ಹೈದರಾಬಾದ್​​:ಖ್ಯಾತ ನಟ ಬ್ರಹ್ಮಾಜಿ, ಡೈರೆಕ್ಟರ್ ಅನಿಲ್ ರವಿಪುಡಿಗೆ ಬೆದರಿಕೆ ಹಾಕಿದ್ದಾರೆ. ಬ್ರಹ್ಮಾಜಿ ಅನಿಲ್‌ಗೆ ಕತ್ತಿನ ಮೇಲೆ ಚಾಕುವಿನಿಂದ ಬೆದರಿಕೆ ಹಾಕಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನೆಟ್ಟಿಗರು ತಮ್ಮದೇ ಶೈಲಿಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ.
ಇದನ್ನೂ ಓದಿ:1 ಲೀ.ಗಿಂತ ಕಡಿಮೆ ನೀರಿನ ಬಾಟಲ್‌ ಬಳಕೆ, ಉತ್ಪಾದನೆ ನಿಷೇಧ: ಈ ಹೊಸ ನಿಯಮ ಜಾರಿ ಯಾವಾಗ?
ಬ್ರಹ್ಮಾಜಿಯವರ ಮಗ ಸಂಜಯ್ ರಾವ್ ‘ಪಿಟ್ಟಕಥಾ’ ಚಿತ್ರದ ಮೂಲಕ ಉತ್ತಮ ಯಶಸ್ಸನ್ನು ಪಡೆದರು. ಸುಮಾರು ಮೂರು ವರ್ಷಗಳ ಗ್ಯಾಪ್ ನಂತರ ‘ಸ್ಲಂ ಡಾಗ್ ಹಸ್ಬೆಂಡ್’ ಮೂಲಕ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಎಆರ್ ಶ್ರೀಧರ್ ನಿರ್ದೇಶನ ಮಾಡುತ್ತಿರುವ ಈ ಸಿನಿಮಾದಲ್ಲಿ ಪ್ರಣವಿ ಮನುಕೊಂಡ ನಾಯಕಿ. ಮೈಕ್ ಮೂವೀಸ್ ಬ್ಯಾನರ್ ಅಡಿಯಲ್ಲಿ ಅಪ್ಪಿರೆಡ್ಡಿ ಮತ್ತು ವೆಂಕಟ್ ಅನ್ನಪರೆಡ್ಡಿ ಚಿತ್ರವನ್ನು ನಿರ್ಮಿಸುತ್ತಿದ್ದು, ಭೀಮ್ ಸಿಸೆರೊಲಿಯೊ ಸಂಗೀತ ನೀಡುತ್ತಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ಟ್ರೇಲರ್ ಪ್ರೇಕ್ಷಕರ ಮನಸೂರೆಗೊಂಡಿದೆ.
ಇದನ್ನೂ ಓದಿ:ಬಿರಿಯಾನಿ ತಿಂದ ನಂತರ ನಿಮಗೆ ಬಾಯಾರಿಕೆಯಾಗಲು ಕಾರಣವೇನು ಗೊತ್ತಾ?
ಈ ನಡುವೆ ಈ ಸಿನಿಮಾ ರಿಲೀಸ್ ಸಮಯ ಹತ್ತಿರವಾಗುತ್ತಿದ್ದಂತೆ ಪ್ರಚಾರ ಕಾರ್ಯವನ್ನು ಚಿತ್ರತಂಡ ಹೆಚ್ಚಿಸಿದೆ. ಅದರ ಭಾಗವಾಗಿ, ಬ್ರಹ್ಮಾಜಿ ಮತ್ತು ಅನಿಲ್ ರಾವುಪುಡಿ ಚಿತ್ರದ ಬಿಡುಗಡೆ ದಿನಾಂಕವನ್ನು ಹೇಳುವ ಒಂದು ಸಣ್ಣ ಮೋಜಿನ ವೀಡಿಯೊವನ್ನು ಮಾಡಿದ್ದಾರೆ.
ಇದನ್ನೂ ಓದಿ:ರೆಸ್ಟೊರೆಂಟ್​​​ನಲ್ಲಿ ಕೆಲಸ ಮಾಡುತ್ತಿರುವ ಖ್ಯಾತ ಗಾಯಕಿ; ಅಷ್ಟೊಂದು ಕಷ್ಟ ಇದ್ಯಾ ಮೇಡಂ? ಎಂದ ಫ್ಯಾನ್ಸ್​​
ವಿಡಿಯೋದಲ್ಲಿ ಏನಿದೆ?:ಅನಿಲ್ ರವಿಪುಡಿ ಸಿನಿಮಾವೊಂದರ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ನಟ ಬ್ರಹ್ಮಾಜಿ ಅವರ ಬಳಿ ಹೋಗುತ್ತಾರೆ. ತಮ್ಮ ಮಗನ ಸಿನಿಮಾದ ಬಿಡುಗಡೆ ದಿನಾಂಕವನ್ನು ಹೇಳುವಂತೆ ಕೇಳುತ್ತಾರೆ.ಆದರೆ ಅನಿಲ್ ರವಿಪುಡಿ ಹೇಳುವುದಿಲ್ಲ. ಕೂಡಲೇ ಬ್ರಹ್ಮಾಜಿ ಅನಿಲ್ ಕತ್ತಿನ ಬಳಿಯಿದ್ದ ಚಾಕು ತೆಗೆದುಕೊಂಡು ಬೆದರಿಸಿದ್ದಾರೆ. ಜುಲೈ 29 ರಂದು ಅನಿಲ್ ರವಿಪುಡಿ ಅವರ ಸ್ಲಂ ಡಾಗ್ ಹಸ್ಬೆಂಡ್ ಚಿತ್ರ ಪ್ರೇಕ್ಷಕರಿಗೆ ಬರುವುದರೊಂದಿಗೆ ವೀಡಿಯೊ ಕೊನೆಗೊಳ್ಳುತ್ತದೆ.
Funny Banter Between@actorbrahmaji& Blockbuster director@AnilRavipudi😅
#SlumDogHusbandhits the screens on 29th July@SanjayROfficial@Pranavimanukon2@ar_sreedhar@Appireddya@Mic_Movies@RelianceEnt@kvrajendra@GskMedia_PR@saregamasouthpic.twitter.com/TrKHqyhhvz
— BA Raju's Team (@baraju_SuperHit)July 23, 2023

ರೆಸ್ಟೊರೆಂಟ್​​​ನಲ್ಲಿ ಕೆಲಸ ಮಾಡುತ್ತಿರುವ ಖ್ಯಾತ ಗಾಯಕಿ; ಅಷ್ಟೊಂದು ಕಷ್ಟ ಇದ್ಯಾ ಮೇಡಂ? ಎಂದ ಫ್ಯಾನ್ಸ್​​

Sign in to your account
Please enter an answer in digits:1 × 1 =
Remember me
