| ಪಂಕಜ ಕೆ.ಎಂ. ಬೆಂಗಳೂರುಹಲವು ವೈದ್ಯಕಿಯ ಪದ್ಧತಿಗಳಲ್ಲಿ ಒಂದಾಗಿರುವ ಪ್ರಕೃತಿ ಚಿಕಿತ್ಸೆ (ನ್ಯಾಚುರೋಪಥಿ) ಪದ್ಧತಿ ಇತ್ತೀಚಿಗೆ ಹೆಚ್ಚು ಪ್ರಚಾರ ಪಡೆದುಕೊಂಡಿದೆ. ಇಂದು ಜಾಗತಿಕ ವೈಾನಿಕ ಮತ್ತು ವೈದ್ಯಕಿಯ ಸಮುದಾಯವು ಪ್ರಕೃತಿ ಚಿಕಿತ್ಸೆಯನ್ನು ಅಂಗೀಕರಿಸಿದೆ. ಸಾಂಪ್ರದಾಯಿಕ ಔಷಧ ಅಥವಾ ಶಸಚಿಕಿತ್ಸೆಗೆ ಬದಲಾಗಿ ಹೆಚ್ಚಿನ ಸಂಖ್ಯೆಯ ರೋಗಿಗಳು ಪ್ರಕೃತಿ ಚಿಕಿತ್ಸೆ ಕಡೆಗೆ ಮುಖ ಮಾಡುತ್ತಿದ್ದಾರೆ.
ಪ್ರಕೃತಿಯು ರೋಗವನ್ನು ಗುಣಪಡಿಸುತ್ತದೆ, ಔಷಧಿಗಳಲ್ಲ ಎಂಬುದು ಪ್ರಕೃತಿ ಚಿಕಿತ್ಸೆಯ ಮೂಲತತ್ವ. ಇದರಲ್ಲಿ ಯಾವುದೇ ರಾಸಾಯನಿಕಯುಕ್ತ ಔಷಧಿಗಳನ್ನು ಬಳಸುವುದಿಲ್ಲ. ಬದಲಾಗಿ ಈ ವಿಶಿಷ್ಟ ಚಿಕಿತ್ಸಾ ವಿಧಾನವು ದೇಹವನ್ನು ಒಳಗಿನಿಂದ ಬಲಪಡಿಸುವುದು, ರೋಗನಿರೋಧಕ ಶಕ್ತಿ ಹೆಚ್ಚಿಸುವುದು, ಜೀವನಶೈಲಿಯ ಬದಲಾವಣೆ ಮಾಡಿಕೊಳ್ಳುವ ಮೂಲಕ ದೇಹವನ್ನು ರೋಗಗಳಿಂದ ದೂರ ಇಡಲು ಸಾಧ್ಯವಾಗುವ ಉತ್ತಮ, ಸುರತ ಹಾಗೂ ನೈಸರ್ಗಿಕ ಚಿಕಿತ್ಸಾ ವಿಧಾನವಾಗಿದೆ.
ಈ ಚಿಕಿತ್ಸೆಯು ಸಹಜವಾಗಿ ಆಗುವ ಹಾಗೂ ಮನುಷ್ಯರ ಅತ್ಯಲ್ಪ ಹಸ್ತಕ್ಷೇಪ ಅನುಸರಿಸುತ್ತದೆ. ನೈಸರ್ಗಿಕವಾಗಿ ಗುಣ ಹೊಂದುವ ಶಕ್ತಿಯ ಮೇಲೆ ನಂಬಿಕೆ ಹೊಂದಿದ್ದು, ಕೃತಕ ಔಷಧಗಳು, ವಿಕಿರಣ ಚಿಕಿತ್ಸೆ, ಶಸ್ತ್ರಚಿಕಿತ್ಸೆಗಳನ್ನು ಒಪ್ಪದೆ, ಜೈವಿಕ ಔಷಧ ಮತ್ತು ಆಧುನಿಕ ವೈಜ್ಞಾನಿಕ ಕ್ರಮಗಳನ್ನು ತಿರಸ್ಕರಿಸುತ್ತದೆ. ಒತ್ತಡ ಕಡಿಮೆ ಮಾಡಿಕೊಳ್ಳುವುದು, ಆರೋಗ್ಯಕರ ಆಹಾರ ಸೇವನೆ ಮತ್ತು ಕ್ರಮಬದ್ಧವಾದ ಜೀವನ ಪದ್ಧತಿಯಿಂದ ರೋಗಗಳ ನಿಯಂತ್ರಣಕ್ಕೆ ಹೆಚ್ಚು ಒತ್ತು ನೀಡುತ್ತದೆ.
ಚಿಕಿತ್ಸೆಯ ವಿಧಗಳು…ಪ್ರಕೃತಿ ಚಿಕಿತ್ಸೆಯಲ್ಲಿ ವಿವಿಧ ಸಮಸ್ಯೆಗಳಿಗೆ ತಕ್ಕಂತೆ ಮಣ್ಣಿನ ಚಿಕಿತ್ಸೆ, ವಾಯು ಚಿಕಿತ್ಸೆ, ಜಲ ಚಿಕಿತ್ಸೆ, ಮ್ಯಾಗ್ನೆಟ್​ ಥೆರಪಿ, ವರ್ಣ ಚಿಕಿತ್ಸೆ, ಅಕ್ಯುಪಂಕ್ಚರ್​, ಆಕ್ಯುಪ್ರೆಶರ್​, ಎಲೆಕ್ಟ್ರೊಥೆರಪಿ, ಫಿಜಿಯೋಥೆರಪಿ, ಸೇರಿ ಹಲವು ಬಗೆಯ ಚಿಕಿತ್ಸೆಗಳಿವೆ. ಯೋಗ, ಉಪವಾಸ ಮತ್ತು ಪಥ್ಯವೂ ಸೇರಿದೆ. ಉಪವಾಸ ಪ್ರಕೃತಿ ಚಿಕಿತ್ಸೆಯ ಅವಿಭಾಜ್ಯ ಅಂಗ. ಇದರಲ್ಲಿ ಹಲವು ವಿಧಗಳಿವೆ. ದಿನಪೂರ್ತಿ ಯಾವುದೇ ಆಹಾರ ಸೇವಿಸದೆ ನೀರು ಕುಡಿದು ಉಪವಾಸ ಮಾಡುವುದು. ಇದರ ಹೊರತಾಗಿ ಉಪವಾಸ ಅಂತ್ಯಗೊಳಿಸುವಾಗ ಹಣ್ಣಿನ ರಸ, ಎಳನೀರು ಸೇವಿಸುವುದು ಒಂದಾದರೆ, ಮತ್ತೊಂದು ವಿಧಾನದಲ್ಲಿ ಕೇವಲ ಹಣ್ಣುಗಳು, ಹಸಿ ತರಕಾರಿ, ಮೊಳಕೆ ಕಾಳುಗಳ ಸೇವನೆ ಮಾಡಿಯೂ ಉಪವಾಸ ಅಂತ್ಯಗೊಳಿಸಬಹುದು. ಈ ಅವಧಿಯಲ್ಲಿ ಬೇಯಿಸಿದ ಆಹಾರ ಸೇವಿಸುವಂತಿಲ್ಲ. ಇನ್ನು ಪ್ರಕೃತಿ ಚಿಕಿತ್ಸೆಯಲ್ಲಿ ಮೊಟ್ಟೆ ಹಾಗೂ ಮಾಂಸಾಹಾರ ನಿಷಿದ್ಧ.
ಸಿದ್ಧಾಂತಗಳುಪ್ರಕೃತಿ ಚಿಕಿತ್ಸೆಯು ಆರು ಪ್ರಮುಖ ಸಿದ್ಧಾಂತಗಳನ್ನು ಹೊಂದಿದೆ. ಅವೆಂದರೆ. ಯಾವುದೇ ಹಾನಿ ಉಂಟು ಮಾಡದೆ, ಕಡಿಮೆ ಅಪಾಯ ಹಾಗೂ ಅತ್ಯಂತ ಪರಿಣಾಮಕಾರಿ ಚಿಕಿತ್ಸಾ ಕ್ರಮ ಅಳವಡಿಕೆ. ಪ್ರತಿ ಮನುಷ್ಯನಲ್ಲಿ ಸ್ವಾಭಾವಿಕವಾಗಿ ಇರುವ ಸ್ವಯಂ ವಾಸಿ ಮಾಡಿಕೊಳ್ಳುವ ರೋಗ ನಿರೋಧಕ ಶಕ್ತಿ ಗುರುತಿಸಿ ಅದನ್ನು ಹೆಚ್ಚು ಮಾಡುವುದು. ರೋಗ ಲಕ್ಷಣಗಳನ್ನು ಮಾತ್ರ ಗುಣಪಡಿಸದೆ, ಅದರ ಹಿಂದಿರುವ ಕಾರಣಗಳನ್ನು ಪತ್ತೆ ಮಾಡಿ ಸಂಪೂರ್ಣ ನಿವಾರಿಸುವ ಪ್ರಯತ್ನ ಮಾಡುವುದು. ರೋಗಿಗಳಿಗೆ ಜ್ಞಾನ, ತಾರ್ಕಿಕ ಭರವಸೆ, ಸ್ಫೂರ್ತಿ ನೀಡಿ ಆರೋಗ್ಯದ ಬಗ್ಗೆ ಕಾಳಜಿ ಮೂಡಿಸುವುದು. ಪ್ರತಿ ವ್ಯಕ್ತಿಯ ಆರೋಗ್ಯ ಲಕ್ಷಣಗಳು ಹಾಗೂ ಪ್ರಭಾವಗಳನ್ನು ಗಮನದಲ್ಲಿಟ್ಟುಕೊಂಡು ಚಿಕಿತ್ಸೆಗೆ ಒಳಪಡಿಸುವುದು ಹಾಗೂ ಪ್ರತಿಯೊಬ್ಬರ ಸೌಖ್ಯ ಮತ್ತು ಆರೋಗ್ಯಕ್ಕೆ ಆದ್ಯತೆ ನೀಡುವ ಮೂಲಕ ಸಮುದಾಯದ ಹಂತದಲ್ಲಿ ರೋಗಗಳ ತಡೆಗಟ್ಟುವುದು.
ಪ್ರಕೃತಿ ಚಿಕಿತ್ಸೆಯ ಪ್ರಮುಖ ಅಂಶಗಳು* ಹಿತಮಿತ ಹಾಗೂ ತಾಜಾ ಆಹಾರ ಸೇವನೆ* ನಿತ್ಯ 2&3 ಲೀಟರ್​ ನೀರು ಕುಡಿಯುವುದು* ಆಯಾ ಋತುಮಾನಕ್ಕೆ ಅನುಗುಣವಾಗಿ ಸಿಗುವ ಹಣ್ಣುಗಳ ಸೇವನೆ* ಊಟದಲ್ಲಿ ಹೆಚ್ಚು ಸೊಪು$್ಪ ಮತ್ತು ಹಸಿರು ತರಕಾರಿ ಬಳಕೆ* ಧೂಮಪಾನ, ಮದ್ಯಪಾನ ಸೇರಿ ದುಶ್ಚಟಗಳಿಂದ ದೂರ ಇರುವುದು* ನಿತ್ಯ ಯೋಗ ಅಥವಾ ವ್ಯಾಯಾಮ ಮಾಡುವುದನ್ನು ರೂಢಿಸಿಕೊಳ್ಳುವುದು* ಮನಸ್ಸು ಮತ್ತು ದೇಹಾರೋಗ್ಯಕ್ಕೆ ನಿತ್ಯ ಧ್ಯಾನ ಮಾಡುವುದು* ಆಗಾಗ್ಗೆ ಉಪವಾಸ ಮಾಡುವುದು* ವೈಯಕ್ತಿಕ ಸ್ವಚ್ಛತೆಗೆ ಆದ್ಯತೆ ನೀಡುವುದು
ಇಂದಿನ ಒತ್ತಡದ ಜೀವನ, ಸೇವಿಸುವ ಆಹಾರ ಮತ್ತು ನೀರು ಎಲ್ಲವೂ ಕಲುಷಿತಗೊಂಡಿದ್ದು, ನಾನಾ ರೋಗಗಳು ಬಾಧಿಸುತ್ತಿವೆ. ಇವುಗಳಿಂದ ಮುಕ್ತರಾಗಲು ಯಾವುದೇ ಔಷಧವಿಲ್ಲದೆ ಜೀವನಶೈಲಿಯಿಂದಲೇ ಆರೋಗ್ಯ ಹೊಂದಬಹುದಾದ ಪ್ರಕೃತಿ ಚಿಕಿತ್ಸೆ ಇಂದಿನ ಆದ್ಯತೆಯ ಚಿಕಿತ್ಸೆಯಾಗಿದೆ.
| ಡಾ. ಸಿ. ಹರೀಶ್​ ಬಾಬು ಹಿರಿಯ ವೈದ್ಯಾಧಿಕಾರಿ ಪ್ರಕೃತಿ ಚಿಕಿತ್ಸೆ ಮತ್ತು ಯೋಗ, ಆಯುಷ್​ ಇಲಾಖೆ
ಕ್ರಮಬದ್ಧವಾದ ಜೀವನಶೈಲಿಕ್ರಮಬದ್ಧವಾದ ಜೀವನಶೈಲಿಯೇ ಪ್ರಕೃತಿ ಚಿಕಿತ್ಸೆಯ ಮೊದಲ ಕ್ರಮ. ಆರೋಗ್ಯಕರ ಆಹಾರ, ಶುದ್ಧ ನೀರು, ವ್ಯಾಯಾಮ, ಉಪವಾಸ, ಸೂರ್ಯನ ಬೆಳಕು ಮತ್ತು ಒತ್ತಡ ನಿರ್ವಹಣೆ ಪ್ರಕೃತಿ ಚಿಕಿತ್ಸೆಯ ಆಧಾರವಾಗಿವೆ. ಮಾನಸಿಕ, ದೈಹಿಕ, ಸಾಮಾಜಿಕ ಮತ್ತು ಆಧ್ಯಾತ್ಮಿಕ ಮುಂತಾದ ಮಾನವ ದೇಹದ ಎಲ್ಲಾ ಅಂಶಗಳನ್ನು ಯಶಸ್ವಿಯಾಗಿ ಪರಿಗಣಿಸುತ್ತದೆ. ಇದರಲ್ಲಿ ಆಹಾರವೇ ಔಷಧ. ಜೊತೆಗೆ ವೈಯಕ್ತಿಕ ಸ್ವಚ್ಛತೆ ಬಹಳ ಮುಖ್ಯ. ದಿನಕ್ಕೆ ಎರಡು ಬಾರಿ ಹಲ್ಲುಜ್ಜುವುದು, ಮಲ ವಿಸರ್ಜನೆ, ಸ್ನಾನದ ಅಭ್ಯಾಸ ರೂಢಿಸಿಕೊಳ್ಳಬೇಕು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 − one =
Remember me
