ಭುವನೇಶ್ವರ್​:ಮದುವೆ ಮಾಡಿಕೊಳ್ಳುವ ಬಯಕೆ ವ್ಯಕ್ತಪಡಿಸಿದ ವಿಕಲಾಂಗ ಪುತ್ರನನ್ನು ಮಲತಾಯಿ ಮತ್ತು ಹೆತ್ತ ತಂದೆ ಸೇರಿಕೊಂಡು ಬರ್ಬರವಾಗಿ ಹತ್ಯೆ ಮಾಡಿರುವ ಆಘಾತಕಾರಿ ಘಟನೆ ಒಡಿಶಾದಲ್ಲಿ ನಡೆದಿದೆ.
ಮೃತನನ್ನು ಒಡಿಶಾದ ನಯಾಗಢ ಜಿಲ್ಲೆಯ ದಾಸ್ಪಲ್ಲ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಬರುವ ಪಥರಾಪುಂಜ ಗ್ರಾಮದ ನಿವಾಸಿ ಬಿಜಯ್​ ಪ್ರಧಾನ್​ ಎಂದು ಗುರುತಿಸಲಾಗಿದೆ.
ಬಿಜಯ್​ಗೆ 35 ವರ್ಷ ವಯಸ್ಸಾಗಿತ್ತು. ಆದರೆ, ಅಂಗವೈಕಲ್ಯ ಕಾಡುತ್ತಿತ್ತು. ಇತ್ತೀಚೆಗೆ ಬಿಜೆಯ್​ ತನ್ನ ಕುಟುಂಬದ ಮುಂದೆ ಮದುವೆಯಾಗುವ ಬಯಕೆ ವ್ಯಕ್ತಪಡಿಸಿದ್ದ. ಕುಟುಂಬ ಎಲ್ಲ ಸದಸ್ಯರು ಒಪ್ಪಿದ್ದರು. ಮದುವೆ ಮಾಡಿ ಆತನ ಜೀವನವನ್ನು ಭದ್ರ ಪಡಿಸಲು ಮುಂದಾಗಿದ್ದರು. ಆದರೆ, ಮಲತಾಯಿಗೆ ಇದು ಇಷ್ಟವಿರಲಿಲ್ಲ. ಒಂದು ವೇಳೆ ಮದುವೆಯಾದರೆ ಎಲ್ಲ ಆಸ್ತಿ ಆತನ ಪಾಲಾಗಬಹುದು ಎಂದು ಮದುವೆ ಮುರಿಯಲು ಪ್ರಯತ್ನಿಸುತ್ತಿದ್ದಳು.
ಆದರೆ, ಬಿಜಯ್​ ಮದುವೆ ಆಗಿ ಹೊಸ ಜೀವನ ಆರಂಭಿಸುವ ಉತ್ಸುಕದಲ್ಲಿದ್ದನು. ಆದರೆ, ಆತನಿಗೆ ಚೆನ್ನಾಗಿ ಥಳಿಸಿ, ಅನೇಕ ತಿಂಗಳವರೆಗೆ ಆಹಾರವನ್ನು ನೀಡದೆ ಮಲತಾಯಿ ಹಿಂಸೆ ನೀಡಿದ್ದಳು. ಆದಾಗ್ಯೂ ಶನಿವಾರ ರಾತ್ರಿ ಮದುವೆ ವಿಚಾರವಾಗಿ ಮತ್ತೊಮ್ಮೆ ಜಗಳ ನಡೆಯಿತು. ಈ ವೇಳೆ ಬಿಜಯ್​ಗೆ ಮಲತಾಯಿ ಮನಬಂದಂತೆ ಥಳಿಸಿದ್ದಾಳೆ. ಪರಿಣಾಮ ಬಿಜಯ್​ ಮೃತಪಟ್ಟಿದ್ದಾನೆ. ಬಿಜಯ್​ ತಂದೆ ಮತ್ತು ಮಲತಾಯಿಯ ಇಬ್ಬರು ಸ್ವಂತ ಮಕ್ಕಳು ಆಕೆಗೆ ಸಹಾಯ ಮಾಡಿದ್ದಾರೆ ಎಂದು ಸಂಬಂಧಿಕರು ಆರೋಪ ಮಾಡಿದ್ದಾರೆ.
ಮಲಮಗನಾದ್ದರಿಂದ ಮದುವೆಯ ನಂತರ ಆಸ್ತಿಯನ್ನೆಲ್ಲ ತಮ್ಮದಾಗಿಸಿಕೊಳ್ಳುತ್ತಾರೆ ಎಂದು ಭಾವಿಸಿದ್ದರು. ಹೀಗಾಗಿ ಬಿಜಯ್​ ಮದುವೆಯಾಗುವುದು ಅವರಿಗೆ ಇಷ್ಟವಿರಲಿಲ್ಲ. ಹೀಗಾಗಿ ಆತನನ್ನು ಹೊಡೆದು ಕೊಲೆ ಮಾಡಿದ್ದಾರೆ ಎಂದು ಸಂಬಂಧಿಕರು ತಿಳಿಸಿದ್ದಾರೆ. ಆದರೆ, ಮಲತಾಯಿ ಆರೋಪವನ್ನು ಅಲ್ಲಗಳೆದಿದ್ದು, ಸಂಬಂಧಿಕರು ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದಿದ್ದಾರೆ. ಸದ್ಯ ಈ ಪ್ರಕರಣ ಪೊಲೀಸ್​ ಠಾಣೆಯ ಮೆಟ್ಟಿಲೇರಿದ್ದು, ವಿಚಾರಣೆ ನಡೆಯುತ್ತಿದೆ.(ಏಜೆನ್ಸೀಸ್​)
ಲಿವ್ ಇನ್ ಸಂಗಾತಿ ಕೊಂದು ಶವ ಫ್ರಿಜ್​ನಲ್ಲಿಟ್ಟ ಕೇಸ್: ಆರೋಪಿಗೆ ಕಾನ್​​ಸ್ಟೇಬಲ್​ ನೆರವು, ಸ್ಫೋಟಕ ಮಾಹಿತಿ ಬಯಲು

ಗಾಡಿ ಹರಾಜು ಗೋಲ್ಮಾಲ್: ವಾಹನ ಸಿಕ್ಕರೂ ಮಾಲೀಕರಿಗೆ ಕೊಡಲ್ಲ! ಪೊಲೀಸರ ಕಳ್ಳಾಟ ಬಯಲು

ವಿಧಾನಸೌಧ ಬಳಿ 10 ಲಕ್ಷ ರೂ. ಹಣ ಪತ್ತೆ ಪ್ರಕರಣ: ಕೊನೆಗೂ ಹಣದ ಪತ್ತೆ ಹಚ್ಚಿದ ಪೊಲೀಸರು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × three =
Remember me
