ಬೆಂಗಳೂರು:ಕೇಂದ್ರ ಸರ್ಕಾರದ ಹುದ್ದೆ ಹಾಗೂ ಸೇವೆಯಲ್ಲಿರುವ ಅಂಗವಿಕಲ ಅಭ್ಯರ್ಥಿಗಳ ಬಡ್ತಿಗೆ ಸಂಬಂಧಿಸಿದಂತೆ ಸರ್ಕಾರವು ಸುತ್ತೋಲೆಯೊಂದನ್ನು ಹೊರಡಿಸಿದ್ದು, ಸಾಮಾನ್ಯ ಅಭ್ಯರ್ಥಿಗಳ ಬಡ್ತಿ ಹುದ್ದೆಗಳಿಗೂ ಇವರನ್ನು ಪರಿಗಣಿಸಬಹುದು. ಅಂಗವಿಕಲರೆಂಬ ಕಾರಣಕ್ಕೆ ಬಡ್ತಿ ನಿರಾಕರಿಸುವಂತಿಲ್ಲ ಎಂದು ಸ್ಪಷ್ಟಪಡಿಸಿದೆ. ಕರ್ನಾಟಕ ಸರ್ಕಾರವನ್ನು ಪ್ರತಿವಾದಿಯಾಗಿಸಿದ್ದ ಸಿದ್ದರಾಜು ಎಂಬುವರ ಅರ್ಜಿ ವಿಚಾರಣೆ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನೀಡಿದ್ದ ನಿರ್ದೇಶನದನ್ವಯ ಈ ಸುತ್ತೋಲೆ ಹೊರಡಿಸಿರುವುದಾಗಿ ಕೇಂದ್ರ ಸರ್ಕಾರ ತಿಳಿಸಿದೆ.
ಪ್ರಮಾಣ ನಿಗದಿ:ಆಯಾ ವೃಂದ ಬಲದ ಶೇ.4 ಬಡ್ತಿಯನ್ನು ಅಂಗವಿಕಲರಿಗಾಗಿ ನಿಗದಿ ಮಾಡಲಾಗಿದೆ. ಗ್ರೂಪ್ ಸಿ ಯಿಂದ ಗ್ರೂಪ್ ಬಿ ಗೆ ಬಡ್ತಿ ನೀಡುವುದಾದಲ್ಲಿ ಗ್ರೂಪ್ ಸಿ ವೃಂದದ ಒಟ್ಟು ಬಲದ ಶೇ.4 ಅಂಗವಿಕಲ ಅಭ್ಯರ್ಥಿಗಳನ್ನು ಪರಿಗಣಿಸಬೇಕು. ಗ್ರೂಪ್ ಬಿಯಿಂದ ಗ್ರೂಪ್ ಎಗೆ ಬಡ್ತಿ ನೀಡುವುದಾದಲ್ಲಿ ಗ್ರೂಪ್ ಎ ಕೆಳಹಂತದ ಹುದ್ದೆಗಳನ್ನು ಮೀಸಲಾಗಿಡತಕ್ಕದ್ದು ಎಂದು ತಿಳಿಸಿದೆ. ಬಡ್ತಿ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಆಯ್ಕೆ ಮಾಡಲಾಗುತ್ತಿದ್ದರೆ ಶೇ.75 ಸ್ಥಾನಗಳನ್ನು ಭರ್ತಿ ಮಾಡಿ ಉಳಿದವುಗಳನ್ನು ಬಡ್ತಿ ಮೂಲಕ ತುಂಬಿಕೊಳ್ಳಬೇಕು ಎಂದು ತಿಳಿಸಲಾಗಿದೆ.
ನಿರಾಕರಿಸುವಂತಿಲ್ಲ:ಅಂಗವಿಕಲರು ಎಂಬ ಕಾರಣಕ್ಕೆ ಉದ್ಯೋಗಿಗೆ ಬಡ್ತಿ ನಿರಾಕರಿಸುವಂತಿಲ್ಲ ಎಂದು 2016ರ ಅಂಗವಿಕಲರ ಹಕ್ಕು ಕಾಯ್ದೆಯಲ್ಲಿ ಸ್ಪಷ್ಟಪಡಿಸಲಾಗಿದೆ. ಸೇವೆಯಲ್ಲಿದ್ದಾಗಲೇ ಅಂಗವೈಕಲ್ಯಕ್ಕೆ ಗುರಿಯಾದಲ್ಲಿ ಅವರನ್ನು ಅದೇ ವೇತನಶ್ರೇಣಿ ಹಾಗೂ ಸೇವಾ ಸೌಲಭ್ಯವಿರುವ ಹುದ್ದೆಗೆ ಸ್ಥಳಾಂತರಿಸಬೇಕು. ಇಂತದ್ದೊಂದು ಅವಕಾಶವಿಲ್ಲದಿದ್ದಲ್ಲಿ, ಅವರಿರುವ ಹುದ್ದೆಯನ್ನು ‘ಸೂಪರ್ ನ್ಯೂಮರರಿ ಪೋಸ್ಟ್’ ಎಂದು ಪರಿಗಣಿಸಿ ಮುಂದುವರಿಸತಕ್ಕದ್ದು ಎಂದು ಹೇಳಲಾಗಿದೆ. ಅಂಗವಿಕಲರಿಗೆ ಮೀಸಲಾಗಿಡಬೇಕಾದ ಹುದ್ದೆಗಳನ್ನು ಆಯಾ ಇಲಾಖೆಯಲ್ಲಿ ಗುರುತಿಸಲಾಗಿದೆ. ಈ ಹುದ್ದೆಗಳನ್ನು ಅವರ ಬಡ್ತಿಗೆ ಪರಿಗಣಿಸತಕ್ಕದ್ದು.
ಅಂಗವೈಕಲ್ಯದ ಹೊರತಾಗಿ ಉದ್ಯೋಗಿಯು ಸಾಮಾನ್ಯ ನಿಯಮಗಳಡಿಯಲ್ಲಿ ಅರ್ಹರಾಗಿದ್ದಲ್ಲಿ ಅಂಗವಿಕಲರ ಬಡ್ತಿ ಮೀಸಲಾತಿಯ ಹುದ್ದೆಯಲ್ಲದಿದ್ದರೂ ಅವರನ್ನು ಆ ಹುದ್ದೆಗೆ ನಿಯೋಜಿಸಬಹುದು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ. ಸೇವೆ ಸೇರಿದ ಬಳಿಕ ಅಂಗವಿಕಲರಾದರೆ, ಅವರನ್ನು ಅಂಗವಿಕಲರ ಬಡ್ತಿ ಮೀಸಲಾತಿಗೆ ಪರಿಗಣಸಿತಕ್ಕದ್ದು. ಆದರೆ, ಆದರೆ ಅವರ ಸೇವಾ ಹಿರಿತನವು ಅಂಗವೈಕಲ್ಯಕ್ಕೆ ತುತ್ತಾದ ದಿನದಿಂದ ಪರಿಗಣಿಸಲಾಗುತ್ತದೆ. ಅಂಗವಿಕಲರ ಬಡ್ತಿಗಾಗಿ ಪರಿಗಣಿಸಬೇಕಾದ ಮೀಸಲಾತಿ ನಿಯಮಗಳು, ಹೊಂದಾಣಿಕೆ, ವಿನಾಯ್ತಿಗಳು, ಮೀಸಲಿಡಬೇಕಾದ ಹುದ್ದೆಗಳ ಲೆಕ್ಕಾಚಾರ, ರೋಸ್ಟರ್​ಗಳ ನಿರ್ವಹಣೆ, ಸಲ್ಲಿಸಬೇಕಾದ ಪ್ರಮಾಣಪತ್ರಗಳು, ವಲಯ ನಿರ್ಧಾರ, ಸಮತಲ ಬಿಂದು, ವಾರ್ಷಿಕ ವರದಿ ಮೊದಲಾದವುಗಳ ಬಗ್ಗೆಯೂ ಸುತ್ತೋಲೆಯಲ್ಲಿ ವಿವರಿಸಲಾಗಿದೆ.
ಮಲಗಿಕೊಂಡೇ ಓದಿ 580 ಅಂಕ ಪಡೆದ ಶ್ರಾವ್ಯಾ!; ಕರುಳು ಕಾಯಿಲೆ ನಡುವೆಯೂ ಎಸ್ಸೆಸ್ಸೆಲ್ಸಿಯಲ್ಲಿ ಸಾಧನೆ..
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 1 =
Remember me
