ವಾಷಿಂಗ್ಟನ್​:ದೀಪಾವಳಿಯ ಹಬ್ಬಕ್ಕೆ ಭಾರತದಾದ್ಯಂತ ಮತ್ತು ಭಾರತೀಯರಿರುವೆಡೆಯೆಲ್ಲಾ ದೀಪ ಬೆಳಗಿಸುವ ಸಂಪ್ರದಾಯ ಹರಡಿದೆ. ಈ ಬಾರಿಯ ವಿಶೇಷವೆಂದರೆ ಅಮೆರಿಕದ ಅಧ್ಯಕ್ಷ ಜೋ ಬಿಡೆನ್​ ಕೂಡ ತಮ್ಮ ಭವ್ಯ ನಿವಾಸದಲ್ಲಿ ಜ್ಯೋತಿ ಬೆಳಗಿ ದೀಪಾವಳಿಯ ಶುಭಾಶಯ ಕೋರಿದ್ದಾರೆ.
“ದೀವಾಲಿಯ ಬೆಳಕು ನಮಗೆ ಕತ್ತಲಿನಿಂದ ಜ್ಞಾನ, ಬುದ್ಧಿ ಮತ್ತು ಸತ್ಯಗಳಿವೆ, ವಿಭಜನೆಯ ಜೊತೆಗೆ ಏಕತೆ ಇದೆ, ಹತಾಶೆಯ ನಡುವೆ ಆಶಾಭಾವವಿದೆ ಎಂದು ನೆನಪಿಸಲಿ” ಎಂದು ಬಿಡೆನ್​ ಗುರುವಾರದಂದು ಟ್ವೀಟ್ ಮಾಡಿ ಹಾರೈಸಿದ್ದಾರೆ. “ಅಮೆರಿಕ ಮತ್ತು ಜಗತ್ತಿನೆಲ್ಲೆಡೆ ಹಬ್ಬ ಆಚರಿಸುತ್ತಿರುವ ಹಿಂದೂಗಳು, ಸಿಖ್ಖರು, ಜೈನರು ಮತ್ತು ಬೌದ್ಧಧರ್ಮೀಯರಿಗೆ – ಪೀಪಲ್ಸ್​ ಹೌಸ್​ನಿಂದ ನಿಮ್ಮ ಮನೆಗೆ – ದೀಪಾವಳಿ ಶುಭಾಶಯಗಳು” ಎಂದು ಶುಭ ಕೋರಿದ್ದಾರೆ.
May the light of Diwali remind us that from darkness there is knowledge, wisdom, and truth. From division, unity. From despair, hope.
To Hindus, Sikhs, Jains, and Buddhists celebrating in America and around the world — from the People’s House to yours, happy Diwali.pic.twitter.com/1ubBePGB4f
— President Biden (@POTUS)November 4, 2021

ಈ ಟ್ವಿಟರ್​ ಸಂದೇಶದೊಂದಿಗೆ ಅಮೆರಿಕದ 46ನೇ ಅಧ್ಯಕ್ಷರಾದ ಬಿಡೆನ್​, ತಾವು ಮತ್ತು ಪತ್ನಿ ಜಿಲ್​ ಬಿಡೆನ್​​ ತಮ್ಮ ಅಧಿಕೃತ ನಿವಾಸ ವೈಟ್​ ಹೌಸಿನಲ್ಲಿ ಹೂವಿನ ರಂಗೋಲಿ​ಯ ಮಧ್ಯದಲ್ಲಿರಿಸಿದ ದೀಪಗಳನ್ನು ಬೆಳಗಿಸುತ್ತಿರುವ ಫೋಟೋ ಶೇರ್​ ಮಾಡಿಕೊಂಡಿದ್ದಾರೆ. ಬಿಡೆನ್​​ರ ಈ ಪೋಸ್ಟ್​ಗೆ ಅದಾಗಲೇ ಒಂದೂವರೆ ಲಕ್ಷಕ್ಕಿಂತ ಹೆಚ್ಚು ಲೈಕುಗಳು ಲಭಿಸಿವೆ.(ಏಜೆನ್ಸೀಸ್)
ಹಾನಗಲ್​​ ಗೆಲುವು 2023ರ ಗೆಲುವಿನ ಪ್ರಾರಂಭ ಎಂದ ಡಿಕೆಶಿ

ಪ್ರೀತಿಸಿದ ಯುವಕನೊಂದಿಗೆ ಓಡಿಹೋಗಿ ಮದುವೆಯಾಗಿದ್ದ ಯುವತಿ ಶವವಾಗಿ ಪತ್ತೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × two =
Remember me
