ಸವಾಯಿ ಮಾಧೋಪುರ್:ಡಿಸೆಂಬರ್ 9 ರಂದು ಬಾಲಿವುಡ್​ ಬೆಡಗಿ ಕತ್ರೀನಾ ಕೈಫ್ ಮತ್ತು ನಟ ವಿಕಿ ಕೌಶಲ್​ರ ಅದ್ದೂರಿ​ ಮದುವೆ ನಡೆಯಲಿದೆ ಎಂಬ ಸುದ್ದಿ ಓಪನ್​ ಸೀಕ್ರೆಟ್​ನಂತೆ ಮಾಧ್ಯಮದಲ್ಲೆಲ್ಲಾ ಹರಡಿದೆ. ಆದರೂ, ಈವರೆಗೆ ಕತ್ರೀನಾ ಆಗಲಿ, ವಿಕಿ ಆಗಲಿ ಈ ಬಗ್ಗೆ ಒಂದು ಮಾತನ್ನೂ ಆಡಿಲ್ಲ. ಇದೀಗ ಅವರ ಮದುವೆ ರಾಜಸ್ಥಾನದ ಸವಾಯಿ ಮಾದೋಪುರದಲ್ಲಿ ನಡೆಯುತ್ತಿರುವುದನ್ನು ಜಿಲ್ಲಾಧಿಕಾರಿಯ ಒಂದು ಮೀಟಿಂಗ್​​ ನೋಟಿಸ್​​ ಕರ್ನರ್ಮ್​ ಮಾಡಿದೆ.
ಕಲಾವಿದರಾದ ವಿಕಿ ಮತ್ತು ಕತ್ರೀನಾ ಅವರ ಮದುವೆ ಸಮಾರಂಭದ ಆಯೋಜನೆಯ ಮುನ್ನ ವ್ಯವಸ್ಥೆಗಳ ಬಗ್ಗೆ ಚರ್ಚಿಸಲು ಸವಾಯಿ ಮಾಧೋಪುರ್​​ ಜಿಲ್ಲಾ ಕಲೆಕ್ಟರ್​​ರ ಅಧ್ಯಕ್ಷತೆಯಲ್ಲಿ ಡಿ.3 ರ ಬೆಳಿಗ್ಗೆ 10.15 ಕ್ಕೆ ಸಭೆ ಕರೆಯಲಾಗಿದೆ ಎಂದು ಗುರುವಾರ ಹೊರಡಿಸಲಾಗಿರುವ ಹಾಗೂ ವೈರಲ್​ ಆಗಿರುವ ಈ ಸುತ್ತೋಲೆಯಲ್ಲಿ ಹೇಳಲಾಗಿದೆ.

ವಿವಾಹ ಸಮಾರಂಭದ ಹಿನ್ನೆಲೆಯಲ್ಲಿ ಜನಸಂದಣಿ ನಿರ್ವಹಿಸಲು, ಕಾನೂನು ವ್ಯವಸ್ಥೆ ಮತ್ತು ಸಂಭಾವಿತ ಪರಿಸ್ಥಿತಿಗಳ ಬಗ್ಗೆ ವಿಚಾರ ಮಾಡಲು ಮತ್ತು ಅಗತ್ಯ ವ್ಯವಸ್ಥೆಗಳನ್ನು ಸುನಿಶ್ಚಿತಗೊಳಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ನಿರ್ಧರಿಸಲು ಈ ಸಭೆ ನಡೆದಿದೆ. ಪೊಲೀಸ್​ ಅಧೀಕ್ಷಕರು, ಮದುವೆ ನಡೆಯಲಿರುವ ಸಿಕ್ಸ್​ ಸೆನ್ಸಸ್​ ಹೊಟೆಲ್​ನ ಪ್ರತಿನಿಧಿಗಳು ಮತ್ತು ರಣಥಂಬೋರ್​ ಹುಲಿ ಸಂರಕ್ಷಿತ ಉಪವನದ ಅರಣ್ಯ ಸಂರಕ್ಷಣಾಧಿಕಾರಿ ಮುಂತಾದವರನ್ನು ಒಳಗೊಂಡು ಸಭೆ ನಡೆದಿದೆ ಎನ್ನಲಾಗಿದೆ.
ಈ ನಡುವೆ ಇಂದು ಮುಂಬೈನಲ್ಲಿ, ಬೇರೆ ಬೇರೆ ಧರ್ಮಗಳಿಗೆ ಸೇರಿರುವ ವಿಕಿ ಮತ್ತು ಕತ್ರೀನಾ, ಸ್ಪೆಷಲ್​​ ಮ್ಯಾರೇಜಸ್​ ಆ್ಯಕ್ಟ್​ ಅಡಿಯಲ್ಲಿ ಮ್ಯಾರೇಜ್​ ರಿಜಿಸ್ಟ್ರಾರ್​ ಕಚೇರಿಗೆ ತೆರಳಿ, ರಿಜಿಸ್ಟರ್ಡ್​ ಮದುವೆ ಮಾಡಿಕೊಳ್ಳಲಿದ್ದಾರೆ ಎಂದೂ ವರದಿಗಳು ತಿಳಿಸಿವೆ.(ಏಜೆನ್ಸೀಸ್)
ಕೋಡ್​​ ಹೇಳಿದ್ರೆ ಮಾತ್ರ ಎಂಟ್ರಿ! ಷರತ್ತುಗಳ ಸರಮಾಲೆ ನಡುವೆ ವಿಕ್ಕಿ-ಕತ್ರಿನಾ ಮದುವೆ

VIDEO| ಚಲಿಸುವ ರೈಲಿನಿಂದ ಜಿಗಿದು ಸಾವಿನ ಕದ ತಟ್ಟಿಬಂದ ಮಹಿಳೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − one =
Remember me
