ನವದೆಹಲಿ:ಅಯೋಧ್ಯೆಯಲ್ಲಿ ಜ.22ರಂದು ಶ್ರೀರಾಮ ದೇವರ ಪ್ರಾಣಪ್ರತಿಷ್ಠೆಗೆ ಸಕಲ ತಯಾರಿ ನಡೆಯುತ್ತಿದ್ದರೆ ಈ ಸಂದರ್ಭವನ್ನು ಸ್ಮರಣೀಯ ಆಗಿಸಲು ದೆಹಲಿಯ ದೇವಸ್ಥಾನಗಳೂ ಸಜ್ಜಾಗುತ್ತಿವೆ. ಪ್ರಾಣಪ್ರತಿಷ್ಠೆ ದಿನವನ್ನು ದೀಪಾವಳಿ ರೀತಿ ಆಚರಿಸಲು ಜನರು ಮನೆಗಳಲ್ಲಿ ವಿಶೇಷ ದೀಪಗಳನ್ನು ಬೆಳಗಿಸುವಂತೆ ಪ್ರಧಾನಿ ಮೋದಿ ಮನವಿ ಮಾಡಿರುವುದರಿಂದ ದೆಹಲಿಯ ದೇವಾಲಯಗಳು ಈಗಾಗಲೇ ದೀಪ-ಹೂವುಗಳ ಅಲಂಕಾರಗಳಿಂದ ನಳನಳಿಸುತ್ತಿವೆ.
ದೇವಾಲಯದಲ್ಲಿ ದೀಪಾವಳಿ ಆಚರಿಸಲಾಗುವುದು, ಭೋಜನಶಾಲೆಯನ್ನೂ ತೆರೆಯಲಾಗುವುದು ಎಂದು ದಿಲ್ಲಿಯ ಜಂಡೇವಾಲಾ ಮಂದಿರದ ಟ್ರಸ್ಟಿ ರವೀಂದರ್ ಗೋಯಲ್ ತಿಳಿಸಿದ್ದಾರೆ. ಅಸೋಲಾದಲ್ಲಿರುವ ಶ್ರೀಸಿದ್ಧ ಶಕ್ತಿಪೀಠದ ಶನಿಧಾಮ ಮಂದಿರದೊಳಗೆ ದೇವಾಲಯ ನಿರ್ಮಾಣ ಆಗುತ್ತಿದ್ದು, ಜ.22ರ ಅಯೋಧ್ಯೆಯ ಮೂರ್ತಿ ಪ್ರತಿಷ್ಠಾಪನಾ ಸಮಾರಂಭದ ಜತೆಗೆ ಶ್ರೀರಾಮನ ವಿಗ್ರಹ ಇಲ್ಲೂ ಪ್ರತಿಷ್ಠಾಪಿಸಲಾಗುವುದು ಎಂದು ದೇಗುಲದ ದಾತಿ ಮಹಾರಾಜ್ ಮಾಹಿತಿ ನೀಡಿದ್ದಾರೆ.
ದಿಲ್ಲಿ ಲೋಧಿ ರಸ್ತೆಯ ಶ್ರೀರಾಮ ಮಂದಿರ ದೇವಸ್ಥಾನದ ವಕ್ತಾರ ಅಜಿತ್ ಝಾ ಮಾತನಾಡಿ, ದೇವಸ್ಥಾನದಲ್ಲಿರುವ ವಿಗ್ರಹಗಳನ್ನು ಹೂವಿನಿಂದ ಅಲಂಕರಿಸಿ ಬೆಳಗ್ಗೆ-ಸಂಜೆ ಪ್ರಾರ್ಥನಾ ಕಾರ್ಯಕ್ರಮ ನಡೆಸಲಾಗುವುದು ಎಂದಿದ್ದಾರೆ. ಜ.22ರಂದು ವಿಶೇಷ ಪ್ರಾರ್ಥನೆ ನಡೆಸುವ ಬಗ್ಗೆ ದಿಲ್ಲಿಯ ಕಲ್ಕಾಜೀ ದೇವಸ್ಥಾನ ಸಮಿತಿ ಜ.12ರಂದು ಸಭೆ ನಡೆಸಲಿದೆ.
ಇಕ್ಬಾಲ್ ಅನ್ಸಾರಿಗೆ ಆಹ್ವಾನ:ರಾಮಜನ್ಮಭೂಮಿ-ಬಾಬರಿ ಮಸೀದಿ ಪ್ರಕರಣದಲ್ಲಿ ಅರ್ಜಿದಾರರಾಗಿದ್ದ ಇಕ್ಬಾಲ್ ಅನ್ಸಾರಿಗೆ ಪ್ರಾಣಪ್ರತಿಷ್ಠೆ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ. ಅಯೋಧ್ಯೆ ರಾಮಪಥದ ಬಳಿ ಇರುವ ಕೋಟಿಯಾ ಪಂಜಿತೋಲಾದ ಅವರ ಮನೆಗೆ ಆಮಂತ್ರಣ ತಲುಪಿಸಲಾಗಿದೆ ಎಂದು ಪುತ್ರಿ ಶಮಾ ಪರ್ವೀನ್ ಹೇಳಿದ್ದಾರೆ. ಅನ್ಸಾರಿ ಸುಪ್ರೀಂಕೋರ್ಟ್ ತೀರ್ಪನ್ನು ಸ್ವಾಗತಿಸಿದ್ದು, ಮಂದಿರ ನಿರ್ವಣಕ್ಕೆ ತಕರಾರಿಲ್ಲ ಎಂದಿದ್ದರು. ಮೋದಿ-ಯೋಗಿ ಸರ್ಕಾರದ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸಿದ್ದರು.
ಅಂತಾರಾಷ್ಟ್ರೀಯ ಸ್ಥಾನಮಾನ:ಅಯೋಧ್ಯೆ ಏರ್​ಪೋರ್ಟ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಆಗಿ ಘೊಷಿಸುವ ಪ್ರಸ್ತಾವಕ್ಕೆ ಪ್ರಧಾನಿ ನೇತೃತ್ವದ ಕೇಂದ್ರ ಕ್ಯಾಬಿನೆಟ್ ಒಪ್ಪಿಗೆ ಸೂಚಿಸಿದೆ. ಕಳೆದ ಡಿ.30ರಂದು ಮೋದಿ ಉದ್ಘಾಟಿಸಿದ್ದ ಈ ನಿಲ್ದಾಣಕ್ಕೆ ‘ಮಹರ್ಷಿ ವಾಲ್ಮೀಕಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಅಯೋಧ್ಯಾ ಧಾಮ’ ಎಂದು ನಾಮಕರಣ ಮಾಡಿ ಮಹರ್ಷಿ ವಾಲ್ಮೀಕಿಗೆ ಗೌರವ ಸಲ್ಲಿಸಲಾಗಿದೆ. ಇದರಿಂದ ವಿಮಾನ ನಿಲ್ದಾಣದ ಗುರುತಿಗೆ ಸಾಂಸ್ಕೃತಿಕ ಸ್ಪರ್ಶ ಸಿಕ್ಕಿದೆ ಎಂದು ಕೇಂದ್ರ ಹೇಳಿದೆ.
ತಿರುಪತಿಯಿಂದ 1 ಲಕ್ಷ ಲಡ್ಡು ವಿತರಣೆ:ತಿರುಪತಿ ಶ್ರೀವೆಂಕಟೇಶ್ವರ ದೇವಸ್ಥಾನದ ಟಿಟಿಡಿ ಸಂಸ್ಥೆ ಅಯೋಧ್ಯೆ ರಾಮಮಂದಿರದ ಪ್ರತಿಷ್ಠಾಪನಾ ಕಾರ್ಯಕ್ರಮಕ್ಕೆ 1 ಲಕ್ಷ ಲಡ್ಡುಗಳನ್ನು ಪೂರೈಸಲಿದೆ. ಪ್ರಾಣಪ್ರತಿಷ್ಠೆ ವೇಳೆ ಬರುವ ಯಾತ್ರಿಕರಿಗಾಗಿ ತಲಾ 25 ಗ್ರಾಂ ತೂಕದ 1 ಲಕ್ಷ ಲಡ್ಡುಗಳನ್ನು ವಿತರಿಸಲಾಗುವುದು ಎಂದು ಟಿಟಿಡಿ ಕಾರ್ಯನಿರ್ವಾಹಕ ಅಧಿಕಾರಿ ಎ.ವಿ.ಧರ್ಮರೆಡ್ಡಿ ತಿಳಿಸಿದ್ದಾರೆ.
ಅಯೋಧ್ಯೆಯಲ್ಲಿ ಬಿಲ್ಡರ್​ಗಳ ಸಮ್ಮೇಳನ:ರಾಮಮಂದಿರ ಲೋಕಾರ್ಪಣೆ ಬಳಿಕ ಅಯೋಧ್ಯೆ ಲಕ್ಷಾಂತರ ಪ್ರವಾಸಿಗರನ್ನು ಆಕರ್ಷಿಸಲು ಸಜ್ಜಾಗುತ್ತಿರುವಂತೆ, ವಾಣಿಜ್ಯ-ವಸತಿ ಅವಕಾಶಗಳನ್ನು ಬಳಸಿಕೊಳ್ಳಲು ಅಯೋಧ್ಯೆಯಲ್ಲಿ ಬಿಲ್ಡರ್​ಗಳ ಸಮ್ಮೇಳನ ನಡೆಸಲು ರಿಯಲ್ ಎಸ್ಟೇಟ್ ಸಂಸ್ಥೆ ನರೆಡ್ಕೋ (ರಾಷ್ಟ್ರೀಯ ರಿಯಲ್ ಎಸ್ಟೇಟ್ ಅಭಿವೃದ್ಧಿ ಮಂಡಳಿ) ತೀರ್ವನಿಸಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − 13 =
Remember me
