ಬೆಂಗಳೂರು:ಮದುವೆಗೂ ಮುಂಚಿನ ಫೋಟೋಶೂಟ್​​ಗಳು ಬಹಳಷ್ಟು ಬಂದಿವೆ. ಚಿತ್ರ-ವಿಚಿತ್ರ ರೀತಿಯಲ್ಲಿ ಫೋಟೋಶೂಟ್ ಮಾಡಿಸಿಕೊಂಡಿದ್ದಕ್ಕಾಗಿಯೇ ಅಂಥ ಫೋಟೋಗಳು ವೈರಲ್ ಆಗಿವೆ. ಆದರೆ ಇಲ್ಲೊಂದು ಫೋಟೋಶೂಟ್​ ಅದರ ಮೂಲ ಉದ್ದೇಶದ ಕಾರಣಕ್ಕಾಗಿಯೇ ವೈರಲ್ ಆಗಿದೆ. ಅರ್ಥಾತ್, ಡೈವೋರ್ಸ್ ಆಗಿದ್ದನ್ನೂ ಸಂಭ್ರಮಿಸುವ ಕಾರಣಕ್ಕಾಗಿ ಮಾಡಿದ ಈ ಫೋಟೋಶೂಟ್​ ಈಗ ಹಲವರ ಗಮನ ಸೆಳೆದಿದೆ.
ಇದನ್ನೂ ಓದಿ:ಮದುವೆ ಆಮಂತ್ರಣ ಪತ್ರಿಕೆ ನೀಡಲು ಹೋಗಿದ್ದ ಸಹೋದರಿಯರಿಬ್ಬರ ಸಾವು!
ಮಹಿಳೆಯೊಬ್ಬರು ‘ಡೈವೋರ್ಸ್ಡ್’ ಎಂಬ ಫಲಕ ಹಿಡಿದ, ಪತಿಯೊಂದಿಗೆ ಇದ್ದ ಫೋಟೋದಲ್ಲಿನ ಪತಿಯ ಮುಖದ ಭಾಗವನ್ನು ಹರಿದು ಪ್ರತ್ಯೇಕಿಸಿದ, ಪತಿ-ಪತ್ನಿ ಇಬ್ಬರೂ ಜೊತೆಗಿದ್ದ ಫೋಟೋವನ್ನು ಚಪ್ಪಲಿ ಕಾಲಿನಲ್ಲಿ ತುಳಿದು ಹೊಸಕಿ ಹಾಕಿದಂಥ ಫೋಟೋಗಳು ಈ ಫೋಟೋಶೂಟ್​ನ ಪ್ರಮುಖ ಆಕರ್ಷಣೆ ಎನಿಸಿಕೊಂಡಿವೆ. ಅಲ್ಲದೆ, ‘ನನಗೆ 99 ಸಮಸ್ಯೆಗಳಿವೆ, ಆದರೆ ಪತಿ ಇಲ್ಲ!’ ಎಂಬ ಫಲಕವನ್ನು ಹಿಡಿದು ಸಂತಸದಿಂದ ಬೀಗುವಂಥ ಫೋಟೋ ಮೂಲಕ ‘ಪತಿ ಎಂಬ ಒಂದು ಸಮಸ್ಯೆಯನ್ನು ನಿವಾರಿಸಿಕೊಂಡಿದ್ದೇನೆ’ ಎಂಬ ಸಂದೇಶವನ್ನೂ ಈಕೆ ಸಾರಿದ್ದಾರೆ.
ಇದನ್ನೂ ಓದಿ:ಭಾರಿ ಮಳೆ: ಹಳ್ಳ ದಾಟುತ್ತಿದ್ದ ತಾಯಿ ಜತೆ ಇಬ್ಬರು ಮಕ್ಕಳೂ ನೀರುಪಾಲು
ಅಂದಹಾಗೆ ಫ್ಯಾಷನ್ ಡಿಸೈನರ್ ಹಾಗೂ ನಟಿಯೂ ಆಗಿರುವ ಶಾಲಿನಿ ಎಂಬಾಕೆ ವಿಚ್ಛೇದನ ಪಡೆದಿದ್ದಕ್ಕೆ ಈ ರೀತಿಯ ವಿಶೇಷವಾದ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ತನ್ನ ಇನ್​ಸ್ಟಾಗ್ರಾಮ್​ನಲ್ಲಿ ಫೋಟೋಗಳನ್ನು ಹಂಚಿಕೊಂಡಿರುವ ಈಕೆ ಅದರಲ್ಲಿ ವಿಚ್ಛೇದಿತ ಮಹಿಳೆಯ ಸಂದೇಶವನ್ನೂ ತಿಳಿಸಿದ್ದು, ಅದು ಹೀಗಿದೆ.
ಕೆಟ್ಟ ವಿವಾಹವನ್ನು ಬಿಡುವುದು ಸರಿ. ಏಕೆಂದರೆ ನೀವು ಸಂತೋಷವಾಗಿರಲು ಅರ್ಹರು ಮತ್ತು ಎಂದಿಗೂ ಸಣ್ಣತನದಲ್ಲಿ ನೆಲೆಸುವುದಿಲ್ಲ. ನಿಮ್ಮ ಜೀವನದ ಮೇಲೆ ನಿಯಂತ್ರಣ ಸಾಧಿಸಿ ಮತ್ತು ನಿಮಗಾಗಿ ಹಾಗೂ ನಿಮ್ಮ ಮಕ್ಕಳಿಗೆ ಉತ್ತಮ ಭವಿಷ್ಯವನ್ನು ರಚಿಸಲು ಅಗತ್ಯವಾದ ಬದಲಾವಣೆಗಳನ್ನು ಮಾಡಿ.
ವಿಚ್ಛೇದನವು ವೈಫಲ್ಯವಲ್ಲ!!! ಇದು ನಿಮಗೆ ಒಂದು ತಿರುವು ಮತ್ತು ನಿಮ್ಮ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳಿಗೆ ಕಾರಣವಾಗುತ್ತದೆ.
ಮದುವೆಯನ್ನು ತೊರೆದು ಏಕಾಂಗಿಯಾಗಿ ನಿಲ್ಲಲು ಸಾಕಷ್ಟು ಧೈರ್ಯ ಬೇಕು. ಆದ್ದರಿಂದ ನನ್ನ ಎಲ್ಲ ಧೈರ್ಯಶಾಲಿ ಮಹಿಳೆಯರಿಗೆ ನಾನು ಇದನ್ನು ಪ್ರೀತಿಯಿಂದ ಅರ್ಪಿಸುತ್ತೇನೆ..”
ಐರಿಸ್ ಫೋಟೋಗ್ರಫಿ ಎನ್ನುವ ಸಂಸ್ಥೆ ಈ ಫೋಟೋಶೂಟ್ ನಡೆಸಿದ್ದು, ವಿಚ್ಛೇದನವನ್ನೂ ಸಂಭ್ರಮಿಸುತ್ತಿರುವ ಈ ಮಹಿಳೆಯ ಫೋಟೋಗಳು ವೈರಲ್ ಆಗಲಾರಂಭಿಸಿವೆ.




ಗರ್ಭವತಿಯರ ಪತ್ತೆಗಾಗಿ ಶಾಲಾ ಮಕ್ಕಳಿಗೂ ಋತುಮತಿ ಕಾರ್ಡ್!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × one =
Remember me
