ಬೆಂಗಳೂರು:ರಾಜ್ಯದ ಶೇಕಡಾ 80ರಷ್ಟು ಜನರು ತಾವು ಖರೀದಿಸಿದ ಔಷಧಿಗಳನ್ನು ಅನಿವಾರ್ಯ ಕಾರಣಗಳಿಂದ ಬೀಸಾಡುತ್ತಿದ್ದಾರೆ ಎಂದು ಸಮೀಕ್ಷೆಯ ಮೂಲಕ ಬಯಲಿಗೆ ಬಂದಿದೆ.
ಲೋಕಲ್ ಸರ್ಕಲ್ಸ್ ಎಂಬ ಸಾಮಾಜಿಕ ಜಾಲತಾಣವು ರಾಷ್ಟ್ರೀಯ ಮಟ್ಟದಲ್ಲಿ ಈ ಸಮೀಕ್ಷೆಯನ್ನು ನಡೆಸಿದ್ದು, ಕರ್ನಾಟಕದ ಸುಮಾರು 2000ಕ್ಕೂ ಹೆಚ್ಚು ಜನರು ಪಾಲ್ಗೊಂಡಿದ್ದರು. ಈ ವೇಳೆ ತಮ್ಮ ಅಭಿಪ್ರಾಯಗಳನ್ನು ತಿಳಿಸಿದ ಜನರು ಔಷಧಿ ಬೀಸಾಡುತ್ತಿರುವುದಕ್ಕೆ ಹಲವಾರು ಕಾರಣಗಳನ್ನು ನೀಡಿದ್ದಾರೆ.
ಔಷಧಿ ಅಂಗಡಿಯವರು ಅಗತ್ಯಕ್ಕಿಂತ ಹೆಚ್ಚಾಗಿ ಔಷಧಿಗಳನ್ನು ಮಾರಾಟ ಮಾಡುವುದು. ಗುಳಿಗೆಯ ಪ್ಯಾಕೆಟ್​ನ್ನು ಕತ್ತರಿಸಿದ ನಂತರ ಔಷಧಿಯ ಉತ್ಪಾದನೆ ಮತ್ತು ಮುಕ್ತಾಯ ದಿನಾಂಕದ ವಿವರಗಳಂತಹ ಮಾಹಿತಿ ಸಿಗದೇ ಅಂಗಡಿಯರಿಗೆ ಆಗುತ್ತಿರುವ ನಷ್ಟ, ಈ ನಷ್ಟವನ್ನು ಸರಿದೂಗಿಸಲು ಅಂಗಡಿಯವರು ಸಂಪೂರ್ಣ ಪ್ಯಾಕೆಟ್​​ನ್ನು ಖರೀದಿಸಲು ಜನತೆಯನ್ನು ಒತ್ತಾಯಿಸುವುದು ಹೀಗೆ ನಾನಾ ಅನಿವಾರ್ಯ ಕಾರಣಗಳ ಬಗ್ಗೆ ತಿಳಿದು ಬಂದಿದೆ.
ಇದನ್ನೂ ಓದಿ:ತೆರಿಗೆ ಸಂಗ್ರಹಣಾ ಇಲಾಖೆಗಳ ಜೊತೆ ಸಿಎಂ ಮಹತ್ವದ ಸಭೆ; ಆಗಲಿದೆಯೇ ತೆರಿಗೆ ಏರಿಕೆ?
ಅಲ್ಲದೇ, ಅಗತ್ಯಕ್ಕಿಂತ ಹೆಚ್ಚು ಖರೀದಿಸಿದ ಔಷಧಿಗಳು ಮನೆಯಲ್ಲಿ ಉಳಿದು ಹಾಗೇ ಉಳಿಯುತ್ತಿದ್ದು, ಇವುಗಳನ್ನು ಅಂಗಡಿಯವರು ಗ್ರಾಹಕರಿಂದ ಒಂದು ತಿಂಗಳೊಳಗೆ ಮರುಖರೀದಿಗೆ ಅವಕಾಶ ನೀಡುವುದರ ಜತೆಗೆ ಕಂಪನಿಗಳೇ ಇದಕ್ಕೊಂದು ಕಟ್ಟುನಿಟ್ಟಿನ ಕ್ರಮವನ್ನು ಜಾರಿಗೊಳಿಸಬೇಕು. ಇಲ್ಲವೇ, ಜಿಲ್ಲಾಮಟ್ಟದಲ್ಲಿ ಹೀಗೆ ಬಳಸದಿರುವ ಔಷಧಿಗಳನ್ನು ದಾನ ಮಾಡಲು ಆಸ್ಪತ್ರೆಯ ಅಗತ್ಯವಿದೆ ಎಂದು ಜನರು ಹೇಳಿದ್ದಾರೆ.
ವೈದ್ಯರು ಅಗತ್ಯಕ್ಕಿಂತ ಹೆಚ್ಚಿಗೆ ಔಷಧಿಯನ್ನು ಬರೆದು ಕೊಡುವುದು, ನಿಗದಿತ ಕಾಲದಲ್ಲಿ ಔಷಧಿ ಬಳಸದಿರುವುದು, ಮನೆಯಲ್ಲಿ ಯಾವುದೋ ಒಂದು ಮೂಲೆಯಲ್ಲಿಟ್ಟು ಮರೆತು ಬಿಡುವುದು, ತಮ್ಮಷ್ಟಕ್ಕೆ ತಾವೇ ಆರೋಗ್ಯ ಸರಿಯಾಗಿದೆ ಎನಿಸಿ ಔಷಧಿಗಳ ಸೇವನೆ ನಿಲ್ಲಿಸುವುದು ಹೀಗೆ ಹತ್ತಾರು ಕಾರಣಗಳಿಂದ ಈ ಔಷಧಿಗಳು ಮನೆಯಲ್ಲಿ ಹಾಗೆಯೇ ಉಳಿದಿವೆ. ಕೊನೆಗೆ ಇವುಗಳನ್ನು ಏನು ಮಾಡಬೇಕೆಂದು ತಿಳಿಯದೇ ಇದ್ದಾಗ ಜನತೆ ನೇರವಾಗಿ ಎಲ್ಲೆಂದರಲ್ಲಿ ಬೀಸಾಡುತ್ತಿದ್ದಾರೆ.
ಆದರೆ ಜನರ ಈ ನಿರ್ಲಕ್ಷ್ಯದಿಂದಾಗಿ ಔಷಧಿಗಳಲ್ಲಿನ ರಸಾಯನಿಕಗಳು ನಮ್ಮ ನೆಲವನ್ನು ಹಾಳು ಮಾಡುತ್ತಿದ್ದು, ಕೃಷಿಯ ಮೇಲೆ ಪ್ರಭಾವ ಬೀರುತ್ತಿದೆ. ಅಲ್ಲದೇ, ಜಲಮೂಲ ಮತ್ತು ಮಣ್ಣಿನಲ್ಲಿ ಔಷಧಿ ಸಂಯುಕ್ತಗಳ ಉಪಸ್ಥಿತಿಯಿಂದಾಗಿ ನಮ್ಮ ಸುತ್ತಲಿನ ಪರಿಸರದ ಅಪಾಯಕ್ಕೆ ಕಾರಣವಾಗುತ್ತಿದೆ. ಜನತೆ ಈ ಬಗ್ಗೆ ಗಮನಹರಿಸುವುದು ಉತ್ತಮವೆಂದು ಸಮೀಕ್ಷೆಯು ಬಹಿರಂಗಪಡಿಸಿದೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × one =
Remember me
