ಚೆನ್ನೈ:ಕರ್ನಾಟಕ ರಾಜಕೀಯದಲ್ಲಿ ಭಾರೀ ಸುದ್ದಿಯಲ್ಲಿದ್ದ ಸಿಡಿ ಕೇಸ್​ನಲ್ಲಿ ಮಹತ್ತರ ತಿರುವು ಸಿಕ್ಕಿದೆ. ಸಂತ್ರಸ್ತೆ ಎನ್ನಲಾದ ಯುವತಿಯ ಪೋಷಕರು ಮಾಧ್ಯಮದ ಮುಂದೆ ಬಂದು, ಕಾಂಗ್ರೆಸ್​ ನಾಯಕ ಡಿಕೆ ಶಿವಕುಮಾರ್​ ಅವರೇ ತಮ್ಮ ಮಗಳನ್ನು ಒತ್ತಾಯಾಳಾಗಿಟ್ಟುಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ. ಆದರೆ ಸದ್ಯ ಈ ಆರೋಪವನ್ನು ಕೇಳಲು ಡಿಕೆಶಿ ಕರ್ನಾಟಕದಲ್ಲಿಲ್ಲ. ಡಿಕೆಶಿ ಮತ್ತು ಸಿದ್ದರಾಮಯ್ಯ ಅವರ ಜೋಡಿ, ನೆರೆಯ ತಮಿಳುನಾಡಿನಲ್ಲಿ ಸಿಪಿಐ ಪರ ಪ್ರಚಾರದಲ್ಲಿ ಬಿಜಿಯಾಗಿದೆ.
ಹೌದು. ಇಂದು ಡಿಕೆ ಶಿವಕುಮಾರ್​ ಮತ್ತು ಸಿದ್ದರಾಮಯ್ಯ ಅವರು ತಮಿಳುನಾಡಿನ ಥಳಿ ಕ್ಷೇತ್ರಕ್ಕೆ ತೆರಳಿದ್ದಾರೆ. ಅಲ್ಲಿ ಸಿಪಿಐ ಪರವಾಗಿ ಚುನಾವಣೆಗೆ ನಿಂತಿರುವ ಕಾಂಗ್ರೆಸ್ ಬೆಂಬಲಿತ ಸಿಪಿಐ ಅಭ್ಯರ್ಥಿ ರಾಮಚಂದ್ರನ್ ಪರ ಪ್ರಚಾರ ಮೆರವಣಿಗೆಯಲ್ಲಿ ಭಾಗವಹಿಸಿದ್ದಾರೆ. ಡೆಂಕಣಿಕೋಟೆ ನಗರದಲ್ಲಿ ಮೆರವಣಿಗೆ ನಡೆದಿದೆ.
ಮೆರವಣಿಗೆಯಲ್ಲಿ ಕಾಂಗ್ರೆಸ್​ ನಾಯಕರು ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ. ರಾಜ್ಯದಲ್ಲಿ ಅಭಿವೃದ್ಧಿಯಾಗಬೇಕೆಂದರೆ ನೀವು ಸಿಪಿಐ ಅನ್ನು ಬೆಂಬಲಿಸಲೇಬೇಕು. ಇಲ್ಲಿನ ಬಡವರು ಉದ್ಧಾರ ಆಗಬೇಕೆನ್ನುವುದಾದರೆ ಅಭ್ಯರ್ಥಿ ಟಿ.ರಾಮಚಂದ್ರನ್ ಅನ್ನು ಗೆಲ್ಲಿಸಿ ಎಂದು ಹೇಳಿದ್ದಾರೆ. ಈ ರೋಡ್​ ಶೋನಲ್ಲಿ ಸಂಸದ ಚೆಲ್ಲಕುಮಾರ್​, ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ, ಮಾಜಿ ಸಚಿವರಾದ ಎಚ್​.ಎಂ ರೇವಣ್ಣ, ಜಮೀರ್ ಅಹಮದ್ ಸೇರಿ ಅನೇಕರು ಭಾಗವಹಿಸಿದ್ದರು.
ತಮ್ಮ ಬಗ್ಗೆ ಬಂದಿರುವ ಆರೋಪದ ಬಗ್ಗೆ ಪ್ರತಿಕ್ರಿಯಿಸಿರುವ ಡಿಕೆಶಿ, ಆ ಹುಡುಗಿಗೂ ನನಗೂ ಯಾವುದೇ ಪರಿಚಯ ಇಲ್ಲ. ಇದು ಅವರ ವೈಯಕ್ತಿಕ ಸಮಸ್ಯೆ, ಅವರೇ ಬಗೆಹರಿಸಿಕೊಳ್ಳಲಿ.. ನನಗೆ ಇಂತಹ ಹೊಲಸು ರಾಜಕೀಯದ ಅವಶ್ಯಕತೆ ಇಲ್ಲ. ಕಾನೂನಿದೆ, ಸರ್ಕಾರವಿದೆ.. ತನಿಖೆ ನಡೆಯಲಿ. ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ ಎಂದು ಅವರು ಹೇಳಿದ್ದಾರೆ. (ಏಜೆನ್ಸೀಸ್​)
ಗಂಡನ ದೇಹದಲ್ಲಿ ಲವ್​ ಬೈಟ್​ ನೋಡಿ ಜಗಳವಾಡಿದ ಹೆಂಡತಿ! ತಾಯಿ, ಸಹೋದರನ ವಿರುದ್ಧ ದೂರು ದಾಖಲಿಸಿದ ಗಂಡ!

VIDEO| ಬಾಡಿ ಬಿಲ್ಡ್​ ಮಾಡುವವರೇ ಹುಷಾರ್​! ಚೂರು ಹೆಚ್ಚು ಕಡಿಮೆಯಾದರೂ ನಿಮ್ಮ ಜೀವಕ್ಕೇ ಕುತ್ತು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − one =
Remember me
