ಮಹಾರಾಷ್ಟ್ರ:ರಿಜಿಸ್ಟ್ರಾರ್ ಕಚೇರಿಯಲ್ಲಿ ಮದುವೆಯಾಗಲು ಹೋದ ಅಂಗವಿಕಲ ಮಹಿಳೆಗೆ ಕಹಿ ಅನುಭವವಾಗಿದೆ. ಇದನ್ನು ಅವರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ನಂತರ, ನೆಟ್ಟಿಗರು ಆಕ್ರೋಶ ಹೊರ ಹಾಕಿದ್ದಾರೆ.
ಅಂಗವಿಕಲರ ಹಕ್ಕುಗಳ ಕಾರ್ಯಕರ್ತೆ ಹಾಗೂ ರೂಪದರ್ಶಿ ವಿರಾಲಿ ಮೋದಿ ಇತ್ತೀಚೆಗೆ ಮುಂಬೈನ ಖಾರ್ ನಲ್ಲಿರುವ ರಿಜಿಸ್ಟ್ರಾರ್ ಕಚೇರಿಯಲ್ಲಿ ವಿವಾಹವಾದರು. ರಿಜಿಸ್ಟ್ರಾರ್ ಕಚೇರಿಯಲ್ಲಿ ಲಿಫ್ಟ್ ಇಲ್ಲ ಎಂದು ಮದುವೆಯಾಗಲು ಬಂದ ಅಂಗವಿಕಲ ಮಹಿಳೆಯನ್ನು ಎರಡನೇ ಮಹಡಿಗೆ ಕರಿಸಿಕೊಂಡ ಘಟನೆ ವರದಿಯಾಗಿದೆ. ಅಲ್ಲಿನ ಕಹಿ ಅನುಭವವನ್ನು ಅವರು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. ಅಂಗಲವಿಕಲ ಮಹಿಳೆಯನ್ನು ಕಚೇರಿಗೆ ಕರೆಸಿಕೊಳ್ಳಲಾಗಿದ್ದು ಅಧಿಕಾರಿಗಳು ಕೆಳಗಿಳಿದು ಬಂದಿಲ್ಲ ಎನ್ನುವ ಆರೋಪ ಕೇಳಿ ಬಂದಿದೆ.
PLEASE RT!
I am disabled and I got married at the Registrars Office at Khar Mumbai on 16/10/23. The office was on the 2nd floor WITHOUT a lift. They wouldn’t come downstairs for the signatures and I had to be carried up two flights of stairs to get married.pic.twitter.com/ZNCQF3gJRY
— Virali Modi (@Virali01)October 18, 2023

ಟ್ವೀಟ್​​ನಲ್ಲಿ ಏನಿದೆ?: ‘ದಯವಿಟ್ಟು ನನಗೆ ಹೇಳಿ. ನಾನು ಅಂಗವಿಕಲ. ನಾನು 2023 ಅಕ್ಟೋಬರ್​ 16 ರಂದು ಖಾರ್ ಮುಂಬೈನಲ್ಲಿರುವ ರಿಜಿಸ್ಟ್ರಾರ್ ಕಚೇರಿಯಲ್ಲಿ ವಿವಾಹವಾದೆ. ಲಿಫ್ಟ್ ಇಲ್ಲ. ಕಚೇರಿ 2 ನೇ ಮಹಡಿಯಲ್ಲಿದೆ. ಅವರು ಸಹಿಗಾಗಿ ಕೆಳಗೆ ಬರುವುದಿಲ್ಲ ಎಂದರು. ನಾನು ಮದುವೆಯಾಗಲು ಎರಡನೇ ಮಹಡಿಯ ಮೆಟ್ಟಿಲು ಹತ್ತಬೇಕಾಗಿತ್ತು. ನೇಮಕಾತಿಗೆ ಮುಂಚಿತವಾಗಿ ನನ್ನ ಅಂಗವೈಕಲ್ಯವನ್ನು ನಾನು ನನ್ನ ಏಜೆಂಟರಿಗೆ ತಿಳಿಸಿದ್ದರೂ ಸಹ ಯಾರೂ ಸಹಾಯ ಮಾಡಲು ಮುಂದಾಗಲಿಲ್ಲ. ಆಕ್ಸೆಸಿಬಲ್ ಇಂಡಿಯಾ ಅಭಿಯಾನ ಏನಾಯಿತು ಎಂದು ವಿರಾಲಿ ಮಹಾರಾಷ್ಟ್ರ ಸರ್ಕಾರ ಮತ್ತು ಕೇಂದ್ರವನ್ನು ಪ್ರಶ್ನೆ ಮಾಡಿದ್ದಾರೆ. “ಇದು ಹೇಗೆ ನ್ಯಾಯಯುತವಾಗಿದೆ? ನಾನು ಗಾಲಿಕುರ್ಚಿ ಬಳಕೆದಾರರಾಗಿರುವುದರಿಂದ ನನಗೆ ಮದುವೆಯಾಗುವ ಹಕ್ಕಿಲ್ಲವೇ? ಎಂದು ವಿರಾಲಿ ಮೋದಿ ತಮ್ಮ ಮದುವೆ ಪ್ರಮಾಣಪತ್ರದ ಫೋಟೋಗಳನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ.
First of all many congratulations on the new beginnings and wishing you both a very happy and a beautiful married life !
Also I really am sorry for the inconvenience caused to you.I have personally taken cognisance and will take corrective and appropriate action.@Virali01
— Devendra Fadnavis (@Dev_Fadnavis)October 18, 2023

ಪ್ರತಿಕ್ರಿಯಿಸಿದ ಸಚಿವರು:ವಿರಾಲಿ ಟ್ವೀಟ್ ವೈರಲ್ ಆದ ನಂತರ ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಪ್ರತಿಕ್ರಿಯಿಸಿದ್ದಾರೆ. ಮೊದಲಿಗೆ ಹೊಸ ಆರಂಭಕ್ಕೆ ಅಭಿನಂದನೆಗಳು ಮತ್ತು ನಿಮ್ಮಿಬ್ಬರ ವೈವಾಹಿಕ ಜೀವನ ಸುಖಮಯ ಮತ್ತು ಸುಂದರವಾಗಿರಲಿ ಎಂದು ಹಾರೈಸುತ್ತೇನೆ. ನಿಮಗೆ ಉಂಟಾದ ಅನಾನುಕೂಲತೆಗಾಗಿ ನಾನು ನಿಜವಾಗಿಯೂ ವಿಷಾದಿಸುತ್ತೇನೆ.ನಾನು ವೈಯಕ್ತಿಕವಾಗಿ ಗಮನಹರಿಸಿದ್ದೇನೆ ಮತ್ತು ಸರಿಪಡಿಸುವ ಮತ್ತು ಸೂಕ್ತ ಕ್ರಮ ತೆಗೆದುಕೊಳ್ಳುತ್ತೇನೆ ಎಂದು ಟ್ವೀಟ್​​ ಮಾಡಿದ್ದಾರೆ.
ನೆಟಿಜನ್‌ಗಳು ಸಹ ಅಂಗವಿಕಲರಿಗಾಗಿ ಸೌಲಭ್ಯಗಳು ಮತ್ತು ಸೇವೆಗಳನ್ನು ಹೈಲೈಟ್ ಮಾಡಿ ಕಾಮೆಂಟ್ ಮಾಡಿದ್ದಾರೆ.
ಐಷಾರಾಮಿ ಕಾರು ಖರೀದಿಸಿದ ನಟಿ ಕರೀನಾ ಕಪೂರ್; ಕಾರಿನ ಬೆಲೆ ಎಷ್ಟು ಕೋಟಿ ಗೊತ್ತಾ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 + 17 =
Remember me
