ಚೆನ್ನೈ :ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ದ್ರಾವಿಡ ಮುನ್ನೇತ್ರ ಕಜಗಮ್​ (ಡಿಎಂಕೆ) ಅಭ್ಯರ್ಥಿಯಾಗಿರುವ ದಿಂಡಿಗುಲ್ ಲಿಯೋನಿ ಮಹಿಳೆಯರ ಬಗ್ಗೆ ಅವಮಾನಕರ ಹೇಳಿಕೆ ನೀಡಿ ನೆಟ್ಟಿಗರ ಕೋಪಕ್ಕೆ ತುತ್ತಾಗಿದ್ದಾರೆ. ಡಿಎಂಕೆ ಪರ ಚುನಾವಣಾ ಪ್ರಚಾರ ಮಾಡುವ ಸಂದರ್ಭದಲ್ಲಿ ಮಹಿಳೆಯರ ದೇಹದ ಆಕಾರದ ಬಗ್ಗೆ ವ್ಯಂಗ್ಯವಾಗಿ ಮಾತನಾಡಿರುವ ಅವರ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಮಹಿಳೆಯರನ್ನು ಹಸುಗಳಿಗೆ ಹೋಲಿಸಿದ್ದಲ್ಲದೆ, ಈಗಿನ ಕಾಲದ ಮಹಿಳೆಯರು ವಿದೇಶೀ ಹಸುಗಳ ಹಾಲು ಕುಡಿದು ದಪ್ಪಗಾಗಿಬಿಟ್ಟಿದ್ದಾರೆ. ಮುಂಚಿನ ಕಾಲದ ಹೆಂಗಸರ ನಡು ಸಂಖ್ಯೆ 8 ರಂತೆ ಬಳುಕುವಂತಿರುತ್ತಿತ್ತು. ಈಗಿನವರದು ಡ್ರಮ್ಮಿನ ತರಹ ಆಗಿದೆ ಎಂದು ಅಪಹಾಸ್ಯ ಮಾಡಿ ಮಾತನಾಡಿದ್ದಾರೆ, ಲಿಯೋನಿ. ಇವರು ಮಹಿಳೆಯರನ್ನು ಹೀಗಳೆಯುವ ಮಾತುಗಳನ್ನಾಡಿರುವುದು ಇದೇ ಮೊದಲಲ್ಲ ಎನ್ನಲಾಗಿದೆ.
ಇದನ್ನೂ ಓದಿ:“ಪೆಟ್ಟು ಬಿದ್ದ ಹುಲಿ ಹೆಚ್ಚು ಅಪಾಯಕಾರಿ” : ಮಮತಾ ಬ್ಯಾನರ್ಜಿ ಎಚ್ಚರಿಕೆ
ವಿಶ್ಮಾತ್ಮ ಎಂಬುವರು ತಮ್ಮ ಟ್ವಿಟರ್ ಖಾತೆಯಲ್ಲಿ ಲಿಯೋನಿ ಅವರ ಭಾಷಣದ ತುಣುಕನ್ನು ಶೇರ್ ಮಾಡಿ, “ಡಿಎಂಕೆ ಅಧ್ಯಕ್ಷರೇ, ಮಹಿಳೆಯರ ಸುರಕ್ಷತೆ ಬಗ್ಗೆ ಮಾತಾಡುವ ಮುಂಚೆ ಇಂಥ ನಾಯಕರನ್ನು ಪಕ್ಷದಿಂದ ಹೊರಹಾಕಿ” ಎಂದಿದ್ದಾರೆ.
.@KanimozhiDMKMadame please get rid of womanizers like Dindigul Leoni, Vairamuthu etc in your party before you talk about women's safety..pic.twitter.com/cVkGCQ8eGi— Vishwatma 🇮🇳 (@HLKodo)March 24, 2021
.@KanimozhiDMKMadame please get rid of womanizers like Dindigul Leoni, Vairamuthu etc in your party before you talk about women's safety..pic.twitter.com/cVkGCQ8eGi

ತಮಿಳಿನಲ್ಲಿ ಮಾತನಾಡಿರುವ ಲಿಯೋನಿ, “ಮಹಿಳೆಯರು ಈಗ ವಿದೇಶೀ ಹಸುಗಳ ಹಾಲು ಕುಡಿಯುತ್ತಿದ್ದಾರೆ. ಅವರು ಹೆಚ್ಚು ತೂಕ ಗಳಿಸಿರುವುದಕ್ಕೆ ಇದೇ ಕಾರಣ. ಆ ಕಾಲದಲ್ಲಿ ಮಹಿಳೆಯ ಸೊಂಟ ನಂಬರ್ 8 ಅನ್ನು ಹೋಲುತ್ತಿತ್ತು. ಮಗುವನ್ನು ಎತ್ತಿಕೊಂಡರೆ ಅದು ಸೊಂಟದ ಮೇಲೆ ಹಾಗೇ ಕೂರುತ್ತಿತ್ತು. ಈಗ ಅವರು ಡ್ರಮ್ಮಿನಂತೆ ಆಗಿದ್ದಾರೆ. ಆದ್ದರಿಂದ ತಮ್ಮ ಮಕ್ಕಳನ್ನು ಸೊಂಟದ ಮೇಲೆ ಎತ್ತಿಕೊಳ್ಳಲಾಗುತ್ತಿಲ್ಲ” ಎಂದಿದ್ದಾರೆ.
ಇದನ್ನೂ ಓದಿ:ಈ ಹೆಣ್ಣು ಶಾರ್ಕ್​ನ ವಯಸ್ಸು ಕೇವಲ 392 ವರ್ಷ !
ಇದು ಯಾವ ರೀತಿಯ ಪ್ರಚಾರ ಭಾಷಣ ಎಂದು ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ. ಬಿಜೆಪಿ ನಾಯಕಿ ಗಾಯತ್ರಿ ರಘುರಾಮ್ ಅವರು, “ಎಂತಹ ನಾಚಿಕೆಯ ವಿಷಯ. ಅವರು ಯಾವ ಹಾಲು ಕುಡಿಯುತ್ತಾರಂತೆ ? ಡಿಎಂಕೆ ಪಕ್ಷದ ಜನರು ಮಹಿಳೆಯರಿಗೆ ತೋರಿಸುವ ಗೌರವ ಇದೇನಾ ?” ಎಂದು ಪ್ರಶ್ನಿಸಿದ್ದಾರೆ.(ಏಜೆನ್ಸೀಸ್)
‘ಸದನದ ಘನತೆ ಹರಾಜು ಹಾಕುವುದು ತಪ್ಪು’ : ಸುಧಾಕರ್ ಹೇಳಿಕೆಗೆ ಶಾಸಕಿಯರ ಅಸಮಾಧಾನ
ಬಾಲಿವುಡ್ ನಟ ಆಮೀರ್ ಖಾನ್​ಗೆ ಕರೊನಾ ಸೋಂಕು
ದೀದಿಗೆ ಸೀರೆ ಬಿಟ್ಟು ಬರ್ಮುಡಾ ಧರಿಸಲು ಹೇಳಿದ ಪಶ್ಚಿಮ ಬಂಗಾಳ ಬಿಜೆಪಿ ಅಧ್ಯಕ್ಷ!


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 4 =
Remember me
