ನವದೆಹಲಿ: ಪಾಕಿಸ್ತಾನ ಆಕ್ರಮಿತ ಪ್ರದೇಶದಲ್ಲಿರುವ ಗಿಲ್ಗಿಟ್-ಬಾಲ್ಟಿಸ್ತಾನದಲ್ಲಿ ಬಂಡೆಗಲ್ಲುಗಳ ಮೇಲಿರುವ ಪ್ರಾಚೀನ ಬೌದ್ಧ ಧರ್ಮದ ಕೆತ್ತನೆ, ಚಿತ್ರಕಲೆಗಳನ್ನು ವಿರೂಪಗೊಳಿಸಿರುವುದಕ್ಕೆ ಭಾರತ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
ಈ ಕೃತ್ಯವನ್ನು ಬಲವಾಗಿ ಖಂಡಿಸಿರುವ ಭಾರತ, ಪ್ರಾಚ್ಯವಸ್ತು ಪರಂಪರೆಯ ಮಹತ್ವವಿರುವ ಆ ಪ್ರದೇಶಕ್ಕೆ ಹೋಗಲು ಮತ್ತು ಅಲ್ಲಿನ ಕೆತ್ತನೆ-ಚಿತ್ರಕಲೆಗಳನ್ನು ಮೊದಲಿದ್ದ ಸ್ಥಿತಿಗೆ ತರಲು ತಜ್ಞರಿಗೆ ಅವಕಾಶ ನೀಡಬೇಕು ಎಂದು ಒತ್ತಾಯಿಸಿದೆ.
ಇದನ್ನೂ ಓದಿಚೀನಾ ವಿಮಾನಗಳಿಗೆ ಪ್ರವೇಶ ನಿಷೇಧಿಸಿದ ಅಮೆರಿಕ!
ಅಕ್ರಮವಾಗಿ ಆಕ್ರಮಿಸಿಕೊಂಡಿರುವ ಆ ಪ್ರದೇಶವನ್ನು ತೆರವುಗೊಳಿಸಬೇಕು. ಅಲ್ಲಿನ ಜನರಿಗೆ ರಾಜಕೀಯ, ಆರ್ಥಿಕ ಮತ್ತು ಸಾಂಸ್ಕೃತಿಕ ಹಕ್ಕುಗಳನ್ನು ಮರಳಿ ನೀಡಬೇಕು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಅಧಿಕೃತ ವಕ್ತಾರ ಅನುರಾಗ್ ಶ್ರೀವಾಸ್ತವ ಬುಧವಾರ ಪಾಕ್ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಬೌದ್ಧರ ಕೆತ್ತನೆಗಳನ್ನು ವಿರೂಪಗೊಳಿಸಿರುವುದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ಬಳಿಕ ಭಾರತ ಈ ಪ್ರತಿಕ್ರಿಯೆ ನೀಡಿದೆ. ಬೌದ್ಧ ಕಲೆಯ ಮೇಲೆ ಪಾಕಿಸ್ತಾನಿ ಧ್ವಜ, ಘೋಷಣೆ ಮುಂತಾದವುಗಳನ್ನು ಪೇಂಟ್ ಮಾಡಿರುವುದು ಕೆಲವು ದಿನಗಳ ಹಿಂದೆ ಬೆಳಕಿಗೆ ಬಂದಿತ್ತು. ಮೂಲಭೂತವಾದಿಗಳು ಅಥವಾ ಪಾಕ್ ಸೈನಿಕರು ಈ ಕೃತ್ಯ ಎಸಗಿರಬಹುದೆಂದು ಹೇಳಲಾಗಿದೆ. ಈ ಕೆತ್ತನೆಗಳು ಕ್ರಿ.ಶ. 800ಕ್ಕಿಂತ ಪ್ರಾಚೀನವಾದವುಗಳು ಎನ್ನಲಾಗಿದೆ.
ಮತ್ತೆ ಕಲಬುರಗಿ ನಂ.1: ರಾಜ್ಯದಲ್ಲಿ ಇಂದು 267 ಕೋವಿಡ್ 19 ಪ್ರಕರಣಗಳು ದೃಢ

ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:four × 2 =
Remember me
