನೆಟೈಸೇಶನ್ ಪ್ರಕ್ರಿಯೆ ನಡೆಯುತ್ತದೆ. ಇದನ್ನು ‘ಮನಿ ಪ್ರಿಂಟಿಂಗ್’ ಎಂದು ಹೇಳುತ್ತಾರೆ. ಸಹಜ ಜಿಡಿಪಿ ಏರಿಕೆಯಾಗದೆಯೇ ಹೊಸ ಹಣ ಸೃಷ್ಟಿ (ಅರ್ಥಾತ್ ಬ್ಯಾಂಕ್ ನೋಟುಗಳು ಎಂಬುದು ಇದರ ಅರ್ಥವಲ್ಲ)ಯಾಗುತ್ತದೆ.
ಮಾನೆಟೈಸೇಷನ್ ಎಂದರೆ..:ಆರ್ಥಿಕ ಪರಿಭಾಷೆಯಲ್ಲಿ ಮಾನೆಟೈಸೇಷನ್ ಎಂದರೆ ಹಣಗಳಿಕೆ ಎಂಬ ಅರ್ಥವಿದೆಯಾದರೂ, ಏನನ್ನಾದರೂ ಹಣವನ್ನಾಗಿ ಪರಿವರ್ತಿಸುವುದು ಎಂಬ ವಿಶಾಲ ಅರ್ಥವನ್ನು ಇದು ಹೊಂದಿದೆ. ಕರೊನಾ ಸಂಕಷ್ಟಕ್ಕೂ ಮೊದಲೇ ಮಾಡರ್ನ್ ಮಾನೆಟರಿ ಥಿಯರಿ ಅಮೆರಿಕದಲ್ಲಿ ಹೆಚ್ಚು ಚರ್ಚೆಗೊಳಗಾಯಿತು. ಅಲ್ಲಿ ಎಡಪಂಥೀಯ ರಾಜಕಾರಣಿಗಳು ಇದನ್ನು ಬೆಂಬಲಿಸಿದ್ದರು. ಭಾರತದಲ್ಲೂ ಮಾಜಿ ವಿತ್ತಸಚಿವರು, ಆರ್​ಬಿಐನ ಮಾಜಿ ಗವರ್ನರ್​ಗಳ ಪೈಕಿ ಕೆಲವರು ಮನಿ ಪ್ರಿಂಟಿಂಗ್ ಮೂಲಕ ಮಾನೆಟೈಸೇಶನ್ ಮಾಡುವುದನ್ನು ಬೆಂಬಲಿಸಿದ್ದಾರೆ.
ಡೈರೆಕ್ಟ್ ಮಾನೆಟೈಸೇಷನ್:ಕೇಂದ್ರ ಸರ್ಕಾರ ಮತ್ತು ಆರ್​ಬಿಐ ನಡುವೆ ನೇರ ವ್ಯವಹಾರ (ಹಣಕಾಸು ವ್ಯವಸ್ಥೆಯನ್ನು ಬೈಪಾಸ್ ಮಾಡುವಂತಹ) ಊಹಿಸಿಕೊಳ್ಳಿ. ಈ ಸನ್ನಿವೇಶದಲ್ಲಿ ಸರ್ಕಾರ ಹೊಸ ಬಾಂಡ್​ಗಳನ್ನು ಆರ್​ಬಿಐಗೆ ನೀಡಿ ಹೊಸ ಕರೆನ್ಸಿ ಮುದ್ರಿಸುವುದಕ್ಕೆ ಸೂಚಿಸುತ್ತದೆ. ಆರ್​ಬಿಐ ಅದನ್ನು ಪಾಲಿಸಿ ಹಣವನ್ನು ಕೇಂದ್ರ ಸರ್ಕಾರಕ್ಕೆ ಒದಗಿಸುತ್ತದೆ. ಸರ್ಕಾರ ಇದನ್ನು ದೇಶದ ಆರ್ಥಿಕ ಪುನಶ್ಚೇತನಕ್ಕೆ ಬಳಸುತ್ತದೆ. ಮತ್ತು ನಿಗದಿತ ಗಡುವಿನಲ್ಲಿ ಹಣವನ್ನು ಹಿಂದಿರುಗಿಸಿ ಬಾಂಡ್​ಗಳನ್ನು ಕೇಂದ್ರ ಸರ್ಕಾರ ವಾಪಸ್ ಪಡೆಯುತ್ತದೆ ಎಂದಾದರೆ ಇಂತಹ ಪ್ರಕ್ರಿಯೆಯನ್ನು ಡೈರೆಕ್ಟ್ ಮಾನೆಟೈಸೇಷನ್ ಎನ್ನುತ್ತಾರೆ.
ಇನ್​ಡೈರೆಕ್ಟ್ ಮಾನೆಟೈಸೇಷನ್:ಅರ್ಥವ್ಯವಸ್ಥೆ ಪುನಶ್ಚೇತನಕ್ಕಾಗಿ ಕೇಂದ್ರ ಸರ್ಕಾರ ಹಾಗೂ ಭಾರತೀಯ ರಿಸರ್ವ್ ಬ್ಯಾಂಕ್ (ಆರ್​ಬಿಐ) ಸದ್ಯ ಪಾಲಿಸುತ್ತಿರುವ ವಿಧಾನವೇ ಇನ್​ಡೈರೆಕ್ಟ್ ಮಾನೆಟೈಸೇಷನ್. ಇಲ್ಲಿ ಆರ್​ಬಿಐ ಓಪನ್ ಮಾರ್ಕೆಟ್ ಆಪ ರೇಷನ್ಸ್ ಮೂಲಕ ಅಥವಾ ಸೆಕೆಂಡರಿ ಮಾರ್ಕೆಟ್​ನಿಂದ ಸರ್ಕಾರದ ಬಾಂಡ್​ಗಳನ್ನು ಖರೀದಿಸುತ್ತದೆ. ಆ ಮೂಲಕ ಸರ್ಕಾರದ ಖರ್ಚುವೆಚ್ಚಗಳಿಗೆ ಹಣ ಲಭ್ಯವಾಗುವಂತೆ ಮಾಡುತ್ತದೆ.
ಡೆಟ್ ಮಾನೆಟೈಸೇಷನ್:ಸರ್ಕಾರ ತನ್ನ ಆದಾಯ ಮೀರಿ ಖರ್ಚು ಮಾಡತೊಡಗಿದಾಗ ಉಂಟಾಗುವ ಹಣಕಾಸಿನ ಕೊರತೆಯನ್ನೇ ಹಣಕಾಸಿನ ಮೂಲವನ್ನಾಗಿ ಪರಿವರ್ತಿಸುವ ಪ್ರಕ್ರಿಯೆಗೆ ‘ಡೆಟ್ ಮಾನೆಟೈಸೇಷನ್’ ಎಂದು ಹೇಳುತ್ತಾರೆ. ಸರ್ಕಾರದ ಇಂತಹ ಹೆಚ್ಚುವರಿ ಖರ್ಚುಗಳನ್ನು ಹಣಕಾಸಿನ ಮೂಲವನ್ನಾಗಿ ಪರಿ ವರ್ತಿಸಲು ಸರ್ಕಾರದ ಬಾಂಡ್​ಗಳನ್ನು ಸೆಂಟ್ರಲ್ ಬ್ಯಾಂಕ್ ಖರೀದಿಸುತ್ತದೆ. ಈ ಬಾಂಡ್​ಗಳನ್ನು ಮೆಚ್ಯುರಿಟಿ ತನಕ ಇರಿಸಿ ಕೊಂಡು ಬಳಿಕ ನಿಶ್ಚಿತ ಬಡ್ಡಿಸಹಿತ ಹಿಂದಿರುಗಿಸುತ್ತದೆ. ಈ ರೀತಿ ಡೆಟ್ ಮಾನೆಟೈಸೇಶನ್ ಮುಂದುವರಿದ ರಾಷ್ಟ್ರಗಳಾದ ಅಮೆರಿಕ (108%), ಬ್ರಿಟನ್ (81%), ಜಪಾನ್ (237%)ಗಳಲ್ಲಿ ಕಂಡುಬರುತ್ತದೆ.
ಇತಿಹಾಸದ ಹಾದಿ:ಸರ್ಕಾರದ ವಿತ್ತೀಯ ಕೊರತೆಯನ್ನು 1997ರ ತನಕ ಆರ್​ಬಿಐ ತನ್ನಿಂತಾನೇ ಮಾನೆಟೈಸ್ ಮಾಡುತ್ತಿತ್ತು. 1994ರಲ್ಲಿ ಡಾ.ಮನಮೋಹನ್ ಸಿಂಗ್ (ಅಂದಿನ ಹಣಕಾಸು ಸಚಿವರು) ಮತ್ತು ಅಂದು ಆರ್​ಬಿಐ ಗವರ್ನರ್ ಸಿ.ರಂಗರಾಜನ್ ಡೈರೆಕ್ಟ್ ಮಾನೆಟೈ ಸೇಶನ್ ಸೌಲಭ್ಯವನ್ನು 1997ರಲ್ಲಿ ಕೊನೆಗೊಳಿಸುವ ನಿರ್ಧಾರ ತೆಗೆದು ಕೊಂಡರು.
ದೇಶದ ಅರ್ಥವ್ಯವಸ್ಥೆಯ ಪುನಶ್ಚೇತನಕ್ಕೆ ಮನಿ ಪ್ರಿಂಟಿಂಗ್ ಆಯ್ಕೆ ಕಾರ್ಯಸಾಧುವಲ್ಲ. ಇದಕ್ಕೆ ದೇಶದ ಆರ್ಥಿಕ ಸಲಹೆಗಾರ ಡಾ.ಕೃಷ್ಣಮೂರ್ತಿ ಸುಬ್ರಮಣಿಯನ್ ಅವರ ವಿರೋಧವೂ ಇದೆ. ನೋಟುಗಳನ್ನು ಪ್ರಿಂಟ್ ಮಾಡಬೇಕು ಎಂದರೆ ಹಿಂದೆಲ್ಲ ಅಷ್ಟು ಮೌಲ್ಯದ ಚಿನ್ನವನ್ನು ಆರ್​ಬಿಐನಲ್ಲಿ ಠೇವಣಿ ಇರಿಸಬೇಕಾಗುತ್ತಿತ್ತು. ಇದಕ್ಕೆ ‘ಗೋಲ್ಡ್ ಸ್ಟಾಂಡರ್ಡ್’ ಎಂಬ ಮಾನದಂಡ ಇತ್ತು. ಈಗ ಈ ಮಾನದಂಡವಿಲ್ಲ. ಮಾಡರ್ನ್ ಮಾನೆಟರಿ ಥಿಯರಿ ಪ್ರಕಾರ ನೋಟುಗಳ ಮುದ್ರಣ ನಡೆಯುತ್ತದೆ. ಇಲ್ಲಿ ಪ್ರಧಾನಮಂತ್ರಿ, ವಿತ್ತ ಸಚಿವರು ಮತ್ತು ಸೆಂಟ್ರಲ್ ಬ್ಯಾಂಕ್ ಗವರ್ನರ್ ನಿರ್ಧಾರ ತೆಗೆದುಕೊಂಡರೆ ಸಾಕು. ಈ ರೀತಿ ಮಾನೆಟೈಸ್ ಮಾಡಿದ ಹಣವನ್ನು ಸರ್ಕಾರ ಬಾಂಡ್​ಗಳಲ್ಲಿ ಬ್ಯಾಕ್​ಅಪ್ ಇಟ್ಟುಕೊಳ್ಳುತ್ತದೆ. ಈ ರೀತಿ ಮಾಡುವಾಗ ಇವುಗಳನ್ನು ಇನ್ಶೂರೆನ್ಸ್ ಕಂಪನಿಗಳು, ಬ್ಯಾಂಕುಗಳು ಹಣಕಾಸು ಮಾರುಕಟ್ಟೆಯಲ್ಲಿರುವವರಿಗೆ ಮಾರಾಟ ಮಾಡುತ್ತವೆ. ಇಂತಹ ಕಂಪನಿಗಳು ಸರ್ಕಾರದ ಬಾಂಡ್​ಗಳನ್ನು ಖರೀದಿಸಿದಾಗ ಅವುಗಳ ಬಳಿ ಹೆಚ್ಚುವರಿ ಹೂಡಿಕೆಗೆ ಹಣ ಕಡಿಮೆಯಾಗುತ್ತದೆ. ದೇಶದ ಅರ್ಥವ್ಯವಸ್ಥೆಯನ್ನು ಬೇರೆ ಬೇರೆ ಗ್ರೋತ್ ಟ್ರಾಜೆಕ್ಟರಿ ಹೊಂದಿರುವ ದೇಶಗಳೊಂದಿಗೆ ಹೋಲಿಕೆ ಮಾಡಬಾರದು. ಹಣದುಬ್ಬರ ಪ್ರಮುಖ ವಿಚಾರ. ಇದು ಬಡ ಮತ್ತು ಮಧ್ಯಮವರ್ಗವನ್ನು ಬಹುಬೇಗ ಕಾಡುತ್ತದೆ. ಹಣದುಬ್ಬರ ಕಡಿಮೆ ಮಾಡಬೇಕು. ಇಂಥ ಸನ್ನಿವೇಶದಲ್ಲಿ ಆರ್​ಬಿಐ ಬಡ್ಡಿದರ ಕಡಿಮೆ ಮಾಡುತ್ತದೆ ಅಥವಾ ಸ್ಥಿರವಾಗಿಡುತ್ತದೆ. ಮನಿ ಪ್ರಿಂಟಿಂಗ್ ಮಾಡಿದರೆ ಜಿಡಿಪಿ ಬೆಳವಣಿಗೆಗೆ ಅನುಕೂಲವಾಗುವಂತೆ ಮೂಲಸೌಕರ್ಯ ಅಭಿವೃದ್ಧಿಗೆ ಹೂಡಿಕೆ ಮಾಡಬೇಕು. ತೆರಿಗೆ ಕಳ್ಳತನ ತಪ್ಪಿಸಿ, ಅರ್ಹರೆಲ್ಲರೂ ತೆರಿಗೆ ಪಾವತಿಸುವುದನ್ನು ಖಾತರಿಪಡಿಸಬೇಕು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − fifteen =
Remember me
